ಮಡಿಕೇರಿ, ಏ. ೨: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ಕ್ಕೆ ಸಂಬAಧಿಸಿದAತೆ ೨೦೮ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದ ಮತಗಟ್ಟೆ ಅಧಿಕಾರಿಗಳಿಗೆ ನೇಮಕಾತಿ ಆದೇಶ ಜಾರಿ ಮಾಡಲಾಗಿದೆ.

೨೧ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಮತಗಟ್ಟೆ ಅಧಿಕಾರಿಗಳು ನಮೂನೆ ೧೨ಎ ರಲ್ಲಿ ಹಾಗೂ ಈ ಕ್ಷೇತ್ರದ ಹೊರಗೆ ಇತರೆ ಲೋಕಸಭಾ ಕ್ಷೇತ್ರದ ಅಧಿಕಾರಿಗಳು ನಮೂನೆ ೧೨ ರಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ನೇಮಕಾತಿ ಆದೇಶದ ಪ್ರತಿಯೊಂದಿಗೆ ತಾ. ೪ ರೊಳಗೆ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿನ ಅಧಿಕಾರಿಗಳು ತಾಲೂಕು ಕಚೇರಿ ಮಡಿಕೇರಿ ಇಲ್ಲಿ (ಬೇಬಿ, ತಾಲೂಕು ಕಚೇರಿ ಸಿಬ್ಬಂದಿ ಮೊಬೈಲ್ ಸಂಖ್ಯೆ ೮೭೬೨೬೪೮೧೫೧) ಅವರ ಬಳಿ ಹಾಗೂ ಕುಶಾಲನಗರ ತಾಲೂಕು ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳು ಕುಶಾಲನಗರ ತಾಲೂಕು ಕಚೇರಿ ಹಾಗೂ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳು ಸೋಮವಾರಪೇಟೆ ತಾಲೂಕು ಕಚೇರಿಗೆ ಅಂಚೆ ಮತದಾನಕ್ಕಾಗಿ ನಮೂನೆ ೧೨ ಮತ್ತು ಇಡಿಸಿಗಾಗಿ ೧೨ಎ ಅನ್ನು ನೀಡುವಂತೆ ತಹಶೀಲ್ದಾರ್ ರಮೇಶ್ ಬಾಬು ಕೋರಿದ್ದಾರೆ.