ಸಿದ್ದಾಪುರ, ಏ. ೨: ವಿರೂಪಾಕ್ಷಪುರ ರಂಗಸಮುದ್ರ ಗ್ರಾಮದ ಶ್ರೀ ಕುರುಂಬ ಭಗವತಿ ದೇವಸ್ಥಾನದ ೨೬ನೇ ವಾರ್ಷಿಕ ಭರಣಿ ಮಹೋತ್ಸವ ತಾ.೬ ರಂದು ನಡೆಯಲಿದೆ. ಉತ್ಸವದ ಅಂಗವಾಗಿ ಏಪ್ರಿಲ್ ೬ ರಂದು ಬೆಳಿಗ್ಗೆ ೯:೩೦ ಕ್ಕೆ ನಾಗದೇವರಿಗೆ ಅಲಂಕಾರ ಪೂಜೆ, ೧೧:೩೦ ಕ್ಕೆ ಮಹಾಮಂಗಳಾರತಿ, ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೫ ಗಂಟೆಗೆ ತಾಲಪೊಲಿ, ೭ ಗಂಟೆಗೆ ದೇವಿ ದರ್ಶನ, ೮:೩೦ ಕ್ಕೆ ಮಹಾ ಮಂಗಳಾರತಿ, ನಂತರ ಅನ್ನಸಂತರ್ಪಣೆ. ರಾತ್ರಿ ೧೦ ಗಂಟೆಗೆ ಗುರುದಿ ಪೂಜೆ ನಡೆಯಲಿದೆ ಎಂದು ವಿ.ಕೆ. ನಾರಾಯಣ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.