ನಾಪೋಕ್ಲು, ಏ. ೨: ಪಟ್ಟಣ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಅಲ್ಪ ಪ್ರಮಾಣದ ಮಳೆಯಾಗಿದೆ . ಮಧ್ಯಾಹ್ನ ೩.೩೦ರ ವೇಳೆಗೆ ೧೫ ನಿಮಿಷಗಳ ಕಾಲ ಮಳೆ ಸುರಿಯಿತು.

ಪಟ್ಟಣವು ಸೇರಿದಂತೆ ಹಳೆ ತಾಲೂಕು, ಎಮ್ಮೆಮಾಡು, ಬಲ್ಲಮಾವಟಿ, ನೆಲಜಿ, ಕೊಳಕೇರಿ ಗ್ರಾಮೀಣ ಪ್ರದೇಶದಲ್ಲಿ ೧೦ ರಿಂದ ೪೦ ಸೆಂಟ್ ವರೆಗೆ ಮಳೆಯಾಗಿದೆ.

ಬಲ್ಲಮಾವಟಿ ವ್ಯಾಪ್ತಿಯಲ್ಲಿ ಬಿಸಿಲ ಧಗೆಗೆ ಕಾಫಿ ಗಿಡದಲ್ಲಿದ್ದ ಹೂಗಳು ಒಣಗಿ ಕೆಂಪಗಾಗಿದ್ದು, ಕಾಫಿ ಬೆಳೆಗಾರರು ಆಂತAಕದಲ್ಲಿ ಇದ್ದರು.

ವಾರದ ಹಿಂದೆ ಬಲ್ಲಮಾವಟಿ, ಪೇರೂರು ಗ್ರಾಮ ವ್ಯಾಪ್ತಿಗಳಲ್ಲಿ ಮಳೆಯಾಗಿತ್ತು. ಇದೀಗ ಸಾಧಾರಣ ಮಳೆಯಾಗಿ ಸ್ವಲ್ಪ ಮಟ್ಟಿಗೆ ಭೂಮಿ ತಂಪಾಯಿತು.