ಮಡಿಕೇರಿ, ಏ. ೨: ಕೊಡಗು ಗೌಡ ಯುವ ವೇದಿಕೆಯು ಸುದೀರ್ಘ ೨೫ನೇ ವರ್ಷದ ಗೌಡ ಕ್ರೀಡಾಕೂಟದ ಬೆಳ್ಳಿಹಬ್ಬ ಸಂದರ್ಭದಲ್ಲಿ ಗೌಡ ಲೆದರ್ ಬಾಲ್ ಸೀಸನ್-೨ ಅನ್ನು ತಾ. ೧೭ ರಿಂದ ೨೮ ವರೆಗೆ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದೆ. ತಾ.೨೭ ಮತ್ತು ೨೮ ರಂದು ಗೌಡ ಮಹಿಳೆಯರಿಗಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ನಡೆಯಲಿದೆ ಎಂದು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲೆದರ್‌ಬಾಲ್ ಕ್ರಿಕೆಟ್‌ನಲ್ಲಿ ೧೦ ಫ್ರಾಂಚೈಸಿ ತಂಡಗಳು ಪಾಲ್ಗೊಳ್ಳುತ್ತಿವೆ, ಈ ಪಂದ್ಯಾವಳಿಗಳ ಬಿಡ್ಡಿಂಗ್ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಎಲ್ಲಾ ಪಂದ್ಯಾಟಗಳು ಯೂಟ್ಯೂಬ್‌ನಲ್ಲಿ ನೇರ ಪ್ರಸಾರವಾಗಲಿವೆ. ಅದಲ್ಲದೆ ಮೈದಾನದಲ್ಲಿ ಡಿಜಿಟಲ್ ಎಲ್‌ಇಡಿ ಸ್ಕೋರ್ ಬೋರ್ಡನ್ನು ಅಳವಡಿಸಲಾಗುವುದು.

ತಾ. ೨೭ ಮತ್ತು ೨೮ ರಂದು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲಿ ಮೊದಲಿಗೆ ಗ್ರಾಮವಾರು ಸಾಂಸ್ಕೃತಿಕ ಪೈಪೋಟಿ ನಡೆಯಲಿದ್ದು ಹೆಸರು ನೊಂದಾಯಿಸಿಕೊಳ್ಳಲು ತಾ.೨೨ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಗದೀಶ್ ಮಂದಪ್ಪ ತಿಳಿಸಿದರು.

ಕ್ರೀಡಾಕೂಟ ಮುಗಿದ ನಂತರ ಕೊಡಗು ಗೌಡ ಯುವ ವೇದಿಕೆಯ ೨೫ ವರ್ಷ ಸಂಭ್ರಮದ ಸ್ಮರಣ ಸಂಚಿಕೆ ಹೊರ ತರಲಾಗುತ್ತದೆ. ಈ ಸ್ಮರಣ ಸಂಚಿಕೆಯಲ್ಲಿ ಗೌಡ ಜನಾಂಗದ ಇತಿಹಾಸ ಆಚಾರ ವಿಚಾರಗಳು ಮತ್ತು ಗೌಡ ಜನಾಂಗದ ಮೊಬೈಲ್ ಫೋನ್ ಡೈರೆಕ್ಟರಿ ಹಾಗೂ ಪ್ರಾಯೋಜಕರ ಫೋಟೋಗಳು ಮತ್ತು ಪ್ರಾಯೋಜಕ ಸಂಸ್ಥೆಯ ಮಾಹಿತಿಯನ್ನು ಹಾಕಲಾಗುವುದು ಎಂದು ಅವರು ಮಾಹಿತಿಯಿತ್ತರು. ಗೌಡ ಯುವ ವೇದಿಕೆ ಕ್ರೀಡಾಧ್ಯಕ್ಷ ಕುಟ್ಟನ ಪ್ರಶಾಂತ್ ಮಾತನಾಡಿ, ಲೆದರ್‌ಬಾಲ್ ಕ್ರಿಕೆಟ್‌ನ ವಿಜೇತ ತಂಡಕ್ಕೆ ರೂ. ೧,೧೧,೧೧೧ ನಗದು, ದ್ವಿತೀಯ ರೂ. ೭೫,೦೦೦, ತೃತೀಯ ರೂ ೬೦,೦೦೦ ಹಾಗೂ ನಾಲ್ಕನೆ ಬಹುಮಾನ ರೂ. ೪೦,೦೦೦ ನಗದು ಹಾಗೂ ಟ್ರೋಫಿ ನೀಡಲಾಗುವುದೆಂದರು.

ಮಹಿಳಾ ಕ್ರಿಕೆಟ್

ತಾ. ೨೭ ಮತ್ತು ೨೮ರಂದು ಆಯೋಜಿಸಲಾಗಿರುವ ಗೌಡ ಮುಕ್ತ ಮಹಿಳಾ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಬಗ್ಗೆ ಮಾಹಿತಿ ನೀಡಿದ ಗೌಡ ಮಹಿಳಾ ಕ್ರಿಕೆಟ್ ಸಂಚಾಲಕಿ ಪುದಿಯನೆರವನ ರೇವತಿ ರಮೇಶ್ ಕೊಡಗು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಜನಾಂಗದ ಮಹಿಳೆಯರಿಗಾಗಿ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ೫ ಓವರ್‌ನ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದರು.

ಗೌಡ ಮಹಿಳಾ ಕ್ರಿಕೆಟ್‌ನ ಗೌರವ ಸಲಹೆಗಾರರಾದ

(ಮೊದಲ ಪುಟದಿಂದ) ಮೂಟೇರ ಪುಷ್ಪಾವತಿ ಮಾತನಾಡಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ೧೦ ಕುಟುಂಬ ೧೮ ಗೋತ್ರದ ಮಹಿಳೆಯರಿಗೆ ಪಂದ್ಯಾಟ ನಡೆಯಲಿದ್ದು, ತಂಡದಲ್ಲಿ ಕನಿಷ್ಟ ೯ ಆಟಗಾರರು ಇರಬೇಕು. ಓವರ್ ಆರ್ಮ್ ಬೌಲಿಂಗ್‌ನೊAದಿಗೆ ಥ್ರೋ ಬೌಲಿಂಗ್‌ಗೂ ಅವಕಾಶವಿರುತ್ತದೆ. ಟೆನ್ನಿಸ್ ಬಾಲ್‌ನ ಇನ್ನಿತರ ಎಲ್ಲಾ ನಿಯಮಗಳನ್ನು ಅಳವಡಿಸಲಾಗುತ್ತದೆ. ಪ್ರಥಮ ಬಹುಮಾನವಾಗಿ ರೂ. ೨೦,೦೦೦, ದ್ವಿತೀಯ ಬಹುಮಾನವಾಗಿ ರೂ.೧೦,೦೦೦ ತೃತೀಯ ಬಹುಮಾನವಾಗಿ ರೂ.೫,೦೦೦ ನೀಡಲಾಗುತ್ತದೆ.

ಜೊತೆಗೆ ಆಕರ್ಷಕ ಟ್ರೋಫಿಗಳು ಮತ್ತು ವೈಯಕ್ತಿಕ ಬಹುಮಾನಗಳಾದ ವುಮೆನ್ ಆಫ್ ದ ಟೂರ್ನಮೆಂಟ್, ವುಮೆನ್ ಆಫ್ ದ ಮ್ಯಾಚ್, ಬೆಸ್ಟ್ ಬ್ಯಾಟರ್, ಬೆಸ್ಟ್ ವಿಕೆಟ್ ಕೀಪರ್ ಸೇರಿದಂತೆ ಹಲವು ಬಹುಮಾನಗಳನ್ನು ನೀಡಲಾಗುವುದು. ತಂಡಗಳ ನೊಂದಣಿಗಾಗಿ ತಾ.೨೨ರ ಒಳಗಾಗಿ ೭೬೭೬೪೫೨೧೦೭, ೯೬೬೩೨೫೪೮೨೯, ೬೩೬೨೮೧೪೬೫೯ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ವಿವರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಗೌಡ ಮಹಿಳಾ ಕ್ರಿಕೆಟ್‌ನ ಸಹ ಸಂಚಾಲಕರಾದ ಚೊಕ್ಕಾಡಿ ಪ್ರೇಮರಾಘವಯ್ಯ , ದುಗ್ಗಳ ಕಾವ್ಯ ಕಪಿಲ್ ಉಪಸ್ಥಿತರಿದ್ದರು.