ಮಡಿಕೇರಿ, ಏ. ೨ : ಕೊಡವ ಜನಾಂಗದ ಬಗ್ಗೆ ಈ ಹಿಂದೆ ಬ್ರಿಟಿಷರ ಕಾಲದಲ್ಲಿ ಒಂದೆಡೆ ಸದಭಿಪ್ರಾಯಗಳನ್ನು ವ್ಯಕ್ತಪಡಿಸಿ ಪುಸ್ತಕಗಳನ್ನು ಹೊರತರಲಾಗಿದೆ. ಆದರೆ ಇದರ ನಡುವೆಯೇ ಕೆಲವಾರು ತಪ್ಪು ಮಾಹಿತಿ ಅಭಿಪ್ರಾಯಗಳೂ ಇರುವಂತಹ ಇತಿಹಾಸವಿದೆ, ಇದನ್ನು ಸರಿಪಡಿಸುವಂತಹ ಕಾರ್ಯಕ್ಕೆ ಕೊಡವ ಸಮಾಜ, ಸಂಘ-ಸAಸ್ಥೆಗಳು ಕ್ರಿಯಾಶೀಲ ಪ್ರಯತ್ನ ನಡೆಸಬೇಕಿದೆ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಕರೆ ನೀಡಿದ್ದಾರೆ.

ನಗರದ ಕೊಡವ ಸಮಾಜದಲ್ಲಿ ಜರುಗಿದ ದೇಚೂರು ಕೊಡವಕೇರಿ ಸಂಘದ ಬೆಳ್ಳಿಹಬ್ಬದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಾಂಗದ ಬಗ್ಗೆ ತಪ್ಪು ಕಲ್ಪನೆಗೆ ಎಡೆಯಾಗದಂತೆ ಈ ಕೆಲಸ ಮಾಡುವ ಅಗತ್ಯತೆ ಇರುವುದಾಗಿ ಅವರು ಹೇಳಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಾದ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ಮತ್ತು ಅ.ಕೊ.ಸ. ಅಧ್ಯಕ್ಷ ಪರದಂಡ ಸುಬ್ರಮಣಿ ಅವರನ್ನು ಸಂಘದ ಸದಸ್ಯರು ಒಡ್ಡೋಲಗ, ತಳಿಯತಕ್ಕಿಬೊಳಕ್ ಸಹಿತವಾಗಿ ವೇದಿಕೆಗೆ ಕರೆ ತಂದರು. ಸಂಘದ ಅಧ್ಯಕ್ಷ ಮೂವೇರ ಜಯರಾಮ್ ಸೇರಿದಂತೆ ಆಡಳಿತ

ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.