ಮಡಿಕೇರಿ, ಏ. ೨: ದೇಶದ ಗಡಿ ಕಾಯಲು ಸೈನಿಕರು ಶ್ರಮಿಸುತ್ತಿದ್ದಾರೆ. ಅದೇ ರೀತಿ ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಪೊಲೀಸರ ಕಾರ್ಯ ಮಹತ್ತರವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಫೀ.ಮಾ. ಕಾರ್ಯಪ್ಪ ಟ್ರೋಫಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರö್ಯ ಬಂದ ಸಂದರ್ಭ ದೇಶ ವ್ಯವಸ್ಥಿತವಾಗಿರಲಿಲ್ಲ. ಭಾರತ ಭೂಮಿ ಛಿದ್ರಗೊಳ್ಳುತ್ತದೆ ಎಂದು ಇತಿಹಾಸಕಾರರು ವಿಶ್ಲೇಷಿಸಿದ್ದರು. ಆದರೆ, ಭಾರತ ಇಂದಿಗೂ ಒಗ್ಗಟ್ಟಿನಲ್ಲಿದೆ. ಇದಕ್ಕೆ ಪೊಲೀಸರು ಕೂಡ ಕಾರಣ ಎಂಬುದು ಇಲಾಖೆಗೆ ಹೆಗ್ಗಳಿಕೆ ವಿಚಾರ. ನಕ್ಸಲ್ ಚಟುವಟಿಕೆ, ಭಯೋತ್ಪಾದನೆ ಮಟ್ಟಹಾಕಲು, ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಲವು ಪೊಲೀಸರು ಪ್ರಾಣ ತೆತ್ತಿದ್ದಾರೆ. ನೆರೆದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಾನೂನು-ಸುವ್ಯವಸ್ಥೆ ಮಟ್ಟ ಅತ್ಯುತ್ತಮವಾಗಿದೆ. ಮುಂದೆ ಮತ್ತಷ್ಟು ಕೆಲಸಗಳು ನಮ್ಮಿಂದ ಆಗಬೇಕು ಎಂದು ಕರೆ ನೀಡಿದರು.

ಪೊಲೀಸರು ಕ್ಷೇಮಾಭಿವೃದ್ಧಿಗಾಗಿ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ನಿವೃತ್ತ ಸಿಬ್ಬಂದಿಗಳ ಹಿತಕಾಯುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದ್ದೇವೆ.

(ಮೊದಲ ಪುಟದಿಂದ) ಫೀ.ಮಾ. ಕಾರ್ಯಪ್ಪ ಟ್ರೋಫಿ ಪ್ರದಾನ ಮೂಲಕ ಸಿಬ್ಬಂದಿಗಳಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡುತ್ತಿದ್ದೇವೆ. ಆಡಳಿತ, ಮೇಲ್ವಿಚಾರಣೆಯನ್ನು ಉನ್ನತ ಅಧಿಕಾರಿಗಳು ಮಾಡುತ್ತಾರೆ. ಕೆಳಹಂತದ ಸಿಬ್ಬಂದಿಗಳು ತನಿಖೆಯ ಎಲ್ಲಾ ಆಯಾಮದಲ್ಲಿಯೂ ಕೆಲಸ ಮಾಡಿ ಅಪರಾಧ ಪ್ರಕರಣ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ೨೦೨೨ರಲ್ಲಿ ಭಾಗಮಂಡಲದಲ್ಲಿ ನಡೆದ ‘ಹ್ಯಾಶ್ ಆಯಿಲ್’ ದಂಧೆ ಪ್ರಕರಣವನ್ನು ಪೊಲೀಸರು ಬೇಧಿಸಿ ಆರೋಪಿಗಳಿಗೆ ೧೦ ವರ್ಷ ಶಿಕ್ಷೆಗೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದ ಅವರು, ಸಮಾಜದ ಸುಧಾರಣೆಯ ಜವಾಬ್ದಾರಿ ಪೊಲೀಸರ ಮೇಲಿದೆ. ನಮ್ಮ ಕೆಲಸ ಗೌರವಯುತವಾಗಿದೆ. ಮುಂದಿನ ಪೀಳಿಗೆಗೆ ಸದೃಢ ಸಮಾಜ ಹಸ್ತಾಂತರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ವೃತ್ತ ನಿರೀಕ್ಷಕ ಹೆಚ್.ಜೆ. ಶಿವಶಂಕರ್ ಪಥಸಂಚಲನದ ಪರಿವೀಕ್ಷಣೆ ನಡೆಸಿ ಬಳಿಕ ಮಾತನಾಡಿ, ೧೯೬೫ ಏಪ್ರಿಲ್ ೨ ರಂದು ಪೊಲೀಸ್ ಕಾಯ್ದೆ ಜಾರಿಯಾದ ಹಿನ್ನೆಲೆ ಪೊಲೀಸ್ ಧ್ವಜ-ಕಲ್ಯಾಣ ದಿನಾಚರಣೆ ಆಚರಿಸಲಾಗುತ್ತದೆ. ಕುಟುಂಬ, ವೈಯಕ್ತಿಕ ಜೀವನ ಬಿಟ್ಟು ತಮ್ಮ ಜೀವ ಒತ್ತೆ ಇಟ್ಟು ದುಡಿಯುತ್ತಿದ್ದಾರೆ. ಪೊಲೀಸರು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಕಾವೇರಿ ರೈತರ-ಜನರ ಜೀವನಾಡಿಯಾಗಿದೆ. ಅದರ ರಕ್ಷಣೆ ಎಲ್ಲರ ಕರ್ತವ್ಯ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅಪರಾಧ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ಶಾಂತಿ, ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ಕ್ಲಿಷ್ಟ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಬ್ಬರಿಗೆ ಪ್ರಶಸ್ತಿ

ಇದೇ ಸಂದರ್ಭ ಅತ್ಯುತ್ತಮ ಕಾರ್ಯನಿರ್ವಹಣೆ ಫೀ.ಮಾ. ಕಾರ್ಯಪ್ಪ ಟ್ರೋಫಿ ಹಾಗೂ ವಿಶೇಷ ಘಟಕಗಳ ಉತ್ತಮ ಪೊಲೀಸ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಭಾಗಮಂಡಲ ಪೊಲೀಸ್ ಠಾಣೆಯ ಮುಖ್ಯ ಪೇದೆ ಪಿ.ಎಂ. ಸುನಿಲ್ ಕುಮಾರ್ ಅವರು ಈ ಸಾಲಿನ ಫೀ.ಮಾ. ಕಾರ್ಯಪ್ಪ ಟ್ರೋಫಿಗೆ, ವಿಶೇಷ ಘಟಕಗಳ ಉತ್ತಮ ಪೊಲೀಸ್ ಪ್ರಶಸ್ತಿಯನ್ನು ಜಿಲ್ಲಾ ಸಶಸ್ತç ದಳದ ಎಸ್. ಪ್ರದೀಪ್ ಭಾಜನರಾದರು.

ಕಾರ್ಯಕ್ರಮಕ್ಕೆ ಮುನ್ನ ಪರೇಡ್ ಕಮಾಂಡರ್ ಚನ್ನನಾಯಕ್ ಮುಂದಾಳತ್ವದಲ್ಲಿ ಜಿಲ್ಲಾ ಸಶಸ್ತç ಪೊಲೀಸ್ ಪಡೆ, ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ಉಪವಿಭಾಗಗಳು, ಜಿಲ್ಲಾ ಸಂಚಾರಿ ಪೊಲೀಸ್, ಮಹಿಳಾ ಪೊಲೀಸ್ ತಂಡಗಳಿAದ ಪಥಸಂಚಲನ ನಡೆಯಿತು. ಕೆ. ರಾಮರಾಜನ್ ಸ್ವಾಗತಿಸಿ, ಫಾರೂಕ್, ಕಾವೇರಮ್ಮ ನಿರೂಪಿಸಿ, ವಂದಿಸಿದರು.