ವಿಶೇಷ ವರದಿ : ಎಸ್.ಎಂ. ಮುಬಾರಕ್

ಸಿದ್ದಾಪುರ, ಮಾ. ೨೮: ಕಾಡುಪ್ರಾಣಿಗಳ ಭಯದ ನಡುವೆ ಮೂಲಸೌಕರ್ಯ ವಂಚಿತರಾಗಿ ಬದುಕು ಸಾಗಿಸುತ್ತಿರುವ ತಟ್ಟಳ್ಳಿ ಹಾಡಿಯ ನಿವಾಸಿಗಳು ವಿದ್ಯುತ್ ಬೆಳಕು ಅಭಿವೃದ್ಧಿ ಕಾಣದೆ ಕತ್ತಲ ಜೀವನ ನಡೆಸುವಂತಾಗಿದೆ.

ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಳ್ಳಿ ಹಾಡಿಯಲ್ಲಿ ಜೇನು ಕುರುಬ ಸಮುದಾಯದ ೭೨ ಕುಟುಂಬಗಳ ನೂರಕ್ಕೂ ಹೆಚ್ಚು ಮಂದಿ ಪ್ಲಾಸ್ಟಿಕ್ ಗುಡಿಸಲು ಮನೆಗಳಲ್ಲಿ ಮೂಲಸೌಕರ್ಯ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ.

ಈ ಹಾಡಿಯ ಸುತ್ತಮುತ್ತ ಗ್ರಾಮಗಳು ಅಭಿವೃದ್ಧಿ ಹೊಂದಿದ್ದರೆ ತಟ್ಟಳ್ಳಿ ಹಾಡಿ ಮಾತ್ರ ಅಭಿವೃದ್ಧಿಯಿಂದ ದೂರ ಉಳಿದಿದೆ.

೨೦೦೬ರ ಅರಣ್ಯ ಮಸೂದೆ ಕಾಯ್ದೆ ಜಾರಿಯಾದ ನಂತರ ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಿ ಕೃಷಿ ಬಳಕೆಗೆ ಅಲ್ಪ ಸ್ವಲ್ಪ ಜಾಗವನ್ನು ನೀಡಲಾಗಿದೆ. ಕೃಷಿ ಜಾಗದಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕಾರಣ ಭೂಮಿಯಲ್ಲಿ ನೆಟ್ಟ ಗಿಡಗಳು ಒಣಗಿ ನಿಂತಿವೆ.

ಬಹುತೇಕ ಕುಟುಂಬಗಳು ಪ್ಲಾಸ್ಟಿಕ್ ಗುಡಿಸಲು ಮನೆಗಳಲ್ಲಿ ವಾಸವಾಗಿವೆ. ಪ್ರತಿ ವರ್ಷ ಮಳೆಗಾಲ ಸಂದರ್ಭದಲ್ಲಿ ಪಂಚಾಯಿತಿ ಹಾಗೂ ಇಲಾಖೆಯಿಂದ ಪ್ಲಾಸ್ಟಿಕ್ ಟಾರ್ಪಲ್‌ಗಳನ್ನ ನೀಡಲಾಗುತ್ತದೆ. ಗುಡಿಸಲು ಮನೆಗಳಿಗೆ ಪ್ಲಾಸ್ಟಿಕ್ ಟಾರ್ಪಲ್‌ಗಳನ್ನು ಕಟ್ಟಿ ಜೀವನ ನಡೆಸುತ್ತಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಗ್ರಾಮೀಣ ಭಾಗದ ಜನರಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಗಳನ್ನು ರೂಪಿಸಿ ಇತ್ತೀಚೆಗಷ್ಟೇ ಕೆಲವು ಹಾಡಿಗಳಲ್ಲಿ ವಿದ್ಯುತ್ ಬೆಳಕು ಕಾಣಲು ಸಾಧ್ಯವಾಗಿದೆ. ಆದರೆ ತಟ್ಟಳ್ಳಿ ಹಾಡಿಗೆ ಮಾತ್ರ ವಿದ್ಯುತ್ ಬೆಳಕಿನ ವ್ಯವಸ್ಥೆ ಇಲ್ಲದೆ ಕತ್ತಲ ಜೀವನ ನಡೆಸುವಂತಾಗಿದೆ.

ಹಾಡಿಯ ಸಮೀಪದಲ್ಲೇ ವಿದ್ಯುತ್ ಲೈನ್ ಹಾದು ಹೋಗಿದ್ದರೂ ಈ ಹಾಡಿಯ ಜನರಿಗೆ ಮಾತ್ರ ಬೆಳಕಿನ ಭಾಗ್ಯ ಸಿಕ್ಕಿಲ್ಲ.

ಬೆಳಕಿನ ವ್ಯವಸ್ಥೆ ಇಲ್ಲದೆ ಶಾಲಾ ವಿದ್ಯಾರ್ಥಿಗಳು ಹಾಡಿ ನಿವಾಸಿಗಳು ಸಂಜೆ ೭ ಗಂಟೆಯಿAದ ಬೆಳಿಗ್ಗೆ ೬ರ ವರೆU (ಮೊದಲ ಪುಟದಿಂದ) ತಮ್ಮ ಮನೆಗಳಲ್ಲಿ ರಾತ್ರಿ ಕಳೆಯುತ್ತಾರೆ. ಹಾಡಿಯ ಕೆಲವರಿಗೆ ಮೊಬೈಲ್ ಫೋನ್‌ಗಳು ಇದ್ದರೂ ಸಮೀಪದ ಮನೆಗಳಿಗೆ ಹೋಗಿ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ. ಸ್ವಾತಂತ್ರö್ಯ ದೊರಕಿ ೭೬ ವರ್ಷ ಕಳೆದರೂ ಈ ಹಾಡಿ ಮಂದಿಗೆ ಬೆಳಕಿನ ಭಾಗ್ಯವಿಲ್ಲ.

ಶಾಲೆಗೆ ೧೦ ಕಿ.ಮಿ. ದೂರ ಹಾಡಿಯಲ್ಲಿ ಸುಮಾರು ೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಹಾಡಿಯಿಂದ ಮಾಲ್ದಾರೆ ಶಾಲೆಗೆ ಹತ್ತು ಕಿಲೋ ಮೀಟರ್ ಹೋಗಿ ಬರುತ್ತಿದ್ದಾರೆ.

ಈ ಹಾಡಿಯ ಮಾರ್ಗದಲ್ಲಿ ಯಾವುದೇ ಬಸ್ ವ್ಯವಸ್ಥೆಯೂ ಇಲ್ಲದೆ ಕೆಲವೊಮ್ಮೆ ಬಾಡಿಗೆ ವಾಹನ ಅವಲಂಬಿತರಾಗುತ್ತಾರೆ.

ಕಾಡುಪ್ರಾಣಿಗಳ ಭಯದ ನಡುವೆ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಹಿಂದಿರುಗುತ್ತಿದ್ದಾರೆ.

ರಸ್ತೆ ಅವ್ಯವಸ್ಥೆ

ಕಲ್ಲಳ್ಳ ಮಾರ್ಗವಾಗಿ ಆಶ್ರಮ ಶಾಲೆಗೆ ಸಂಪರ್ಕಿಸುವ ರಸ್ತೆ ಬಹುತೇಕ ಕಡೆಗಳಲ್ಲಿ ಅಭಿವೃದ್ಧಿ ಕಾಣದೆ ಗುಂಡಿಮಯವಾಗಿದೆ.

ಗುAಡಿ ಬಿದ್ದ ರಸ್ತೆಯಲ್ಲಿ ದಿನನಿತ್ಯ ಶಾಲಾ ವಿದ್ಯಾರ್ಥಿಗಳು ಹಾಡಿ ನಿವಾಸಿಗಳು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ರಸ್ತೆಗಳು ಅಭಿವೃದ್ಧಿ ಕಂಡಿಲ್ಲ

ಇತ್ತೀಚೆಗಷ್ಟೇ ಮುಖ್ಯ ರಸ್ತೆಯಿಂದ ಕೆಲವು ಮೀಟರ್‌ನಷ್ಟು ಕಾಂಕ್ರೀಟ್ ರಸ್ತೆ ಮಾಡಲಾಗಿದೆ.

ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಹಾಡಿ ನಿವಾಸಿಗಳಿಗೆ ಪಂಚಾಯಿತಿಯಿAದ ನೀರಿನ ವ್ಯವಸ್ಥೆ ಮಾಡಲಾಗಿದ್ದರೂ ಕರೆಂಟ್ ಕೈ ಕೊಟ್ಟಾಗ ಮತ್ತೆ ನೀರಿನ ಸಮಸ್ಯೆ ಎದುರಾಗಿ ನೀರಿಗಾಗಿ ಅರ್ಧ ಕಿಲೋಮೀಟರ್‌ನಷ್ಟು ನಡೆದು ತರಬೇಕಾಗಿದೆ.ಹಾಡಿಗೆ ಕರೆಂಟ್ ವ್ಯವಸ್ಥೆಯಾದಲ್ಲಿ ಜಲಜೀವನ್ ಮಿಷನ್ ಮೂಲಕ ಪ್ರತಿ ಮನೆಗೆ ನೀರಿನ ವ್ಯವಸ್ಥೆ ಮಾಡುವ ಯೋಜನೆಯೂ ಇದೆ.

ಆದಿವಾಸಿಗಳ ಅಭಿವೃದ್ಧಿಗೆಂದೇ ಇರುವ ಐಟಿಡಿಪಿ ಇಲಾಖೆ ಹಾಡಿಯ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂದು ಹಾಡಿ ನಿವಾಸಿ ಶೋಭಾ ಆರೋಪಿಸಿದ್ದಾರೆ.

ಐಟಿಡಿಪಿ ಇಲಾಖೆಯಿಂದ ೪೦ ಮನೆಗಳು ಮಂಜೂರಾಗಿ ಎರಡು ವರ್ಷ ಕಳೆದರೂ ಇಂದಿಗೂ ಪೂರ್ಣಗೊಂಡಿಲ್ಲ. ಬಹುತೇಕ ಕುಟುಂಬಗಳು ಅಡಿಪಾಯ ಗೋಡೆ ಕಟ್ಟಿ ಹಾಗೆ ಬಿಟ್ಟಿದ್ದಾರೆ. ಮನೆ ಕಟ್ಟಲು ನೀರಿನ ಸಮಸ್ಯೆ ಹಾಗೂ ಅನುದಾನ ಬರು ತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ೧೦ ಮನೆಗಳು ಮಂಜೂರಾಗಿದ್ದು ಬಹುತೇಕ ಮನೆಗಳ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದೆ.

ಬಾರದ ಗಂಗಾ ಕಲ್ಯಾಣ ಯೋಜನೆ

ಸುಮಾರು ೬೦ ಕುಟುಂಬಗಳು ಕೃಷಿಯೊಂದಿಗೆ ಅಭಿವೃದ್ಧಿ ಮೂಲಕ ಮುಂದೆ ಬರಲು ಗಂಗಾ ಕಲ್ಯಾಣ ಯೋಜನೆಗಾಗಿ ಅರ್ಜಿ ಸಲ್ಲಿಸಿ ೪ ವರ್ಷ ಕಳೆದರೂ ಇಂದಿಗೂ ಯೋಜನೆ ತಲುಪಿಲ್ಲ.

ಹಲವು ಹೋರಾಟ ಪ್ರತಿಭಟ ನೆಗಳು ಮಾಡಿದ ನಂತರ ಇದೀಗ ಯೋಜನೆ ಜಾರಿಗೊಳ್ಳುವ ಹಂತ ತಲಪಿತ್ತು. ಆದರೇ ಅಷ್ಟರಲ್ಲಿ ಚುನಾವಣೆ ನೀತಿ ಸಂಹಿತೆ ಕಾರಣ ಹೇಳಿ ಮತ್ತೆ ತಡೆಮಾಡಲಾಗಿದೆ.

ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಇಲ್ಲದ ಕಾರಣ ಮನೆಯ ಸಮೀಪ ಇರುವ ಜಾಗದಲ್ಲಿ ಏನೂ ಬೆಳೆಯಲು ಸಾಧ್ಯವಾಗz ಕೆಲವು ನೆಟ್ಟ ಗಿಡಗಳು ಒಣಗಿ ನಿಂತಿವೆ.

ಅಧಿಕಾರಿಗಳ ನಿರ್ಲಕ್ಷö್ಯವೇ ಸಮಸ್ಯೆಗೆ ಕಾರಣ ಎಂದು ಆದಿ ವಾಸಿ ಮುಖಂಡ ಜೆ.ಕೆ. ಅಪ್ಪಾಜಿ ಆರೋಪಿಸಿದ್ದಾರೆ. ಜಿಲ್ಲಾಧಿ ಕಾರಿಗಳು ಹಾಡಿಗೆ ಬಂದು ಸಮಸ್ಯೆ ಬಗೆಹರಿಸಬೇಕೆಂದು ಈ ಮಂದಿ ಒತ್ತಾಯಿಸಿದ್ದಾರೆ.

ಅರಣ್ಯ ಪ್ರದೇಶವಾಗಿರು ವುದರಿಂದ ಗಂಗಾ ಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕದ ಅಡೆತಡೆ ಏರ್ಪಟ್ಟಿತ್ತು ಇದೀಗ ಸಮಸ್ಯೆ ಬಗೆಹರಿದಿದೆ. ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚಂದ್ರಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.