ಇಂದು ಕೊಡಗು ಕೊಡಗಾಗಿ ಉಳಿದಿಲ್ಲ, ಬೆಟ್ಟ ಗುಡ್ಡಗಳ ಹಚ್ಚ ಹಸಿರು, ನಿತ್ಯ ಜುಳು ಜುಳು ಹರಿಯುವ ನದಿ, ತೊರೆಗಳು, ಪಕ್ಷಿಗಳ ಚಿಲಿಪಿಲಿನಾದ, ಎಲ್ಲಿ ನೋಡಿದರೂ ಹಿಂಡು ಹಿಂಡು ದನಕರುಗಳು, ಸದಾ ಲವಲವಿಕೆಯಿಂದ ಇದ್ದ ಸದೃಢಕಾಯ ಮೂಲ ನಿವಾಸಿಗಳು ಇಂದು ಕುಬ್ಜರಾಗಿ ಕುಗ್ಗಿಹೋಗಿದ್ದಾರೆ! ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಇಂದು ನಾವು ಕಾಂಕ್ರಿಟ್ ಕಾಡುಗಳನ್ನು ಕಾಣಬಹುದು, ಬೆಟ್ಟ ಗುಡ್ಡಗಳಲ್ಲಿ ಇದ್ದ ಹೆಮ್ಮರಗಳ ಬದಲು ತಲೆ ಎತ್ತಿ ನಿಂತಿದೆ ೫೦-೧೦೦ ರೆಸಾರ್ಟ್ಗಳು, ಅಲ್ಲಿ ನಿತ್ಯ ಹರಿಯುತ್ತಿದ್ದ ತೊರೆಗಳಿಗು ಕಲ್ಲು! ಕಳೆದ ೧೫-೨೦ ವರ್ಷದಲ್ಲಿ ವಿನಾಕಾರಣ ನಮಗೆ ಯಾವುದೇ ಪ್ರಯೋಜನ ಬಾರದ ಯೋಜನೆಗಳಿಗೆ ಬಲಿಯಾದವು ಲಕ್ಷ ಲಕ್ಷ ಮರಗಳು, ಅಂದು ಕೆಲ ಅರಣ್ಯಾಧಿಕಾರಿಗಳಿಗೆ ಬೆಂಬಲವಾಗಿ ನಿಂತು ಮರಗಳ ಮಾರಣಹೋಮಕ್ಕೆ ಕಾರಣರಾದವರು ಇಂದು “ಕೊಡಗನ್ನು ರಕ್ಷಿಸಿ” ಎಂದು ಮೊಸಳೆ ಕಣ್ಣೀರು ಹಾಕುತ್ತಿದ್ದರೆ! ಇನ್ನು ಕೆಲವರು ಸ್ವತÀಃ ತಾವೇ ಅರಣ್ಯ ಪ್ರದೇಶವನ್ನು ಅತಿಕ್ರಮಿಸಿಕೊಂಡು ಬದುಕುತ್ತಿದ್ದಾರೆ.

ಕಳೆದ ೨೦ ವರ್ಷದಲ್ಲಿ ನದಿಗಳ ಒಡಲನ್ನು ಅಗೆದು, ಬಗೆದು ಮರಳು ಗಣಿಗಾರಿಕೆ ಮಾಡಿ ನದಿಗಳು ಹರಿಯುವ ದಿಕ್ಕು ಬದಲಾಗಿದೆ, ೩೦,೫೦೦ ಹೇಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದ ಪ್ರದೇಶ ಇಂದು ೧೯,೮೦೦ ಹೆಕ್ಟೇರ್‌ಗೆ ಇಳಿದಿದೆ. ಹೀಗೇ ಮುಂದುವರೆದರೆ ಮುಂದೆ ಭತ್ತದ ಗದ್ದೆಗಳನ್ನು ನೋಡಲು ಬೇರೆ ಜಿಲ್ಲೆಗಳಿಗೆ ಹೋಗಬೇಕಾಗುತ್ತದೆ. “ಭೂ ಮಾಫಿಯಾ”ದೊಂದಿಗೆ ಕೈ ಜೋಡಿಸಿದ ಅಧಿಕಾರಿಗಳು ಅವರಿಗೆ ಅನುಕೂಲ ಆಗುವಂತ ಕಾನೂನುಗಳನ್ನು ತಿದ್ದಿಕೊಂಡರು, ಸರ್ಕಾರ ನಡೆಸುತ್ತಿದ್ದವರು ಅವರ ಬೆನ್ನಿಗೆ ನಿಂತರು. ಭೂ ಮತ್ತು ಮರ ಮಾಫಿಯ ಕೊಡಗಿನಲ್ಲಿ ಬೆಳೆದಂತೆಲ್ಲ, ಬೆತ್ತಲಾಯಿತು ಕೊಡಗು! ಸದಾ ಪ್ರಕೃತಿ ಮಾತೆಯನ್ನು ಪೂಜಿಸುವ ಇಲ್ಲಿಯ ಜನ ಇದನ್ನೆಲ್ಲ ಕಂಡರೂ ಕಾಣದಂತೆ ನಟಿಸಿದರು! ಇದನ್ನು ಪ್ರಶ್ನಿಸಿ, ಪ್ರತಿಭಟಿಸಿ ಬೀದಿಗಿಳಿದವರನ್ನು “ಡೋಂಗಿ ಪರಿಸರವಾದಿಗಳೆಂದು” ಅಭಿವೃದ್ಧಿಗಳಿಗೆ ಅಡ್ಡಗಾಲು ಹಾಕಿದವರು ಕರೆದರು. ಯಾರು ಪರಿಸರ ನಾಶಕ್ಕೆ ಕಾರಣರಾದರೊ ಅವರಿಗೆ ಅಭಿವೃದ್ಧಿ “ಹರಿಕಾರ” ಎಂಬ ಬಿರುದು ಕೊಟ್ಟು ಬೆನ್ನು ತಟ್ಟಿದ ಪರಿಣಾಮವನ್ನು ಇಂದು ನಾವೆಲ್ಲ ಅನುಭವಿಸುತ್ತಿದ್ದೇವೆ. ಇಂದು ಅವರೆಲ್ಲ ಎ.ಸಿ. ರೂಮಿನಲ್ಲಿ, ನಾವು ನೀವು ಬಿರು ಬಿಸಿಲಿನಲ್ಲಿ!

ಸುಮ್ಮನೆ ಇರಲಾರದೆ ಮೈಮೇಲೆ ಇರುವೆ ಬಿಟ್ಟುಕೊಂಡAತೆ ನಮ್ಮ ಸುಂದರ ಕೊಡಗನ್ನು ಪ್ರವಾಸೋದ್ಯಮದ ಪಟ್ಟಿಗೆ ಸೇರಿಸಿ ಇರುವುದನ್ನೆಲ್ಲ ಹಾಳು ಮಾಡಿದರು, ಬೆಟ್ಟಗುಡ್ಡಗಳನ್ನು ಬಿಡದೆ ಅಗೆದು ರೆಸಾರ್ಟ್ಗಳನ್ನು ಮಾಡಿ ಬೆಟ್ಟದ ಮೇಲೆ ಕೃತಕ ಕೆರೆಗಳು - ಸ್ವಿಮ್ಮಿಂಗ್‌ಪೂಲ್‌ಗಳು ತಲೆ ಎತ್ತಿದವು. ಅಕ್ರಮ ಗಣಿಗಾರಿಕೆ, ಮರಳುಗಾರಿಕೆ, ಮರಗಳ ಹನನ, ಎಗ್ಗಿಲ್ಲದೆ ನಡೆದವು. “ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೆ ಜಾಣ” ಎಂದAತೆ ಈ ಮಾಫಿಯಾಗಳ ಚಿಲ್ಲರೆ ಕಾಸಿಗೆ ಆಸೆ ಪಟ್ಟು ಕೊಡಗನ್ನು ನಾಶಮಾಡಿದರು. ಇದರ ವಿರುದ್ಧ ಮಾತನಾಡಿದವರನ್ನು ದಾರಿ ಮಧ್ಯ ತಡೆದು ಜೀವ ಭಯ ಹುಟ್ಟಿಸಿದರು! ಆದರೆ ಇಂದು ನಾವು ಜೀವ ಜಲವಿಲ್ಲದೆ ಬದುಕು ನಡೆಸಲು ಹೆಣಗುತ್ತಿದ್ದೇವೆ! ಈ ಪ್ರವಾಸೋದ್ಯಮವು ನಮ್ಮ ಪುಣ್ಯ ಕ್ಷೇತ್ರಗಳನ್ನೂ ಬಿಡಲಿಲ್ಲ. “ಜೀವನದಿ ಕಾವೇರಿ”ಯನ್ನು ಎಷ್ಟರ ಮಟ್ಟಿಗೆ ಕಲುಷಿತಗೊಳಿಸಬೇಕು ಅಷ್ಟರ ಮಟ್ಟಿಗೆ ಕಲುಷಿತವಾಗಿದೆ. ಇಂದು ಕೊಡಗಿನಲ್ಲಿ ೫೦೦-೬೦೦ ಅಡಿ ಕೊಳವೆ ಬಾವಿ ತೋಡಿದರೂ ನೀರು ಸಿಗುತ್ತಿಲ್ಲ, ಕೆರೆ, ಕಟ್ಟೆಗಳಲ್ಲಿ ನೀರಿಲ್ಲ, ನೈಸರ್ಗಿಕವಾಗಿ ಹರಿಯುವ ಹೊಳೆ, ತೋಡುಗಳಿಂದ ನೀರು ಬಳಸಿ ಕೃಷಿಯನ್ನು - ಕಾಫಿ ಗಿಡಗಳನ್ನು ಉಳಿಸಿಕೊಳ್ಳಲು ಹರಸಾಹಸದಲ್ಲಿ ಇಲ್ಲಿಯ ರೈತರು ಬದುಕುತ್ತಿದ್ದಾರೆ, ಎಲ್ಲೂ ಇಲ್ಲದ ಕಾನೂನುಗಳನ್ನು ಇಲ್ಲಿಗೆ ಹೇರಿರುವುದು ವಿಪರ್ಯಾಸವೇ ಸರಿ.

ಮಳೆಗಾಲದಲ್ಲಿ ನೆರೆ ಬಂದು ಮನೆ-ಮಠ, ದನ-ಕರು, ಕೃಷಿ ಪ್ರದೇಶಗಳು, ಫಸಲುಗಳು ನಾಶವಾಗುವಾಗ ಯಾವ ಅಧಿಕಾರಿಗಳೂ ನಮ್ಮ ಮನೆಯ ಬಾಗಿಲಿಗೆ ಬಂದು ನಮ್ಮ ಕಷ್ಟವನ್ನು ಕೇಳುವುದಿಲ್ಲ. ಕೊಡಗಿನ ಅದೆಷ್ಟೋ ಕೆರೆ-ಕಟ್ಟೆಗಳಲ್ಲಿ ಹೂಳೆತ್ತದೆ ಅದೆಷ್ಟು ವರ್ಷವಾಗಿದ್ದವೊ ಗೊತ್ತಿಲ್ಲ. ಹೊಳೆದಂಡೆಯ ‘ಬಫರ್ ಪ್ರದೇಶಗಳು ಓಟ್ ಬ್ಯಾಂಕ್ ಪೈಸಾರಿಗಳಾಗಿವೆ! ಈ ರೀತಿ ಅಕ್ರಮ ವಲಸಿಗರಿಂದ ಹೊಳೆ ಬದಿಯ ‘ಬಫರ್’ ಜೋನ್‌ಗಳಲ್ಲಿದ ಮರಗಳು, ಬಿದುರುಗಳು ಕಾಣೆಯಾದವು! ಕೊಡಗಿಗೆ ಬರುವಾಗ ಬರಿಗೈಯಲ್ಲಿ ಬರುವ ಅದೆಷ್ಟೋ ಅಧಿಕಾರಿಗಳು ಹೋಗುವಾಗ ಲಾರಿಗಟ್ಟಲೆ ಮರದ ಪೀಠೋಪಕರಣಗಳನ್ನು ಸಾಗಿಸಿದ ಉದಾಹರಣೆಗಳಿವೆ. ಅರಣ್ಯಗಳನ್ನು ಕಾಯಬೇಕಿದ್ದ ಕೆಲ ಅರಣ್ಯಧಿಕಾರಿ ಗಳೇ ಮರಗಳನ್ನು ಲೂಟಿ ಮಾಡಲು ಪರವಾನಿಗೆ ನೀಡಿದರು!

ಕಾವೇರಿ ಪ್ರಾಧಿಕಾರದ ಅಡಿಯಲ್ಲಿ ಕಾವೇರಿ ನದಿ ನೀರು ಹಂಚಿಕೆಯಲ್ಲಿ ನಮೂದಿಸಿದ ಪ್ರಮಾಣದ ನೀರು ನಮಗೆ ಸಿಗುತ್ತಿಲ್ಲ, ಇದನ್ನು ಕೇಳುವ ಧೈರ್ಯ ನಮ್ಮ ಅಧಿಕಾರಿಗಳಿಗಿಲ್ಲ. ಹಾರಂಗಿ ಅಣ್ಣೆಕಟ್ಟೆ ಕಟ್ಟಿ ಸಾವಿರಾರು ಎಕರೆ ಫಲವತ್ತಾದ ಕೊಡಗಿನ ಪ್ರದೇಶವನ್ನು ಮುಳುಗಿಸಿ ಪಕ್ಕದ ಜಿಲ್ಲೆಯನ್ನು ಉದ್ಧಾರ ಮಾಡಿದರು! ಈಗ “ಕೊಂಗಣ” ಅಣ್ಣೆಕಟ್ಟೆಯ ಮೇಲೆ ಕಣ್ಣುಬಿದ್ದಿದೆ. ದಕ್ಷಿಣ ಕೊಡಗನ್ನು ಮುಳುಗಿಸಿ ಹುಣಸೂರು - ಮೈಸೂರು ಜಿಲ್ಲೆಯನ್ನು ಬೆಳೆಸುವ ಉದ್ದೇಶವೇ..? ೧೯೫೬ ರಿಂದ ಇಲ್ಲಿಯವರೆಗೆ ಅದೇಕೊ ಗೊತ್ತಿಲ್ಲ ನಮ್ಮನ್ನು ಆಳುವವರೇ ನಮಗೆ ಶಾಪವಾಗುತ್ತಿದ್ದಾರೆ! ಇಲ್ಲಿಯ ಜನರ ಮಂದಬುದ್ಧಿಯನ್ನು ಚೆನ್ನಾಗಿ ಅರಿತುಕೊಂಡಿರುತ್ತಾರೆ. ನಮಗೆ ಇಲ್ಲಿ ನೀರಿಗೆ ಹಾಹಾಕಾರ ಇದ್ದರೂ ತಲೆಕೆಡಿಸಿಕೊಳ್ಳದೆ ಪಕ್ಕದ ರಾಜ್ಯ - ಜಿಲ್ಲೆಗಳ ಬಗ್ಗೆ ಅಪಾರ ಪ್ರೀತಿಗೆ ಕಾರಣವೇನು? ಈ ರೀತಿಯ ನೀರಿನ ಸಮಸ್ಯೆಗಳಿಗೆ ಉಳಿದಿರುವುದು ಒಂದು ಒಳ್ಳೆಯ, ಉತ್ತಮ ಯೋಜನೆ ಎಂದರೆ ಪ್ರತಿ ಹೋಬಳಿಗೊಂದು “ಚೆಕ್ ಡ್ಯಾಂ” ನಿರ್ಮಾಣ. ಚೆಕ್ ಡ್ಯಾಂಗಳು ನೀರಿನ ಹರಿವಿನ ವೇಗವನ್ನು ಕಡಿಮೆ ಮಾಡುವ ಮೂಲಕ, ಸವೆತವನ್ನು ಎದುರಿಸಲು ಒಂದು ಸಣ್ಣ ಅಣ್ಣೆಕಟ್ಟನ್ನು ನಿರ್ಮಾಣ ಮಾಡುವುದು. ಇದೇನು ಹೊಸ ತಂತ್ರಜ್ಞಾನವೇನಲ್ಲ ಪ್ರಾಚೀನ ಕಾಲದಿಂದಲೆ ನಾವು ಕಾಣಬಹುದು. ನೀರಿನ ವೇಗವನ್ನು ನಿಯಂತ್ರಿಸಿ, ಮಣ್ಣನ್ನು ಸಂರಕ್ಷಿಸಲು ಹಾಗೂ ಭೂಮಿಯ ತೇವಾಂಶವನ್ನು ಹೆಚ್ಚಿಸಲು ಹಾಗೂ ಅಂತರ್‌ಜಲವನ್ನು ವೃದ್ಧಿಗೊಳಿಸುತ್ತದೆ, ಈ ರೀತಿಯ ಚೆಕ್ ಡ್ಯಾಂಗಳು ಮಳೆಗಾಲದಲ್ಲಿ ಹೆಚ್ಚು ನೀರು ಹರಿಯುವÀ ಸಂದರ್ಭದಲ್ಲಿ ಹೊಳೆಗಳ ಅಕ್ಕಪಕ್ಕದ ಮಣ್ಣು ಕುಸಿಯುವುದನ್ನು ತಡೆಯಲು ಸಹಕಾರಿ. ಒಂದು ಸಾಮಾನ್ಯ ಚೆಕ್ಕ್ ಡ್ಯಾಂ ಸರಿಸುಮಾರು ೧೦-೧೫ ಕೀ.ಮೀ. ಪ್ರದೇಶದ ಅಂತರ್‌ಜಲವನ್ನು ವೃದ್ಧಿಗೊಳಿಸುತ್ತದೆ ಹಾಗೂ ಜಲಚರಗಳ ಬೆಳವಣಿಗೆಯೂ ಹೆಚ್ಚಾಗುತ್ತದೆ. ಬೇಸಿಗೆಯಲ್ಲಿ ದನ-ಕರುಗಳಿಗೂ ನೀರು, ಅಕ್ಕಪಕ್ಕದ ಬಾವಿ ಕೆರೆಗಳು ಬತ್ತದಂತೆ ಇರುವುದರಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಹೊಳೆ ನೀರನ್ನು ಅವಲಂಬಿಸುವ ಅವಶÀ್ಯಕತೆ ಇರುವುದಿಲ್ಲ. ಒಟ್ಟಿನಲ್ಲಿ ಬೇಸಿಗೆಯ ನೀರಿನ ಹಾಹಾಕಾರವನ್ನು ತಪ್ಪಿಸಲು ಹಾಗೂ ರೈತರ ಕೃಷಿಯನ್ನು ಉಳಿಸಲು ಒಂದು ಒಳ್ಳೆಯ ಯೋಜನೆಯಾಗಿದೆ. ನಮ್ಮ ಪ್ರತಿನಿಧಿ ಪೊನ್ನಣ್ಣನವರ ಹುಟ್ಟೂರಿ ನಿಂದಲೆ ಈ ಯೋಜನೆ ಪ್ರಾರಂಭವಾಗಲಿ ಇಲ್ಲಿ ಹರಿಯುವ ಲಕ್ಷಣತೀರ್ಥ ನದಿಗೆ ಒಂದು, ಎರಡೂ ಚೆಕ್ಕ್ ಡ್ಯಾಂ ನಿರ್ಮಾಣವಾದರೆ ಇಡೀ ಶ್ರೀಮಂಗಲ ಹೋಬಳಿಯ ಜನರು ಅವರನ್ನು ಸದಾ ನೆನೆಯುತ್ತಾರೆ. ಕೋಟಿ ಕೋಟಿ ಹಣ ಕೊಡಗಿನ ಯಾವ್ಯಾವುದೋ ಪ್ರಯೋಜನವಿಲ್ಲದ ಯೋಜನೆಗಳಿಗೆ ಪೋಲಾಗುತ್ತಿರು ವುದನ್ನು ನಾವು ನೋಡಿದ್ದೇವೆ. ಅದರ ಬದಲು ಇಂತಹ ಒಂದು ಒಳ್ಳೆಯ ಯೋಜ ನೆಗೆ ನಮ್ಮ ಶಾಸಕರು ಹಸಿರು ನಿಶಾನೆ ತೋರಿಸಿದರೆ ಇಲ್ಲಿಯ ಪರಿಸರ ಹಸಿರಾಗು ವುದರ ಜೊತೆಯಲ್ಲಿ ಇಲ್ಲಿ ಜನ-ಜಾನುವಾರುಗಳ ಬದುಕು ಹಸನಾಗುತ್ತದೆ.

ಮಳೆಗಾಲದಲ್ಲಿ “Wಚಿಣeಡಿ Wಚಿಣeಡಿ ಇveಡಿಥಿ Wheಡಿe” ಬೇಸಿಗೆ ಬಂತೆAದರೆ “ಓoಣ ಚಿ ಆಡಿoಠಿ ಣo ಆಡಿiಟಿಞ” ಇದು ನಮ್ಮ ಇಂದಿನ ಕೊಡಗು...!

-ಮಚ್ಚಮಾಡ ಅನೀಶ್ ಮಾದಪ್ಪ, ಟಿ. ಶೆಟ್ಟಿಗೇರಿ.