ನಾಪೋಕ್ಲು. ಮಾ. ೨೮: ೨೪ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಈ ಬಾರಿಯ ಕುಂಡ್ಯೋಳAಡ ಕಪ್ ಹಾಕಿ ನಮ್ಮೆ ಆರಂಭಕ್ಕೆ ಒಂದು ದಿನ ಮಾತ್ರ ಉಳಿದಿದ್ದು ಕ್ಷಣಗಣನೆ ಆರಂಭಗೊAಡಿದೆ.

ಇದಕ್ಕಾಗಿ ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮೂರು ಮೈದಾನಗಳನ್ನು ಸಜ್ಜುಗೊಳಿಸಲಾಗಿದೆ. ಪ್ರಮುಖ ಮೈದಾನದ ಒಂದು ಬದಿ ವೇದಿಕೆ, ವಿಶೇಷ ಆಹ್ವಾನಿತರಿಗೆ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದ ಮೂರು ಬದಿಗಳಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಲಾಗಿದೆ.

ಈ ಬಗ್ಗೆ `ಶಕ್ತಿ’ಗೆ ಮಾಹಿತಿ ನೀಡಿದ ಕುಂಡ್ಯೋಳAಡ ಕಪ್ ಹಾಕಿ ಸಮಿತಿ ಅಧ್ಯಕ್ಷ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾ. ೩೦ರಂದು ಆರಂಭಗೊಳ್ಳುವ ಹಾಕಿ ನಮ್ಮೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದನ್ನು ನಾವು ಹಬ್ಬದ ರೀತಿಯಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ಇದರೊಂದಿಗೆ ಪ್ರತೀ ವಾರಾಂತ್ಯದಲ್ಲಿ ಕೊಡವ ಸಂಸ್ಕೃತಿ, ಆಹಾರ ಮೇಳ, ಆರೋಗ್ಯ ಶಿಬಿರ, ಬಾಳೋಪಾಟ್ ಕಲಿಸುವಿಕೆ,

(ಮೊದಲ ಪುಟದಿಂದ) ವಧು-ವರರ ಅನ್ವೇಷಣೆ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಬಾರಿ ೧೨ ಮೆಟ್ಟಿಲಿನ ಗ್ಯಾಲರಿ ನಿರ್ಮಿಸಲಾಗಿದ್ದು, ೩೦ ಸಾವಿರ ಜನ ಕೂರುವ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ಒಂದು ಸಾವಿರ ವಿಶೇಷ ಆಹ್ವಾನಿತರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕುಟುಂಬಸ್ತರಾದ ಕಾಶಿ ತಮ್ಮಯ್ಯ, ಸುರೇಶ್ ಉತ್ತಪ್ಪ, ವಿಜಯ ಮುತ್ತಣ್ಣ, ಜತ್ತಿ ಸುಬ್ಬಯ್ಯ, ಕಂದಾ ಭೀಮಯ್ಯ, ಸಬನ್ ಪಳಂಗಪ್ಪ, ಸಂಜು ಅಯ್ಯಪ್ಪ, ಕೊಡವ ಹಾಕಿ ಅಕಾಡೆಮಿಯ ನಿರ್ದೇಶಕರಾದ ಚೆಯ್ಯಂಡ ಸತ್ಯ, ಅಂಪರ‍್ಸ್ ಮ್ಯಾನೇಜರ್ ಬಡಕಡ ದೀನಾ ಪೂವಯ್ಯ ಮತ್ತಿತರರಿದ್ದರು.