ವೀರಾಜಪೇಟೆ, ಮಾ. ೨೮: ವೀರಾಜ ಪೇಟೆಯ ಬಾಳುಗೋಡು ಗ್ರಾಮದ ಕಂಡಿಮಕ್ಕಿ ದೇವಳವು ಹಚ್ಚ ಹಸುರಿನ ಕಾನನ ದೊಳಗಿದ್ದು ಸುಮಾರು ೫೦೦ ವರ್ಷ ಗಳ ಇತಿಹಾಸವನ್ನು ಹೊಂದಿದೆ. ಇಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ ೧೦೧ ದೈವಗಳ ತೆರೆ ಮಹೋತ್ಸವ ವೈಭವವು ತಾ.೩೦, ೩೧ ಏ.೧ರಂದು ನಡೆಯಲಿದೆ.
ಇಲ್ಲಿನ ಹಸಿರು ಬನದಲ್ಲಿ ಸ್ಥಿತಗೊಂಡಿರುವ ತುಳುನಾಡಿನ ಪ್ರಖ್ಯಾತ ಕಾಡು ದೇವತೆಗಳಾದ ಚಾಮುಂಡಿ ಮತ್ತು ಕೊರತಿ ದೇವಿ ಸೇರಿದಂತೆ ಮೂರ್ತಿ ದೇವರುಗಳ ೧೦೧ ತೆರೆಗಳನ್ನು ೫೦೦ ವರ್ಷಗಳಿಂದ ತೆರೆಗಳನ್ನು ಕಟ್ಟುತ್ತಾ ಬರಲಾಗುತ್ತಿದೆ.
ತೆರೆ ಮಹೋತ್ಸವ ಪ್ರಯುಕ್ತ ದೇವಾಲಯದಲ್ಲಿ ನೆರೆದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.