*ಗೋಣಿಕೊಪ್ಪದ, ಮಾ. ೨೭: ಗೋಣಿಕೊಪ್ಪ ನಗರ ಬಿಜೆಪಿ ರೈತ ಮೋಚಾ ಅಧ್ಯಕ್ಷರಾಗಿ ಜಪ್ಪು ಸುಬ್ಬಯ್ಯ ಅವರನ್ನು ನೇಮಿಸಲಾಗಿದೆ.

ಇಲ್ಲಿನ ಮಹಿಳಾ ಸಮಾಜದಲ್ಲಿ ನಡೆದ ಬಿಜೆಪಿ ಮಂಡಲದ ಗೋಣಿಕೊಪ್ಪ ನಗರ ಶಕ್ತಿ ಕೇಂದ್ರದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಉಪಾಧ್ಯಕ್ಷರಾಗಿ ಚೇತನ್, ಕಾರ್ಯದರ್ಶಿಯಾಗಿ ಮಂಜು ಆಯ್ಕೆ ಯಾಗಿದ್ದಾರೆ. ನಗರ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಧನಲಕ್ಷಿ÷್ಮ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭ ಗೋಣಿಕೊಪ್ಪ ಶಕ್ತಿ ಕೇಂದ್ರದ ಪ್ರಮುಖ ಸುರೇಶ್ ರೈ ಮತ್ತು ರಂಜು ಇದ್ದರು.