ಮಡಿಕೇರಿ, ಮಾ. ೨೭: ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಇಂದು ಎರಡು ಕಡೆ ದಾಳಿ ನಡೆಸಿದ್ದಾರೆ. ಇಬ್ಬರು ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವುದು ಈ ಸಂದರ್ಭ ಪತ್ತೆಯಾಗಿದೆ.

ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಎಸ್. ಅವರು ಈ ಕುರಿತು ‘ಶಕ್ತಿ’ಗೆ ಮಾಹಿತಿ ಒದಗಿಸಿದ್ದಾರೆ.

ಸೋಮವಾರಪೇಟೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವ ಹಣಾಧಿಕಾರಿ ಬಿ.ವಿ. ಜಯಣ್ಣ ಹಾಗೂ ತಾಲೂಕು ಪಂಚಾಯಿತಿಯ ಸಹಾಯಕ ಇಂಜಿನಿಯರ್ ಎಂ.ಎA. ಫಯಾಜ್ ಅಹಮದ್ ಈ ಇಬ್ಬರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಜಯಣ್ಣ ಅವರಿಗೆ ಸೇರಿದ ನಿವೇಶನದ ಮೌಲ್ಯ ರೂ.೫.೫೦ ಲಕ್ಷ, ೩ ಮನೆಗಳ ಮೌಲ್ಯ ೧ ಕೋಟಿ ೯ ಲಕ್ಷ ಹಾಗೂ ೫.೩೩ ಹೆಕ್ಟೇರ್ ಕೃಷಿಭೂಮಿ ರೂ. ೩ ಲಕ್ಷ ಮೌಲ್ಯದ್ದಾಗಿದೆ ಎಂದು ಪತ್ತೆ ಹಚ್ಚಲಾಗಿದೆ. ಈ ಸಂದರ್ಭ ನಗದು ಹಣ ರೂ. ೯,೨೦,೦೦೦ ಹಾಗೂ ಆಭರಣಗಳ ಮೌಲ್ಯ ೮,೬೩,೪೨೪ ಮೌಲ್ಯದ್ದಾಗಿದ್ದು, ವಾಹನದ ಮೌಲ್ಯ ರೂ.೨೫,೭೦,೦೦೦ ಮತ್ತಿತರ ವಸ್ತುಗಳು ರೂ. ೧೦ ಲಕ್ಷ ಎಂದು ಅಂದಾಜಿಸ ಲಾಗಿದ್ದು, ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ದಾಖಲಾತಿ ಗಳನ್ನು ಕೂಡ ವಶಪಡಿಸಿ ಕೊಳ್ಳಲಾಗಿದೆ. ಆದಾಯ ಕ್ಕಿಂತ ಶೇ.೧೪೬ರಷ್ಟು ಅಧಿಕ ಮೌಲ್ಯದ ಆಸ್ತಿ ಇದೆ ಎಂದು ಪತ್ತೆ ಹಚ್ಚಲಾಗಿದ್ದು, ಈ ಸಂಬAಧ ಮೊಕದ್ದಮೆ ದಾಖ ಲಾಗಿದ್ದು, ತನಿಖೆ ಮುಂದುವರೆಸ ಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಎಂ.ಎA. ಫಯಾಜ್ ಅಹಮದ್ ಅವರಿಗೆ ಸೇರಿದ ಮನೆಗಳ ಮೌಲ್ಯ ರೂ.೭೫ ಲಕ್ಷ, ಕೃಷಿ ಭೂಮಿ ಸುಮಾರು ೪ ಎಕರೆ ಮೌಲ್ಯ ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ರೂ.೪೦ ಲಕ್ಷ ಎಂದು ಅಂದಾಜಿಸಲಾಗಿದೆ. ನಗದು ಹಣ ರೂ.೪೮,೦೭೦ನ್ನು ವಶಪಡಿಸಿಕೊಳ್ಳಲಾಗಿದೆ. ರೂ.೨,೯೫,೮೦೦ ಮೌಲ್ಯದ ಆಭರಣಗಳು, ರೂ.೨೪,೭೫,೦೦೦ ಮೌಲ್ಯದ ವಾಹನಗಳು ಹಾಗೂ ಮತ್ತಿತರ ವಸ್ತುಗಳ ಮೌಲ್ಯ ರೂ.೫೩,೮೧,೯೦೫ ಎಂದು ಅಂದಾಜಿಸಲಾಗಿದೆ. ಒಟ್ಟು ಮೌಲ್ಯ ಸೇರಿಸಿದರೆ ಇವರ ಆದಾಯಕ್ಕಿಂತ ಶೇ.೧೭೫.೧೪ರಷ್ಟು ಹೆಚ್ಚಳ ಕಂಡುಬAದಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿರುವುದಾಗಿ ತಿಳಿದುಬಂದಿದೆ.

ಸೋಮವಾರಪೇಟೆ ವರದಿ

ಕುಶಾಲನಗರದಿಂದ ಆಗಮಿಸಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಅನಂತರಾಮ್ ಸೇರಿದಂತೆ ಐವರು ಸಿಬ್ಬಂದಿಗಳು, ಸೋಮವಾರಪೇಟೆಯಲ್ಲಿರುವ ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗದ ಕಚೇರಿಯಲ್ಲಿ ಬೆಳಗ್ಗಿನಿಂದಲೇ ಪರಿಶೀಲನೆ ನಡೆಸಿದರು.

ಸೋಮವಾರಪೇಟೆ ಇಂಜಿನಿಯರಿAಗ್ ವಿಭಾಗದಲ್ಲಿ ಸಹಾಯಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫಯಾಜ್ ಅಹಮ್ಮದ್, ಅವರ ಮನೆ ಮೇಲೆ ಕಾರ್ಯಾಚರಣೆ ನಡೆಸಿದ ನಂತರ ನೇರವಾಗಿ ಕಚೇರಿಗೆ ಕರೆತಂದು, ಕಾಮಗಾರಿಗಳಿಗೆ ಸಂಬAಧಿಸಿದ ದಾಖಲೆಗಳು ಸೇರಿದಂತೆ ತನಿಖೆಗೆ ಪೂರಕವಾಗಿದ್ದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದರು.

ಕಡಬದಲ್ಲಿ ಧಾಳಿ: ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಜಯಣ್ಣ ಅವರ ಮನೆ ಮೇಲೆ ದಾಳಿ ನಡೆಸಿದ ನಂತರ, ಕಡಬ ತಾ.ಪಂ. ಕಚೇರಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದರು.ಚುನಾವಣೆ ಹಿನ್ನೆಲೆ ಕಳೆದ ವಾರವಷ್ಟೇ ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗವಾಗಿರುವ ಜಯಣ್ಣ ಅವರ ಕಚೇರಿ, ಪಂಜ ರಸ್ತೆಯಲ್ಲಿರುವ ವಿದ್ಯಾನಗರದ ಬಾಡಿಗೆ ಮನೆಗೂ ಅಧಿಕಾರಿಗಳು ತೆರಳಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಕುಶಾಲನಗರ ವರದಿ

ಬುಧವಾರ ಬೆಳಿಗ್ಗೆ ಕುಶಾಲನಗರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಇಬ್ಬರು ಅಧಿಕಾರಿಗಳ ನಿವಾಸಗಳಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಇಂಜಿನಿಯರ್ ಫಯಾಜ್ ಅಹಮದ್ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಎಂಬವರ ಮನೆಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಕುಶಾಲನಗರದ ಯೋಗಾನಂದ ಬಡಾವಣೆಯಲ್ಲಿರುವ ಇಂಜಿನಿಯರ್ ಫಯಾಜ್ ಅಹಮದ್ ಅವರ ಮನೆಗೆ ಬೆಳಿಗ್ಗೆ ೫:೩೦ಕ್ಕೆ ಪವನ್ ಕುಮಾರ್ ಅವರ ನೇತೃತ್ವದ ತಂಡ ಮತ್ತು ಪಟ್ಟಣದ ಶಿವರಾಮ ಕಾರಂತ ಬಡಾವಣೆಯಲ್ಲಿರುವ ಜಯಣ್ಣ ಅವರ ಮನೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಿಶೀಲನೆಯಲ್ಲಿ ತೊಡಗಿದ್ದರು.

ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರ ನಿವಾಸಕ್ಕೆ ಲೋಕಾಯುಕ್ತ ಇನ್ಸ್ಪೆಕ್ಟರ್ ಲೋಕೇಶ್ ಮತ್ತು ತಂಡ ದಾಳಿ ಮಾಡಿದೆ. ಜಯಣ್ಣ ಕಳೆದ ಕೆಲವು ವರ್ಷಗಳಿಂದ ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ತಾಲೂಕು ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಕುಶಾಲನಗರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕಚೇರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಅಲ್ಲಿ ಕೂಡ ಕಚೇರಿ ಮತ್ತು ಅಲ್ಲಿನ ನಿವಾಸಕ್ಕೆ ದಾಳಿ ಮಾಡಿ ಕಡತಗಳ ಪರಿಶೀಲನೆ ನಡೆಸಿದೆ.

ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಫಯಾಜ್ ಅಹಮದ್ ಅವರಿಗೆ ಸಂಬAಧಪಟ್ಟAತೆ ಕುಶಾಲನಗರ ಸಮೀಪದ ಗಡಿಭಾಗದಲ್ಲಿರುವ ತೋಟದ ಮನೆ, ಮೈಸೂರಿನಲ್ಲಿರುವ ನಿವಾಸಗಳ ಮೇಲೆ ಕೂಡ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. -ವರದಿ: ವಿಜಯ್, ಚÀಂದ್ರಮೋಹನ್