*ಗೋಣಿಕೊಪ್ಪ, ಮಾ. ೨೭: ಗೋಣಿಕೊಪ್ಪ ಹರಿಶ್ಚಂದ್ರಪುರದ ಶ್ರೀ ಕೀಲೇರಿ ಮುತ್ತಪ್ಪ ದೇವರ ಉತ್ಸವವು ತಾ.೨೯ ರಿಂದ ೩೧ರವರೆಗೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

೨೯ ರಂದು ಬೆಳಿಗ್ಗೆ ೫ ಗಂಟೆಗೆ ಗಣಪತಿ ಹೋಮ, ೮ ಗಂಟೆಗೆ ಪ್ರತಿಷ್ಠಾ ದಿನಾಚರಣೆ ಪೂಜೆ, ಸಂಜೆ ೬ ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ ನಡೆಯಲಿದೆ.

೩೦ರ ಸಂಜೆ ೬:೩೦ ಗಂಟೆಗೆ ಕಾರಣೋರ್ ವೆಳ್ಳಾಟಂ, ೭:೩೦ ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ, ೮:೩೦ ಗಂಟೆಗೆ ಗುಳಿಗನ್ ವೆಳ್ಳಾಟಂ, ರಾತ್ರಿ ೯:೩೦ ಗಂಟೆಗೆ ಕಂಡಾಕರ್ಣನ್ ವೆಳ್ಳಾಟಂ, ೧೦:೩೦ ಗಂಟೆಗೆ ವಸೂರಿಮಾಲಾ ವೆಳ್ಳಾಟಂ, ೧೧:೩೦ ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ, ಮಧ್ಯರಾತ್ರಿ ೧೨ ಗಂಟೆಗೆ ತಿರುವಪ್ಪನ್ ವೆಳ್ಳಾಟಂ, ೧೨:೩೦ ಗಂಟೆಗೆ ಪೋದಿ ವೆಳ್ಳಾಟಂ ೧ ಗಂಟೆಗೆ ಕಳಸ ಸ್ವಾಗತಂ ನೆರವೇರಲಿದೆ.

೩೧ರ ಪ್ರಾತಃ ಕಾಲ ೨ ಗಂಟೆಗೆ ಗುಳಿಗನ್ ತೆರೆ, ೪ ಗಂಟೆಗೆ ಕಂಡಾಕರ್ಣನ್ ತೆರೆ, ೫ ಗಂಟೆಗೆ ತಿರುವಪ್ಪನ್ ತೆರೆ, ೬ ಗಂಟೆಗೆ ಪೋದಿ ತೆರೆ, ೬:೩೦ ಗಂಟೆಗೆ ಕಾರಣೋರ್ ತೆರೆ, ೭ ಗಂಟೆಗೆ ವಸೂರಿಮಾಲಾ ತೆರೆ, ೭:೩೦ ಗಂಟೆಗೆ ವಿಷ್ಣುಮೂರ್ತಿ ತೆರೆ ನಡೆಯಲಿದೆ. ತಾ.೨೯ರಂದು ರಾತ್ರಿ ೮:೩೦ ಗಂಟೆಗೆ ಮತ್ತು ೩೦ ರಂದು ರಾತ್ರಿ ೯:೩೦ ಗಂಟೆಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.