ಕೋವರ್ ಕೊಲ್ಲಿ ಇಂದ್ರೇಶ್

ಬೆAಗಳೂರು, ಮಾ. ೨೭: ಜಾಗತಿಕ ಕೊರತೆಯ ಕಾರಣದಿಂದಾಗಿ ರೊಬಸ್ಟಾ ಕಾಫಿ ದರವು ಇದೇ ಮೊದಲ ಬಾರಿಗೆ ಅರೇಬಿಕಾ ಕಾಫಿ ದರವನ್ನೂ ಹಿಂದಿಕ್ಕಿ ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದೆ. ಸೋಮವಾರ ವಯನಾಡ್ ಮಾರುಕಟ್ಟೆಯಲ್ಲಿ ರೋಬಸ್ಟಾ ಹಸಿ ಕಾಫಿ ಹಣ್ಣುಗಳ ಫಾರ್ಮ್ಗೇಟ್ ಬೆಲೆ ಪ್ರತಿ ಕಿಲೋಗ್ರಾಂಗೆ ದಾಖಲೆಯ ರೂ. ೧೭೨ ಅನ್ನು ಮುಟ್ಟಿದೆ, ಕಳೆದ ವರ್ಷ ಇದೇ ಅವಧಿಯಲ್ಲಿ ಕೆಜಿಗೆ ರೂ. ೧೧೫ ಇತ್ತು. ಇದೇ ಸಮಯದಲ್ಲಿ ರೋಬಸ್ಟಾ ಪಾರ್ಚ್ಮೆಂಟ್ ಕಾಫಿ ಬೀಜಗಳ ಸ್ಪಾಟ್ ಬೆಲೆಯು ಕೆಜಿಗೆ ರೂ. ೩೧೫ ಕ್ಕೆ ಸರ್ವಕಾಲಿಕ ಏರಿಕೆ ದಾಖಲಿಸಿದೆ. ೨೦೨೩ರ ಇದೇ ಅವಧಿಯಲ್ಲಿ ದರ ಕಿಲೋಗೆ ೨೨೦ ರೂಪಾಯಿಗಳಷ್ಟಿತ್ತು. ಮಾರ್ಚ್ ೨೦೨೨ ರಲ್ಲಿ ಕಚ್ಚಾ ಹಣ್ಣುಗಳು ಮತ್ತು ಪಾರ್ಚ್ಮೆಂಟ್‌ಗೆ ದರ ಕ್ರಮವಾಗಿ ರೂ. ೮೦ ಮತ್ತು ರೂ. ೧೪೫ ರಷ್ಟಿತ್ತು. ಕೊಡಗಿನ ಮಾರುಕಟ್ಟೆಯಲ್ಲಿ ಬುಧವಾರ ರೊಬಸ್ಟಾ ಪಾರ್ಚ್ಮೆಂಟ್ ದರ ೫೦ ಕೆಜಿ ಚೀಲಕ್ಕೆ ೧೪,೪೦೦ ರಿಂದ ೧೪,೭೦೦ ರೂಪಾಯಿಗಳಿಗೆ ಏರಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ರೊಬಸ್ಟಾ ದರ ಯಾವತ್ತೂ ಅರೇಬಿಕಾ ಪಾರ್ಚ್ಮೆಂಟ್ ದರಕ್ಕಿಂತ೩ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಜಾಸ್ತಿ ಆಗಿದ್ದೇ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಚೆರ್ರಿ ಹಾಗೂ ಪಾರ್ಚ್ಮೆಂಟ್ ಕಾಫಿ ದರದಲ್ಲಿ ಅರೇಬಿಕಾ ದರವನ್ನೂ ಹಿಂದಿಕ್ಕಿದೆ. ಅರೇಬಿಕಾ ಚೆರಿ ಕಾಫಿ ದರ ೫೦ ಕೆಜಿ ಚೀಲಕ್ಕೆ ೮೦೦೦-೮೨೦೦ ಇದ್ದರೆ (ಔಟರ್ನ್ ಆಧರಿಸಿ) ರೊಬಸ್ಟಾ ದರ ೮೬೦೦ ರೂಪಾಯಿಗೂ ಹೆಚ್ಚಾಗಿದೆ.

ಮಾರುಕಟ್ಟೆ ತಜ್ಞರ ಪ್ರಕಾರ ಜಾಗತಿಕ ಬೇಡಿಕೆಯಲ್ಲಿ ಗಣನೀಯ ಏರಿಕೆ, ವಿಶ್ವದ ಅಗ್ರಗಣ್ಯ ಕಾಫಿ ರಫ್ತುದಾರ ಬ್ರೆಜಿಲ್, ಇಂಡೋನೇಷ್ಯಾ ಮತ್ತು ವಿಯಟ್ನಾಂನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಾಶವಾಗಿರುವುದೇ ದರ ಏರಿಕೆಗೆ ಕಾರಣವಾಗಿದೆ. ಈ ಸಾಲಿನಲ್ಲಿ ಕಳಪೆ ಇಳುವರಿ ಹೊರತಾಗಿಯೂ, ದೇಶದ ಕಾಫಿ ಉತ್ಪಾದನೆಯು ೩.೫೪ ಲಕ್ಷ ಟನ್‌ಗಳಿಗೆ ತಲುಪುವ ನಿರೀಕ್ಷೆಯಿದೆ, ಇದು ಕಳೆದ ವರ್ಷದ ಉತ್ಪಾದನೆ ೩.೫೨ ಲಕ್ಷ ಟನ್‌ಗಳಿಗಿಂತ ಸ್ವಲ್ಪ ಹೆಚ್ಚಳವಾಗಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ತಿಳಿಸಿದರು.

ಕಾಫಿ ದರದ ಸಾರ್ವಕಾಲಿಕ ದಾಖಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಮಾಜಿ ಸದಸ್ಯ ಡಾ ಸಣ್ಣುವಂಡ ಕಾವೇರಪ್ಪ ಅವರು ರೊಬಸ್ಟಾ ಕಾಫಿ ದರವು ಮತ್ತಷ್ಟು ಏರಿಕೆ ದಾಖಲಿಸಲಿದೆ ಎಂದರು. ವಿಯಟ್ನಾಂ ಹಾಗೂ ಇಂಡೋನೇಷ್ಯಾ ರಾಷ್ಟçಗಳಲ್ಲಿ ಕಾಫಿ ಬೆಳೆ ನಾಶ ಆಗಿರುವುದರಿಂದ ಅಲ್ಲದೆ ಗುಣಮಟ್ಟದಲ್ಲಿ ಭಾರತೀಯ ಕಾಫಿ ಇತರ ದೇಶಗಳಿಗಿಂತ ಮೇಲ್ಮಟ್ಟದಾಗಿರುವುದರಿಂದ ಪ್ರೀಮಿಯಂ ಬೆಲೆಗೆ ಮಾರಾಟವಾಗುತ್ತಿದೆ, ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಸರಬರಾಜಿನ ಕೊರತೆಯಿಂದಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಸಹಜವಾಗಿಯೇ ದರ ಹೆಚ್ಚಳವಾಗಿದೆ ಎಂದರು.

ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಕರ್ನಾಟಕವು ೭೧% ನಷ್ಟು ಭಾಗವನ್ನು ಹೊಂದಿದೆ, ನಂತರ ಕೇರಳ (೨೧%), ಮತ್ತು ತಮಿಳುನಾಡು (೫%) ಇವೆ. ಆಂಧ್ರಪ್ರದೇಶ, ಅಸ್ಸಾಂನಲ್ಲಿ ಕಾಫಿ ಬೆಳೆಯಲಾಗುತ್ತದಾದರೂ ಉತ್ಪಾದನೆ ತೀರಾ ಕಡಿಮೆ ಇದೆ. ಭಾರತದಿಂದ ರಫ್ತಾಗುವ ಶೇಕಡಾ ೭೦ ರಷ್ಟು ಕಾಫಿ ಮುಖ್ಯವಾಗಿ ಇಟಲಿ, ಬೆಲ್ಜಿಯಂ, ಜರ್ಮನಿ ಮತ್ತು ರಷ್ಯಾ ಗೆ ಹೋಗುತ್ತಿದೆ. ಸಾಮಾನ್ಯವಾಗಿ ಕಾಫಿ ಬೆಳೆಯುವ ದೇಶಗಳು ತಮ್ಮ ಎಲ್ಲಾ ಕಾಫಿಯನ್ನು ಮಾರಾಟ ಮಾಡುವುದಿಲ್ಲ. ಮಾರುಕಟ್ಟೆ ಬೆಲೆ ಸ್ಥಿರತೆಗಾಗಿ ಬಫರ್ ಸ್ಟಾಕ್ (ಃuಜಿಜಿeಡಿ sಣoಛಿಞ) ಇಟ್ಟುಕೊಂಡಿರುತ್ತವೆ. ಆದರೆ ಈ ಬಾರಿ ಎಲ್ಲಾ ಬಫರ್ ಸ್ಟಾಕ್‌ನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದರಿಂದ ಬಫರ್ ಸ್ಟಾಕ್ ಕೂಡ ಇಲ್ಲದಾಗಿದ್ದು ಇದೂ ಕೂಡ ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಹೆಚ್ಚಳಕ್ಕೆ ಕಾರಣ ಆಗಲಿದೆ.

ಕಾಫಿ ದರ ಏರಿಕೆಯಿಂದಾಗಿ ಮುಂದಿನ ತಿಂಗಳುಗಳಲ್ಲಿ ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕಾಫಿ ಶಾಪ್‌ಗಳಲ್ಲಿ ಬೆಲೆಗಳು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಬಳಕೆದಾರರಿಗೂ ಹೊರೆ ಆಗಬಹುದು. ಇದರಿಂದ ಅನಿವಾರ್ಯವಾಗಿ ಬಳಕೆದಾರರು ಟೀ ಸೇವನೆಗೆ ಒಲವು ತೋರಬಹುದು. ಅಲ್ಲದೆ ಇದೇ ರೀತಿ ಮುಂದಿನ ೨-೩ ವರ್ಷ ರೊಬಸ್ಟಾ ದರ ಏರುಮುಖ ಆದ ಅರೇಬಿಕಾ ಬೆಳೆಗಾರರು ಸಹಜವಾಗಿಯೇ ರೊಬಸ್ಟಾ ಬೆಳೆ ಬೆಳೆಯಲು ಮುಂದಾಗಬಹುದು. ಏಕೆಂದರೆ ಅರೇಬಿಕಾ ತೋಟದ ನಿರ್ವಹಣೆಯ ಶೇಕಡಾ ೫೦ ರಷ್ಟು ವೆಚ್ಚದಲ್ಲಿ ರೊಬಸ್ಟಾ ಕಾಫಿ ಬೆಳೆಯಬಹುದಲ್ಲದೆ ಇದಕ್ಕೆ ಬೋರರ್ ಕಾಟ ವಿರಳ.

ಮುಂದಿನ ದಿನಗಳಲ್ಲಿ ಈ ದರವು ಮತ್ತಷ್ಟು ಏರಿಕೆ ದಾಖಲಿಸಲಿದ್ದು ಅಲ್ಪ ಕುಸಿತ ದಾಖಲಿಸಿದರೂ ದರ ಸ್ಥಿರತೆ ಕಾಯ್ದುಕೊಳ್ಳಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.