ಸೋಮವಾರಪೇಟೆ, ಮಾ. ೨೭: ಕಳಪೆ ಕಾಮಗಾರಿ ಹಿನ್ನೆಲೆ ೭ ತಿಂಗಳಲ್ಲೇ ಡಾಂಬರು ಕಿತ್ತುಬರು ತ್ತಿದ್ದು, ಗುಣಮಟ್ಟದ ರಸ್ತೆ ನಿರ್ಮಾ ಣಕ್ಕೆ ಪ.ಪಂ. ಮುಂದಾಗಬೇಕೆAದು ಚೌಡೇಶ್ವರಿ ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ.

ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರ ಒದಗಿಸಿದ ನಗರೋತ್ಥಾನ ಯೋಜನೆಯ ಅನುದಾನ ಗುತ್ತಿಗೆದಾರನ ಅಸಡ್ಡೆಯಿಂದ ಪೋಲಾಗುತ್ತಿದೆ. ಜನರ ಅನುಕೂಲಕ್ಕಾಗಿ ನಿರ್ಮಿಸಿದ ರಸ್ತೆ ಕೆಲವೇ ದಿನಗಳಲ್ಲಿ ಕಿತ್ತುಬರುತ್ತಿದ್ದು, ರಸ್ತೆಗೆ ಹಾಕಿದ್ದ ಡಾಂಬರು ಚರಂಡಿ ಪಾಲಾಗಿದೆ.

ವಾರ್ಡ್ ನಂ. ೮ ರ ಚೌಡೇಶ್ವರಿ ಬಡಾವಣೆಯಲ್ಲಿ ನಗರೋತ್ಥಾನ ಯೋಜನೆಯಡಿ ಕೆಲವು ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ. ತಮ್ಮ ಮನೆಯ ಮುಂದೆ ರಸ್ತೆಯಾಗಿದೆ ಎಂದು ನೆಮ್ಮದಿಯಲ್ಲಿದ್ದ ನಿವಾಸಿ ಗಳಿಗೆ, ಕಾಮಗಾರಿ ಮುಗಿದ ಕೆಲದಿನಗಳಲ್ಲಿಯೇ ಅಸಲೀಯತ್ತು ತಿಳಿದುಬಂದಿದೆ.

ಈ ರಸ್ತೆಯಲ್ಲಿ ಹೆಚ್ಚಾಗಿ ವಾಹನಗಳು ಸಂಚರಿಸದಿದ್ದರೂ ಕೇವಲ ೭ ತಿಂಗಳಿನಲ್ಲಿಯೇ ಜಲ್ಲಿ, ಡಾಂಬರು ಕಿತ್ತುಬಂದಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಲಿಲ್ಲ. ಡಾಂಬರು ಹಾಕುವ ಸಂದರ್ಭವೇ ಆಕ್ಷೇಪ ವ್ಯಕ್ತಪಡಿಸಿದ್ದರೂ ಅಧಿಕಾರಿಗಳು ತಿರುಗಿ ನೀಡಿಲ್ಲ. ಗುತ್ತಿಗೆದಾರನಿಂದಲೇ ಮತ್ತೊಮ್ಮೆ ರಸ್ತೆ ಕಾಮಗಾರಿ ನಡೆಸಿಕೊಡಬೇಕು ಎಂದು ವಾರ್ಡ್ ಸದಸ್ಯ ಶುಭಕರ ಒತ್ತಾಯಿಸಿದ್ದಾರೆ.