ಮಡಿಕೇರಿ, ಮಾ. ೨೭: ಸುಂಟಿಕೊಪ್ಪ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ವಿಶೇಷಚೇತನರು ಹಾಗೂ ಅವರ ಪಾಲಕರಿಗೆ ಸಮುದಾಯ ಆರೋಗ್ಯ ತಪಾಸಣ ಶಿಬಿರವನ್ನು ಆಯೋಜಿಸಲಾಗಿತ್ತು. ಸ್ವಸ್ಥ ಕೇಂದ್ರದ ವಿದ್ಯಾರ್ಥಿಗಳು ಸೇರಿದಂತೆ ಇತರರು ಸೇರಿ ಒಟ್ಟು ೯೬ ಫಲಾನುಭವಿಗಳು ಶಿಬಿರದಲ್ಲಿ ಆಗಮಿಸಿ ಪ್ರಯೋಜನ ಪಡೆದುಕೊಂಡರು.
ಶಿಬಿರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಇ.ಎನ್.ಟಿ, ಕಣ್ಣು, ಚರ್ಮ, ಮೂಳೆತಜ್ಞರು, ಮಕ್ಕಳ ತಜ್ಞರು ಹಾಗೂ ಮನೋಶಾಸ್ತçಜ್ಞರು ಹಾಜರಿದ್ದು ತಪಾಸಣೆ ನಡೆಸಿಕೊಟ್ಟರು.
ಸಮರ್ಪಕ ದಾಖಲೆಗಳನ್ನು ನೀಡಿ ಸೌಲಭ್ಯಗಳನ್ನು ಪಡೆಯಲು ಡೀನ್ ಕರೆ
ವಿಶೇಷಚೇತನರಿಗೆ ಸರಕಾರದಿಂದ ಹಲವಾರು ಸೌಲಭ್ಯಗಳು ಲಭ್ಯವಿವೆ. ಇವುಗಳನ್ನು ಪಡೆಯಲು ಸರಿಯಾದ ದಾಖಲೆಗಳು ಇದ್ದಲ್ಲಿ ಬಹಳ ಸುಲಭ. ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳುವಂತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ.ವಿಶಾಲ್ ಕುಮಾರ್ ಅವರು ಕರೆ ನೀಡಿದರು. ಆರೋಗ್ಯ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವೈದ್ಯಕೀಯ ಕಾಲೇಜಿನಲ್ಲಿ ಇತರ ತಪಾಸಣಾ ಕೇಂದ್ರಗಳ ಸಹಕಾರದಿಂದ ವಿಶೇಷಚೇತನರ ತಪಾಸಣೆ ನಡೆಸಿ, ಅಂಗವೈಕಲ್ಯ ಪ್ರಮಾಣದ ಕುರಿತು ಪ್ರಮಾಣ ಪತ್ರ ನೀಡಲಾಗುತ್ತದೆ. ಈ ಪತ್ರವು ನೌಕರಿಯನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು. ಬಿ.ಪಿ.ಎಲ್ ಕಾರ್ಡುದಾರರು ಆಯುಷ್ಮಾನ್ ಕಾರ್ಡ್ ಮಾಡಿಸಿದ್ದಲ್ಲಿ ರೂ.೫ ಲಕ್ಷದವರೆಗೂ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕುತ್ತದೆ ಎಂದರು.
ಸ್ವಸ್ಥ ಪುನರ್ವಸತಿ ಕೇಂದ್ರದ ನಿರ್ದೇಶಕಿ ಆರತಿ ಸೋಮಯ್ಯ ಅವರು ಮಾತನಾಡಿ, ೨೦೧೦ ರಿಂದ ಸಮುದಾಯ ಆರೋಗ್ಯ ಶಿಬಿರ ನಡೆಸುತ್ತಿದ್ದೇವೆ. ತಮ್ಮ ಮಕ್ಕಳಿಗೆ ವಿಶೇಷ ಶಿಕ್ಷಣದ ಅವಶ್ಯಕತೆ ಇರುವುದಾಗಿ ಪೋಷಕರನ್ನು ಒಪ್ಪಿಸುವುದು ಬಹಳ ಕಷ್ಟಕರ. ಈ ನಿಟ್ಟಿನಲ್ಲಿ ಇನ್ನಷ್ಟೂ ಜಾಗೃತಿ ಅಗತ್ಯವಿದೆ ಎಂದರು. ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದಲೇ ಮಾಸ್ಕ್ ಹಾಗೂ ಪಿ.ಪಿ.ಇ ಕಿಟ್ಗಳನ್ನು ತಯಾರಿಸಿ ಕೊಡಗು ವೈದ್ಯಕೀಯ ಸಂಸ್ಥೆಗೆ ನೀಡಿರುವುದಾಗಿ ತಿಳಿಸಿದರು.
ಸ್ವಸ್ಥ ಕೇಂದ್ರದ ಸ್ಥಾಪಕಿ ಗಂಗಾ ಚಂಗಪ್ಪ ಅವರು ಮಾತನಾಡಿ, ಸಂಸ್ಥೆ ಸ್ಥಾಪನೆ ಕಷ್ಟಕರವಾಗಿದ್ದರು, ತೃಪ್ತಿ ತಂದಿದೆ. ಮಕ್ಕಳ ಜೀವನದಲ್ಲಿ ಬದಲಾವಣೆ ತಂದ ನೆಮ್ಮದಿ ಇದೆ. ಶಿಬಿರದಲ್ಲಿ ಸಹಕಾರ ನೀಡುತ್ತಿರುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಮಕ್ಕಳ ತಜ್ಞ ಡಾ.ಗೌರವ್ ಅಯ್ಯಪ್ಪ ಅವರು ಮಾತನಾಡಿ, ಮಕ್ಕಳು ಜನಿಸಿದ ನಂತರದ ೧ ನಿಮಿಷ ಅಮೂಲ್ಯ. ಈ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕಿಯರು ಕೈಗೊಳ್ಳಬೇಕಾದ ಅಗತ್ಯ ಕ್ರಮದ ಬಗ್ಗೆ ಶಿಕ್ಷಣ ಅಗತ್ಯವಿದೆ ಎಂದರು. ಚಿಕ್ಕ ಮಕ್ಕಳನ್ನು ಹಲವು ರೋಗಗಳಿಗೆ ಸಂಬAಧಿಸಿದAತೆ ಸ್ಕಿçÃನಿಂಗ್ ಮಾಡುವ ಸಂದರ್ಭ ಆರಂಭಿಕ ಹಂತದಲ್ಲಿಯೇ ಹಿಮಟೊಮ ಅಂತಹ ಕಾಯಿಲೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು ಎಂದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರುಗಳಾದ ಡಾ.ಶ್ವೇತಾ, ಡಾ.ಕೃಪಾಲಿನಿ, ಡಾ.ಹರ್ಷವರ್ಧನ್, ಡಾ.ವಿನಯ್, ಡಾ.ಸಾಲ್ಮ, ಕಾವ್ಯ, ಮಹೇಶ್ ಹಾಗೂ ಮೋಹನ್ ಲಾಲ್, ಟಾಟಾ ಎಸ್ಟೇಟ್ ಸುಂಟಿಕೊಪ್ಪ ವ್ಯವಸ್ಥಾಪಕ ಗೌತಮ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಂಸ್ಥೆಯ ಶೈಕ್ಷಣಿಕ ಸಂಯೋಜಕಿ ವನಿತಾ ನಂಜಪ್ಪ ಅವರು ಸ್ವಾಗತಿಸಿದರು. ರೇಖಾ ಅವರು ಪ್ರಾರ್ಥಿಸಿದರು. ಮಂಜುನಾಥ್ ಅವರು ನಿರೂಪಿಸಿದರು. ಮಂಜುಳಾ ಅವರು ವಂದಿಸಿದರು.