ಮಡಿಕೇರಿ, ಮಾ. ೨೬: ಸುಂಟಿಕೊಪ್ಪದಲ್ಲಿರುವ ಸ್ವಸ್ಥ ವಿಶೇಷ ಶಾಲೆಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ತಾ.೨೭ ರಂದು (ಇಂದು) ವಿಶೇಷಚೇತನರಿಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಇಂದು ಬೆಳಿಗ್ಗೆ ೧೦ ಗಂಟೆಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹಾಗೂ ನಿರ್ದೇಶಕ ಡಾ.ವಿಶಾಲ್ ಕುಮಾರ್, ಕೂರ್ಗ್ ಫೌಂಡೇಷನ್ ಟ್ರಸ್ಟಿ ಗಂಗಾ ಚಂಗಪ್ಪ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆರೋಗ್ಯ ಅಧಿಕಾರಿ ಡಾ.ಸತೀಶ್ ಕುಮಾರ್ ಹಾಗೂ ವೀರಾಜಪೇಟೆ ಆಶೀರ್ವಾದ್ ಮೆಡಿಕಲ್ ಸೆಂಟರ್‌ನ ಡಾ.ಗೌರವ್ ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರುಗಳಾದ ಡಾ.ಶ್ವೇತಾ, ಡಾ.ಕೃಪಾಲಿನಿ, ಡಾ.ಹರ್ಷವರ್ಧನ್, ಡಾ.ವಿನಯ್, ಡಾ.ಸಾಲ್ಮ, ಕಾವ್ಯ. ಮಹೇಶ್ ಹಾಗೂ ಮೋಹನ್ ಲಾಲ್ ಅವರುಗಳು ಆರೋಗ್ಯ ಶಿಬಿರ ನೆರವೇರಿಸಲಿದ್ದಾರೆ ಎಂದು ಸ್ವಸ್ಥ ವಿಶೇಷ ಶಾಲೆಯ ನಿರ್ದೇಶಕಿ ಆರತಿ ಸೋಮಯ್ಯ ಅವರು ಮಾಹಿತಿ ಇತ್ತಿದ್ದಾರೆ.