ಕೋವರ್ ಕೊಲ್ಲಿ ಇಂದ್ರೇಶ್

ಕುಕ್ಕೆ ಸುಬ್ರಮಣ್ಯ, ಮಾ. ೨೬: ಶನಿವಾರ ಶಂಕಿತ ನಕ್ಸಲರು ಶಸ್ತç ಸಜ್ಜಿತರಾಗಿ ಭೇಟಿ ನೀಡಿದ್ದ ಅನುಮಾನದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ನಾಲ್ವರ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳದಲ್ಲಿ ಕೇಂದ್ರ ಕಚೇರಿ ಹೊಂದಿರುವ ರಾಜ್ಯ ನಕ್ಸಲ್ ನಿಗ್ರಹ ದಳ ಈ ಕುರಿತು ಕೂಂಬಿAಗ್ ಕಾರ್ಯಾಚರಣೆ ನಡೆಸುತಿದ್ದು ಮಾಹಿತಿ ಕಲೆ ಹಾಕುತ್ತಿದೆ. ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಐನೆಕಿದು ಗ್ರಾಮದ ಕಾಡಂಚಿನಲ್ಲಿ ನೆಲೆಸಿರುವ ರೈತ ಅಶೋಕ್ ಎಂಬುವರ ಮನೆಗೆ ಬಂದಿದ್ದ ಶಂಕಿತ ನಕ್ಸಲರು ಅವರ ಮನೆಯಿಂದ ಅಕ್ಕಿ, ಮೆಣಸಿನಕಾಯಿ ಹಾಗೂ ಇನ್ನಿತರ ದಿನಸಿ ಪದಾರ್ಥಗಳನ್ನು ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಮಾರ್ಚ್ ೧೭ ರಂದು ಶಂಕಿತ ನಕ್ಸಲರು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೂಜಿಮಲೆ ಅರಣ್ಯದಂಚಿನ ಮನೆಗೆ ಭೇಟಿ ನೀಡಿದ್ದು, ಇದೀಗ ವಾರದ ಅಂತರದಲ್ಲೇ ಎರಡನೇ ಬಾರಿ ಕಾಣಿಸಿಕೊಂಡು ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ರೈತ ಅಶೋಕ್ ಶನಿವಾರದಂದು ಸಂಜೆ ೬.೩೦ ರ ಸಮಯಕ್ಕೆ ಸಣ್ಣದಾಗಿ ಮಳೆ ಬರುತಿದ್ದ ಸಂದರ್ಭ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ನಮ್ಮ ಮನೆಗೆ ಬಂದಿದ್ದರು. ಓರ್ವ ಮಹಿಳೆ ೩೦-೩೫ ವರ್ಷದ ವಯಸ್ಸಿನವರಾಗಿದ್ದು, ಮತ್ತೋರ್ವ ಮಹಿಳೆಗೆ ೪೦-೪೫ ವರ್ಷ ವಯಸ್ಸಾಗಿತ್ತು. ಕನ್ನಡ, ತುಳು ಭಾಷೆಗಳಲ್ಲಿ ಮಾತನಾಡುತ್ತಿದ್ದ ಅವರು ಬಂದೂಕುಗಳನ್ನು ಹೊಂದಿದ್ದರು. ಅವರು ತಮ್ಮನ್ನು ನಕ್ಸಲರೆಂದು ಪರಿಚಯಿಸಿಕೊಂಡು, ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬಡವರಿಗೆ ನ್ಯಾಯ ಒದಗಿಸುವುದಕ್ಕಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು. ಅವರು ಅಕ್ಕಿ, ಮೆಣಸು, ಸಕ್ಕರೆ ಸೇರಿದಂತೆ ಕೆಲವು ದಿನಸಿ ಪದಾರ್ಥಗಳನ್ನೂ ನೀಡುವಂತೆ ಕೇಳಿದರು. ಭಯದಿಂದ ನಾವು ಅವರು ಕೇಳಿದ್ದನ್ನು ಕೊಟ್ಟೆವು. ಈ ಬಳಿಕ ತಮ್ಮನ್ನು ಬೆಂಬಲಿಸುವAತೆ ಕೇಳಿದ ಅವರು ಈ ಮಾಹಿತಿಯನ್ನು ಯಾರಿಗಾದರೂ ನೀಡಿದರೆ ಕೊಲ್ಲುವುದಾಗಿ ಬಂದೂಕು ತೋರಿಸಿ ಬೆದರಿಕೆ ಹಾಕಿ ಸಂಜೆ ೭:೩೦ರ ವೇಳೆಗೆ ಹೊರಟುಹೋದರು ಎಂದು ಹೇಳಿದ್ದಾರೆ.

ಈ ಶಂಕಿತ ನಕ್ಸಲರ ವಿರುದ್ಧ ಭಾರತೀಯ ಶಸ್ತಾçಸ್ತç ಕಾಯ್ದೆ ಮತ್ತು ೧೯೬೭ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ನಕ್ಸಲ್ ನಿಗ್ರಹ ಪಡೆಯ ಎಸ್‌ಪಿ ಜಿತೇಂದ್ರ ದಯಮ್ ಅವರು ಶಂಕಿತ ನಕ್ಸಲರ ಗುರುತು ಪತ್ತೆ ಹಚ್ಚುವ ಪ್ರಯತ್ನ ಮುಂದುವರೆದಿದೆ. ಮಳೆ ಬರುತಿದ್ದ ಕಾರಣಕ್ಕೆ ಆಕಸ್ಮಿಕವಾಗಿ ಕಾಡಂಚಿನ ಮನೆಗೆ ಭೇಟಿ ನೀಡಿರುವ ಅವರು ಕೆಲವು ದಿನಸಿ ವಸ್ತುಗಳನ್ನು ಕೊಂಡೊಯ್ದಿದ್ದಾರೆ. ನಮ್ಮ ಸಿಬ್ಬಂದಿಯಿAದ ಕೂಂಬಿAಗ್ ಕರ್ನಾಟಕ ಕೇರಳ ಗಡಿಗಳಲ್ಲಿ ಮುಂದುವರಿದಿದೆ ಎಂದು ತಿಳಿಸಿದರು.

ಅರಣ್ಯದಲ್ಲಿ ಅಡಗುದಾಣ ಬದಲಿಸುವ ಸಂದರ್ಭದಲ್ಲಿ ನಕ್ಸಲರು ಕಾಡಂಚಿನ ಮನೆಗೆ ಭೇಟಿ ನೀಡಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಮನೆಗೆ ಭೇಟಿ ನೀಡಿದ್ದವರು ನಕ್ಸಲ್ ವಿಕ್ರಂ ಗೌಡ ಮತ್ತು ಆತನ ತಂಡದವರೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.