ಸೋಮವಾರಪೇಟೆ, ಮಾ. ೨೬: ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಕುಂಬೂರು-ಹೊಸತೋಟ ಮಾರ್ಗ ಮಧ್ಯೆ ಇರುವ ಎ.ಜೆ. ಎಸ್ಟೇಟ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಹೊತ್ತಿ ಉರಿದಿದೆ.

ಸ್ಥಳೀಯ ನಿವಾಸಿ ಲೋಕೇಶ್ ಅವರ ಮನೆಯ ಮುಂಭಾಗದ ರಸ್ತೆ ಬದಿಗೆ ಒತ್ತಿಕೊಂಡಿರುವAತೆ ಎ.ಜೆ. ಎಸ್ಟೇಟ್ ಇದ್ದು, ಇದರ ಬದಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಬೇಲಿ, ಕಾಫಿ ತೋಟ, ಕರಿಮೆಣಸು ಬಳ್ಳಿಗಳಿಗೆ ಹಾನಿಯಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸಿದ್ದಾರೆ.

ಮಧ್ಯಾಹ್ನದ ವೇಳೆಗೆ ಬೆಂಕಿ ಹೊತ್ತಿಕೊಂಡು ಭಾರೀ ಅನಾಹುತ ಸಂಭವಿಸುವ ಮೊದಲೇ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಪ್ರವೃತ್ತರಾದ ಹಿನ್ನೆಲೆ ಹೆಚ್ಚಿನ ಅನಾಹುತ ತಪ್ಪಿದೆ.