ಅಮ್ಮತ್ತಿ , ಮಾ. ೨೬: ಅಮ್ಮತ್ತಿಯ ನಿತ್ಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ ೫೦ನೇ ವರ್ಷದ ತೆರೆ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ೩ ದಿನಗಳ ಕಾಲ ನಡೆಯಿತು.

ವೀರಾಜಪೇಟೆ ರಸ್ತೆಯ ವಸೂರಿಮಾಲಾ ದೇವಿಯ ಸ್ನಾನದ ಸ್ಥಾನದಿಂದ ತಾಲಫೊಲಿ ವಾದ್ಯ ಮೇಳಗಳೊಂದಿಗೆ ದೇವಾಲಯದ ವರೆಗೆ ಮೆರವಣಿಗೆ ನಡೆಯಿತು. ಕೇರಳದ ಸಿಂಗಾರಿ ಮೇಳದೊಂದಿಗೆ ಲೈವ್ ವೈಲಿನ್ ಮತ್ತು ಪಿಯಾನೋ ಷೋ ಸಾರ್ವಜನಿಕರನ್ನು ರಂಜಿಸಿತು. ರಾತ್ರಿ ಸ್ಥಳೀಯ ಮಹಿಳೆಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಕೈಂಕರ್ಯಗಳು ನಡೆದವು. ಭಕ್ತಾದಿಗಳಿಗೆ ೩ ದಿನಗಳ ಕಾಲ ಅನ್ನ ಸಂತರ್ಪಣೆ ನಡೆಯಿತು.