ಸೋಮವಾರಪೇಟೆ, ಮಾ. ೨೬: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪಟ್ಟಣದ ಟರ್ಫ್ ಮೈದಾನದಲ್ಲಿ ತಾ. ೨೮ ರಿಂದ ಏಪ್ರಿಲ್ ೨೮ರವರೆಗೆ ಒಂದು ತಿಂಗಳ ಕಾಲ ಹಾಕಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಹೆಚ್.ಎನ್.ಅಶೋಕ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ ೭ ರಿಂದ ೨೦ ವರ್ಷದೊಳಗಿನ ಆಸಕ್ತ ವಿದ್ಯಾರ್ಥಿಗಳು, ಯುವಕ ಯುವತಿಯರು ಪಾಲ್ಗೊಳ್ಳಬಹುದು ಎಂದು ಹೇಳಿದರು.
ಪ್ರತಿದಿನ ಬೆಳಿಗ್ಗೆ ೬.೩೦ರಿಂದ ೮.೩೦ ರವರೆಗೆ ತರಬೇತಿ ನಡೆಯಲಿದ್ದು, ಶಿಬಿರಾರ್ಥಿಗಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ನೀಡಲಾಗುವುದು. ಡಾಲ್ಫೀನ್ಸ್ ಕ್ಲಬ್ ವತಿಯಿಂದ ಬೇಸಿಗೆ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ನಡೆಸಲಾಗುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಟರ್ಫ್ ಮೈದಾನದಲ್ಲಿ ಹಾಕಿ ಅಭ್ಯಾಸ ಮಾಡಲು ಅವಕಾಶವಿದ್ದು, ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸೂಚನೆಯಂತೆ ಶಿಬಿರದಲ್ಲಿ ಟರ್ಫ್ ಮೈದಾನಕ್ಕೆ ಬಳಸುವ ಶೂ ಮತ್ತು ಹಾಕಿ ಸ್ಟಿಕ್ ಹೊಂದಿರಬೇಕು. ಶಿಬಿರಕ್ಕೆ ನೋಂದಣಿ ಮಾಡಿಕೊಳ್ಳುವ ಆಸಕ್ತ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ಕಾರ್ಡ್ ಮತ್ತು ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಹಾಜರು ಪಡಿಸಬೇಕು. ಹೆಚ್ಚಿನ ಮಾಹಿತಿಗೆ ಮೊ: ೯೫೩೫೩೯೩೦೫೦, ೯೯೦೨೬೩೩೭೮೨ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಶಾಲಾ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಶಿಬಿರದ ಮಹತ್ವದ ಬಗ್ಗೆ ತಿಳಿಸಿಕೊಡಬೇಕು ಎಂದ ಅವರು, ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಸ್ಥಳೀಯ ತರಬೇತುದಾರರೊಂದಿಗೆ ಅಂರ್ರಾಷ್ಟಿçÃಯ ಹಾಕಿ ಆಟಗಾರರಾದ ಎಸ್.ವಿ.ಸುನಿಲ್ ಹಾಗೂ ವಿಕ್ರಂಕಾAತ್ ಅವರುಗಳು ತರಬೇತಿ ನೀಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕ್ಲಬ್ನ ಕಾರ್ಯದರ್ಶಿ ಕೆ.ಎಸ್.ಪ್ರಕಾಶ್, ಖಜಾಂಚಿ ಪ್ರಸನ್ನ ನಾಯರ್, ಪದಾಧಿಕಾರಿಗಳಾದ ಪ್ರಜಾ ಪೂಣಚ್ಚ, ರಂಜನ್ ಇದ್ದರು.