ಚೆಟ್ಟಳ್ಳಿ, ಮಾ. ೨೬: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ವಿವಿಧ ತರಕಾರಿ ತಳಿಗಳನ್ನು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ತಾ. ೨೧ ರಿಂದ ಪ್ರಾರಂಭಗೊAಡು ಏಪ್ರಿಲ್ ೩೦ ರವರೆಗೆ ಪ್ರದರ್ಶನಕ್ಕಿಡಲಾಗುತ್ತದೆ.

ಬೀನ್ಸ್, ಟೊಮೆಟೋ, ಕಾಯಿಮೆಣಸು, ಬದನೆ, ಸೋರೆಕಾಯಿ, ಕುಂಬಳ ಕಾಯಿ, ಹೀರೆಕಾಯಿ, ಬಟಾಣಿ, ಅವರೆ, ಅಲಸಂಡೆ, ದಂಟಿಸೊಪ್ಪು, ಪಾಲಕ್, ಮೂಲಂಗಿ, ಕರ್ಬುಜಾ, ಕಲ್ಲಂಗಡಿ, ಗ್ಲಾö್ಯಡಿಯೋಸ್ ಹಾಗೂ ಮನೆಯ ತಾರಸಿಯಲ್ಲಿ ಗ್ರೋಬ್ಯಾಗ್‌ಗಳಲ್ಲಿ ಕೋಕೋಪಿಟ್‌ಗಳ ಮೂಲಕ ಬೆಳೆಯುವ ಟೆರೆಜ್ ಗಾರ್ಡನ್ ಗಿಡಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕಿಡಲಾಗಿದೆ.

ಸಾವಯವ ತರಕಾರಿ ಬೆಳೆಗೆ ಒತ್ತು

ರೈತರು ತರಕಾರಿ ಬೆಳೆಯಲ್ಲಿ ವಿವಿಧ ಬಗೆಯ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಕೆಯಾಗುತ್ತಿದೆ. ಜೀವಾಮೃತ, ಪಂಚಗವ್ಯ, ಜೈವಿಕ ಗೊಬ್ಬರ, ಬೇವಿನ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿಯ ಮೂಲಕ ತರಕಾರಿಯನ್ನು ಬೆಳೆಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಪ್ಲಾಟ್‌ಗಳಲ್ಲಿ ವಿವಿಧ ಸಾವಯವ ತರಕಾರಿ ಬೆಳೆಯನ್ನು ಬೆಳೆೆಸಲಾಗಿದೆ. ರೈತರು ಕೇಂದ್ರಕ್ಕೆ ಭೇಟಿ ನೀಡಿ ತರಕಾರಿ ಬೆಳೆಯ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ಪಡೆಯಬಹುದಾಗಿದೆ.

- ಕರುಣ್ ಕಾಳಯ್ಯ