ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗೊಂದಲ

ಹಾಸನ, ಮಾ. ೨೭: ಹಾಸನ ಜಿಲ್ಲೆ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ನಡೆದಿದ್ದು, ಗೊಂದಲ, ಕೋಲಾಹಲ ಉಂಟಾಗಿದೆ. ಹಾಸನ ಜಿಲ್ಲೆಯಲ್ಲಿ ತಾ. ೩೦ ರಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಪ್ರಚಾರ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಈ ಸಭೆ ನಡೆದಿತ್ತು. ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಶ್ರೇಯಸ್ ಪಟೇಲ್‌ಗೆ ೩೦,೦೦೦ ಮತಗಳ ಮುನ್ನಡೆ ಲಭ್ಯವಾಗುವಂತೆ ಮಾಡುವುದಕ್ಕೆ ಶಕ್ತಿ ಹೊಂದಿರುವ ಶ್ರೀಧರ್ ಗೌಡ ಅವರು ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದು ಏಕೆ ಎಂದು ಶ್ರೀಧರ್ ಗೌಡ ಅವರನ್ನು ಕೆ.ಎನ್. ರಾಜಣ್ಣ ಪ್ರಶ್ನಿಸಿದಾಗ ರಾಜಣ್ಣ ಅವರ ಪ್ರಶ್ನೆಗೆ ಶ್ರೀಧರ್ ಗೌಡ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು ಈ ವೇಳೆಯಲ್ಲಿ ಗೊಂದಲ, ಕೋಲಾಹಲ ಉಂಟಾಗಿತ್ತು. ಇದಕ್ಕೂ ಮುನ್ನ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಧರ್ ಗೌಡ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರಯಸ್ ಪಟೇಲ್ ೩೦ ಸಾವಿರ ಮತಗಳ ಮುನ್ನಡೆ ಸಾಧಿಸಲಿದ್ದಾರೆ. ಕೆ.ಎನ್.ರಾಜಣ್ಣ ಕಳೆದ ವಿಧಾನಸಭಾ ಚುನಾವಣೆ ವೇಳೆ ಸೋತಿದ್ದು ಏಕೆ ಎಂದು ಪ್ರಶ್ನಿಸಿದಾಗ ಶ್ರೀಧರ್ ಗೌಡ ಬೆಂಬಲಿಗರು ಮತ್ತು ಇತರ ಮುಖಂಡರ ಬೆಂಬಲಿಗರ ನಡುವೆ ಜಟಾಪಟಿ ನಡೆಯಿತು. ಕೊನೆಗೆ ಕೆ.ಎನ್. ರಾಜಣ್ಣ ಅವರು ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ, ಅಹಂಕಾರವಿದ್ದರೆ ಬದಿಗೊತ್ತಿ ಹಾಸನ ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸಿ ಎಂದು ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ವಿಚಲಿತರಾಗಿ ಭಾಷಣ ನಿಲ್ಲಿಸಿದರು. ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಕಾರ್ಮಿಕರನ್ನುದ್ದೇಶಿಸಿ ಮಾತನಾಡುವಾಗ ಕಾರ್ಮಿಕರು ಪರಸ್ಪರ ಗೊಣಗಿಕೊಂಡು ದೂರು ಹೇಳಿದರು. ಮುಖಂಡರ ಮಾತು ಕೇಳಲು ಆಸಕ್ತಿ ಇಲ್ಲದಿದ್ದರೆ ಸಭಾಂಗಣದಿAದ ಹೊರ ಹೋಗುವಂತೆ ಕಾರ್ಯಕರ್ತರಿಗೆ ಸಚಿವರು ಸೂಚಿಸಿದರು.

ರೈಲಿನಲ್ಲಿ ಚಿನ್ನಾಭರಣ ದೋಚುತ್ತಿದ್ದವರ ಬಂಧನ

ಬೆAಗಳೂರು, ಮಾ. ೨೭: ರೈಲುಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ ಮೂವರು ಆರೋಪಿಗಳನ್ನು ರೈಲ್ವೇ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಮೊಹಮ್ಮದ್ ಶೌಕತ್ ಅಲಿ, ಮೊಹಮ್ಮದ್ ಸತ್ತಾರ್ ಮತ್ತು ಮೊಹಮ್ಮದ್ ಅವದ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ೩ ತಿಂಗಳ ಹಿಂದೆ ೧೨೦ ಗ್ರಾಂ ಚಿನ್ನಾಭರಣವನ್ನು ಕಳ್ಳತನ ಮಾಡಿದ್ದರು. ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಆರ್‌ಪಿ ಅಧೀಕ್ಷಕಿ ಎಸ್‌ಕೆ ಸೌಮ್ಯಲತಾ, ಕಳೆದ ವರ್ಷ ಡಿಸೆಂಬರ್ ೧೭ ರಂದು ಜೋಧ್‌ಪುರ-ಬೆಂಗಳೂರು ಎಕ್ಸ್ಪ್ರೆಸ್‌ನಲ್ಲಿ ಘಟನೆ ನಡೆದಿತ್ತು. ಬಳಿಕ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ರಾಜಸ್ಥಾನದ ವೃದ್ಧ ದಂಪತಿ, ಜೋಧಪುರದಿಂದ ಬೆಂಗಳೂರಿಗೆ ರೈಲಿನಲ್ಲಿ ೨೦೨೩ರ ಡಿಸೆಂಬರ್ ೧೭ರಂದು ಬರುತ್ತಿದ್ದರು. ಇದೇ ರೈಲು ಹತ್ತಿದ್ದ ಆರೋಪಿಗಳು, ದಂಪತಿಯನ್ನು ಪರಿಚಯ ಮಾಡಿಕೊಂಡಿದ್ದರು. ಆತ್ಮಿಯವಾಗಿ ಮಾತನಾಡಿದ್ದರು. ಪ್ರಯಾಣದ ವೇಳೆಯಲ್ಲಿ, ಮತ್ತು ಬರುವ ಔಷಧಿ ಬೆರೆಸಿದ್ದ ಬಾದಾಮಿ ಹಾಲನ್ನು ದಂಪತಿಗೆ ಕುಡಿಸಿದ್ದರು. ಹಾಲು ಕುಡಿದಿದ್ದ ದಂಪತಿ ಪ್ರಜ್ಞೆ ತಪ್ಪಿದ್ದರು. ನಂತರ, ದಂಪತಿ ಬಳಿಯಿದ್ದ ರೂ.೨೦ ಸಾವಿರ ನಗದು ಹಾಗೂ ೧೨೦ ಗ್ರಾಂ ಚಿನ್ನಾಭರಣ ಕದ್ದೊಯ್ದಿದ್ದರು. ಈ ಬಗ್ಗೆ ದಂಪತಿ ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಅರಸೀಕೆರೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ ೩೨೮, ೩೭೯ ಮತ್ತು ೩೪ ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಂದು ಘಟನೆಯಲ್ಲಿ ಮುರ್ಡೇಶ್ವರ-ಬೆಂಗಳೂರು ಎಕ್ಸ್ಪ್ರೆಸ್‌ನಲ್ಲಿ ಎಸಿ ಕಂಪಾರ್ಟ್ಮೆAಟ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಂದ ೩೮ ಲಕ್ಷ ರೂಪಾಯಿ ಮೌಲ್ಯದ ೪೦೨ ಗ್ರಾಂ ಚಿನ್ನ ಕದ್ದ ಇಬ್ಬರು ಖತರ್ನಾಕ್ ಕಳ್ಳಿಯರನ್ನು ರೈಲ್ವೇ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಸಂಧ್ಯಾ ಹಾಗೂ ಗಾಯತ್ರಿ ಎಂದು ಗುರ್ತಿಸಲಾಗಿದೆ. ಸಮೀಮ್ ಕುನಿಲ್ ಎಂಬ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಇವರ ಗಮನವನ್ನು ಬೇರೆಡೆಗೆ ಸೆಳೆದಿದ್ದ ಕಳ್ಳಿಯರು, ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕದ್ದಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಲನ್ನು ಬಂಧಿಸಿದ್ದಾರೆ. ಇವರಿಬ್ಬರ ವಿರುದ್ಧ ವಿವಿಧ ರೈಲ್ವೆ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ನಕಲಿ ಇ-ಬ್ಯಾಂಕ್ ಗ್ಯಾರಂಟಿಗಳಿAದ ಬ್ಯಾಂಕ್‌ಗಳಿಗೆ ರೂ. ೧೬೮ ಕೋಟಿ ವಂಚನೆ

ಬೆAಗಳೂರು, ಮಾ. ೨೭: ಬ್ಯಾಂಕ್ ಸಾಲಗಳಿಗೆ ನೀಡಲಾಗುವ ಇ-ಬ್ಯಾಂಕ್ ಗ್ಯಾರಂಟಿಗಳನ್ನು ನಕಲಿಯಾಗಿ ಸೃಷ್ಟಿಸಿ ಬರೋಬ್ಬರಿ ರೂ. ೧೬೮ ಕೋಟಿ ವಂಚಿಸಿ, ವಿದೇಶದಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬೆಂಗಳೂರು ಸೈಬರ್ ಕ್ರೆöÊಂ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಉತ್ತರಪ್ರದೇಶದ ನೋಯ್ಡಾನಗರದ ಆಶೀಶ್ ಸಕ್ಸೇನಾ ಅಲಿಯಾಸ್ ಆಶೀಶ್ ರಾಯ್ ಬಂಧಿತ ಆರೋಪಿ. ಆರೋಪಿಯಿಂದ ೨ ಲ್ಯಾಪ್ ಟಾಪ್‌ಗಳು, ೬ ಮೊಬೈಲ್‌ಗಳು, ಒಂದು ಪೆನ್ ಡ್ರೈವ್ ಹಾಗೂ ೧೦ ವಿವಿಧ ಬ್ಯಾಂಕ್‌ಗಳ ಚೆಕ್ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕುಗಳಿAದ ಪಡೆಯುವ ಸಾಲಗಳಿಗೆ ಸಂಬAಧಪಟ್ಟವರು ನೀಡುವ ಇ-ಬ್ಯಾಂಕ್ ಗ್ಯಾರಂಟಿಗಳ ನೈಜತೆಯನ್ನು ರಾಷ್ಟಿçÃಯ ಇ -ಗೌರ್ವನ್ಸ್ ಸರ್ವಿಸ್ ಲಿಮಿಟೆಡ್ ಎಂಬ ಅರೆ ಸರ್ಕಾರಿ ನೋಂದಾಯಿತ ಸಂಸ್ಥೆ ಪರಿಶೀಲನೆ ನಡೆಸುತ್ತದೆ. ಪರಿಶೀಲನೆಯ ವೇಳೆ ೧೬೮,೧೩,೨೩,೯೯೪ ರೂ. ಸಾಲ ಪಡೆಯಲು ೧೧ ವ್ಯಕ್ತಿಗಳು ನೀಡಿರುವ ಬ್ಯಾಂಕ್ ಗ್ಯಾರಂಟಿ ನಕಲಿ ಎಂಬುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿ ಬೆಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಕಳೆದ ತಿಂಗಳು ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸ್ ಅಧಿಕಾರಿಗಳು ೧೧ ವ್ಯಕ್ತಿಗಳು ನೀಡಿದ ದಾಖಲಾತಿಗಳು, ಮೊಬೈಲ್ ನಂಬರುಗಳು ಹಾಗೂ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಐಸಿಐಸಿಐ ಬ್ಯಾಂಕ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್ ಹೆಸರಿನಲ್ಲಿ ನೀಡಲಾಗಿದೆ ಎಂದು ಹೇಳಲಾದ ಇ-ಬ್ಯಾಂಕ್ ಗ್ಯಾರಂಟಿಗಳನ್ನು ನಕಲಿಯಾಗಿ ಸೃಷ್ಟಿಸಿ ೧೧ ಜನರ ಸಾಲಕ್ಕೆ ಖಾತ್ರಿಯನ್ನಾಗಿ ಒದಗಿಸಿದ್ದಾರೆ. ಇ-ಬ್ಯಾಂಕ್ ಗ್ಯಾರಂಟಿ ಸೇವೆ ನೀಡಲು ಸಾಲ ಪಡೆದವರಿಂದ ಆರೋಪಿಗಳು ೫ ಕೋಟಿ ರೂ.ಗಳ ಕಮಿಷನ್ ಪಡೆದಿರುವುದು ಪತ್ತೆಯಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಪೊಲೀಸ್ ಅಧಿಕಾರಿಗಳು ನವದೆಹಲಿ, ಉತ್ತರ ಪ್ರದೇಶದ ನೊಯಿಡಾ ಸೇರಿದಂತೆ ಹಲವು ಕಡೆ ವಿಚಾರಣೆ ನಡೆಸಿದ್ದಾರೆ.

ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾ ಭಾಗಿ!

ರಿಯಾದ್, ಮಾ. ೨೭: ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಪೆಜೆಂಟ್‌ನಲ್ಲಿ ಭಾಗಿಯಾಗಲಿದೆ. ಇಸ್ಲಾಮಿಕ್ ದೇಶವೊಂದಕ್ಕೆ ಇದು ಐತಿಹಾಸಿಕ ಕಾರ್ಯಕ್ರಮವಾಗಿರಲಿದೆ. ಹಿರಿಯ ಬ್ಯೂಟಿ ಪೆಜೆಂಟ್ ಹಾಗೂ ಪ್ರಭಾವಿ ವ್ಯಕ್ತಿಯಾಗಿರುವ ರೂಮಿ ಅಲ್ಕಹ್ತಾನಿ ಈ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊAಡಿದ್ದು ತಮ್ಮ ದೇಶವನ್ನು ಪ್ರತಿನಿಧಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಅವರು ತಮ್ಮ ಮನಮೋಹಕ ಚಿತ್ರಗಳನ್ನು ಹಂಚಿಕೊAಡಿದ್ದಾರೆ. ಚಿತ್ರದಲ್ಲಿ, ಮಾಡೆಲ್ ಸ್ಟಾçಪ್‌ಲೆಸ್ ಸೀಕ್ವಿನ್ಡ್ ಗೌನ್ ಧರಿಸಿರುವುದನ್ನು ಕಾಣಬಹುದಾಗಿದೆ. "ಮಿಸ್ ಯೂನಿವರ್ಸ್ ೨೦೨೪ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಬಗ್ಗೆ ನನಗೆ ಗೌರವವಿದೆ. ಇದು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾದ ಮೊದಲ ಭಾಗವಹಿಸುವಿಕೆ" ಎಂದು ಅವರು ಇನ್ಸಾ÷್ಟಗ್ರಾಮ್‌ನಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದಿದ್ದಾರೆ. ಖಲೀಜ್ ಟೈಮ್ಸ್ ಪ್ರಕಾರ, ರಿಯಾದ್‌ನಲ್ಲಿ ಜನಿಸಿದ ಅಲ್ಕಹ್ತಾನಿ ಗಮನ ಸೆಳೆದಿರುವುದು ಹೊಸದೇನಲ್ಲ. ಕೆಲವು ವಾರಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಮಿಸ್ ಅಂಡ್ ಮಿಸೆಸ್ ಗ್ಲೋಬಲ್ ಏಷ್ಯನ್ ಜೊತೆಯಲ್ಲಿ ಅವರು ಹಲವಾರು ಜಾಗತಿಕ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು. ಕಳೆದ ವರ್ಷ, ಮಿಸ್ ನಿಕರಾಗುವಾ ಶೆನ್ನಿಸ್ ಪಲಾಸಿಯೊಸ್ ೨೦೨೩ ರ ವಿಶ್ವ ಸುಂದರಿ ಕಿರೀಟವನ್ನು ಪಡೆದಿದ್ದರು. ಮುಂದಿನ ಆವೃತ್ತಿಯನ್ನು ಮೆಕ್ಸಿಕೋದಲ್ಲಿ ನಡೆಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ಕಳೆದ ವರ್ಷ ಘೋಷಿಸಿದ್ದರು.