ಸಿದ್ದಾಪುರ, ಮಾ. ೨೬: ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ನೀರಿಗಾಗಿ ಹಾಹಾಕಾರವಾಗಿದೆ. ಆದರೆ ನೀರು ಇರುವ ಕೆರೆಯನ್ನು ಸ್ವಚ್ಛಗೊಳಿಸದೇ ಗ್ರಾಮ ಪಂಚಾಯಿತಿ ನಿರ್ಲಕ್ಷö್ಯವಹಿಸುತ್ತಿದೆಂದು ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಗೂಡ್ಲೂರು ಗ್ರಾಮದಲ್ಲಿ ಸಾರ್ವಜನಿಕ ಕೆರೆ ಇದೆ. ಈ ಕೆರೆಯಲ್ಲಿ ಆ ಭಾಗದ ನಿವಾಸಿಗಳು ಕೃಷಿಗೆ ನೀರು ಬಳಸಲು ಹಾಗೂ ಜಾನುವಾರುಗಳಿಗೆ ನೀರು ಕುಡಿಸಲು ಅನುಕೂಲವಾಗಿದೆ. ಆದರೆ ಕೆರೆಯಲ್ಲಿ ನೀರು ಇದ್ದರು ಕೂಡ ಇದು ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಕೆರೆಯ ಒಳಗೆ ಹಾಗೂ ಹೊರಗೆ ಕಾಡುಗಳು, ಗಿಡಗಂಟಿಗಳು ಬೆಳೆದಿದ್ದು ಹಲವಾರು ತಿಂಗಳುಗಳೇ ಕಳೆದಿದೆ. ಸುಡು ಬಿಸಿಲಿನಲ್ಲಿ ದನಕರುಗಳು ಮೇಯಲು ಹೋಗಿ ನೀರು ಕುಡಿಯಲು ಕೆರೆಗೆ ಬಂದರು ಕೂಡ ನೀರು ಕುಡಿಯಲು ಸಾಧ್ಯವಾಗದೇ ಬಾಯಾರಿಕೆಯಿಂದಾಗಿ ಹಿಂತಿರುಗಿ ಹೋಗುತ್ತಿದೆಂದು ಸ್ಥಳೀಯ ರೈತರು ತಿಳಿಸಿದ್ದಾರೆ. ಈ ಭಾಗದಲ್ಲಿ ವನ್ಯ ಪ್ರಾಣಿಗಳು ಕೂಡ ನೀರಿಗಾಗಿ ಕೆರೆಯತ್ತ ಬರುತ್ತಿದ್ದು ಕೆರೆಯು ಸ್ವಚ್ಛ ಮಾಡದೇ, ಹೂಳು ಎತ್ತದೇ ಪಂಚಾಯಿತಿಯು ನಿರ್ಲಕ್ಷö್ಯ ವಹಿಸುತ್ತಿರುವ ಹಿನ್ನೆಲೆಯಲ್ಲಿ ಕೆರೆ ನಿಷ್ಕಿçÃಯೋಜಕವಾಗಿದೆ. ಕೆರೆಯನ್ನು ಸ್ವಚ್ಛಗೊಳಿಸಿ ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಗೂಡ್ಲೂರು ಗ್ರಾಮದ ನಿವಾಸಿಗಳು ಹಲವಾರು ಬಾರಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದರು ಕೂಡ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ನಿರ್ವಾಹಣಾಧಿಕಾರಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಕೆರೆಯ ಸ್ವಚ್ಛತೆಗೆ ಮುಂದಾಗಬೇಕೆAದು ಸ್ಥಳೀಯರು ಮನವಿ ಮಾಡಿದ್ದಾರೆ. -ವಾಸು