ಪೊನ್ನಂಪೇಟೆ, ಮಾ. ೨೬: ಕೊಡಗಿನ ಜನರಲ್ಲಿ ಸಿವಿಲ್ ಸರ್ವಿಸ್ ಬಗ್ಗೆ ಅರಿವಿನ ಕೊರತೆ ಇರುವ ಕಾರಣ, ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಮುಂದೆ ಬರುತ್ತಿಲ್ಲ ಎಂದು ನಮ್ಮ ಕೆ. ಪಿ. ಎಸ್. ಸಿ ಸ್ಥಾಪಕ ಡಾ. ಅರ್ಜುನ್ ಬೋಪಣ್ಣ ಹೇಳಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಿವಿಲ್ ಸರ್ವಿಸ್ ಪರೀಕ್ಷೆ ಬಗ್ಗೆ ಉಚಿತ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೊಡಗಿನ ಜನ ಸೇವಾ ಮನೋಭಾವ ಮತ್ತು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಗುಣವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಸಿವಿಲ್ ಸರ್ವಿಸ್ ಗೆ ಹೋದರೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಕೊಡಗು ಬಹುತೇಕ ಗ್ರಾಮೀಣ ಪ್ರದೇಶಗಳೇ ಇರುವುದರಿಂದ ಗ್ರಾಮೀಣ ಮೀಸಲಾತಿಯನ್ನು ಬಳಸಿಕೊಳ್ಳಬಹುದು, ಮಹಿಳೆಯರಿಗೆ ಮೂರನೇ ಒಂದು ಭಾಗ ಮೀಸಲಾತಿ ಇದೆ ಇದೆಲ್ಲವನ್ನು ಬಳಸಿಕೊಂಡು ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಬೇಕು. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಒಂದರಿAದ ಎರಡು ವರ್ಷ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ನಾವು ಶಾಲೆಯಲ್ಲಿ ಕಲಿಯುವಂತಹ ಇತಿಹಾಸ, ಭೂಗೋಳಶಾಸ್ತç, ಪರಿಸರ ಅಧ್ಯಯನ, ರಾಜ್ಯಶಾಸ್ತç, ವಿಜ್ಞಾನ ಅರ್ಥಶಾಸ್ತç, ಸಾಮಾನ್ಯ ಜ್ಞಾನ ಇನ್ನಿತರ ವಿಷಯಗಳ ಮೇಲೆ ಪರೀಕ್ಷೆ ಇರುತ್ತದೆ. ಇಂಗ್ಲೀಷ್, ಕನ್ನಡದ ಬಗ್ಗೆ ಆಳವಾದ ಜ್ಞಾನ ಇರಬೇಕಾಗುತ್ತದೆ. ಸಿವಿಲ್ ಪರೀಕ್ಷೆಯನ್ನು ಪಾಸ್ ಮಾಡಲು ಓದುವುದು ಮತ್ತು ತರಬೇತಿಯ ಜೊತೆಗೆ ಮುಖ್ಯವಾಗಿ ಸೂಕ್ತ ಮಾರ್ಗದರ್ಶನದ ಅಗತ್ಯತೆ ಇರುತ್ತದೆ ಎಂದರು.
ಸಿವಿಲ್ ಸರ್ವಿಸ್ ಪರೀಕ್ಷೆ ಬರೆದು ಸರ್ವಿಸ್ಗೆ ಸೇರಿಕೊಂಡರೆ ಭದ್ರತೆಯ ಜೊತೆಗೆ ವೈಯಕ್ತಿಕ ಬೆಳವಣಿಗೆ, ಕಾನೂನು ಬಗ್ಗೆ ತಿಳುವಳಿಕೆ, ಆಡಳಿತ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ದೊರೆಯುತ್ತದೆ. ಜನರೊಂದಿಗೆ ಬೆರೆಯಲು ಸಹಕಾರಿಯಾಗುತ್ತದೆ. ಇದು ಶಾಶ್ವತ ಉದ್ಯೋಗವಾಗಿದ್ದು ಖಾಸಗಿ ಉದ್ಯೋಗಕ್ಕಿಂತ ಮೂರು ಪಟ್ಟು ಹೆಚ್ಚು ಸಂಬಳವನ್ನು ಪಡೆಯಬಹುದು. ಸಮಾಜದಲ್ಲಿ ಗೌರವದ ಜೊತೆಗೆ ನಾಗರೀಕರಿಗೆ ಉತ್ತಮ ಕೆಲಸ ಮಾಡಿ ಕೊಡುವ ಅವಕಾಶ ಇರುತ್ತದೆ. ಸಿವಿಲ್ ಪರೀಕ್ಷೆಯಲ್ಲಿ ಯಾವುದೇ ಪದವಿಯ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಓದಿರುವ ಎಲ್ಲಾ ಪದವೀಧರರು ಸಿವಿಲ್ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಎಂದರು.
ಗೋಣಿಕೊಪ್ಪಲು ಕಾವೇರಿ ಕಾಲೇಜು ಉಪ ಪ್ರಾಂಶುಪಾಲೆ ಡಾ. ಎ. ಎಸ್. ಪೂವಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಾವೇರಿ ಕಾಲೇಜು ಪ್ಲೇಸ್ಮೆಂಟ್ ಸೆಲ್ನ ಸಂಚಾಲಕ ಯು. ಟಿ. ಪೆಮ್ಮಯ್ಯ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.