ಫೆಬ್ರವರಿ ೨೦ ರಂದು ಬೆಳಿಗ್ಗೆ ನನಗೆ ಅನುಪ್ರಿಯಾ ಎಂಬ ಪ್ರವಾಸಿಗರಿಂದ ಕರೆ ಬಂದಿತು. ದೆಹಲಿಯಲ್ಲಿ ನೆಲೆಸಿರುವ ಚಂಡೀಗಢ ಮೂಲದವರಾದ ಅನು, ಬಹಳ ಸಂಕಟದಿAದ ನನ್ನಲ್ಲಿ ಮಾತನಾಡಲಾರಂಭಿಸಿದಳು. "ನನಗೆ ಒಂದೆರಡು ಸ್ಥಳೀಯರು ನಿಮ್ಮ ಹೆಸರನ್ನು ನೀಡಿದರು," ಎಂದು ಅವಳು ಸಂಭಾಷಣೆ ಪ್ರಾರಂಭಿಸಿದಳು. ಮುಂದುವರಿದು "ಮಡಿಕೇರಿಯ ಮೈತ್ರಿ ಪೊಲೀಸ್ ಸಮುದಾಯ ಭವನದ ಬಳಿ ಒಂದು ಬೀದಿ ನಾಯಿ ಇದೆ. ಅವನಿಗೆ ‘ಕ್ಯಾನಾಯಿನ್ ಡಿಸ್ಟೆಂಪರ್’ ರೋಗವಿದ್ದು, ಅವನಿಗೆ ಆರೈಕೆಯ ಅವಶ್ಯಕತೆ ಇದೆ. ನೀವು ನಾಯಿಪ್ರಿಯರು ಎಂದು ತಿಳಿದು ಬಂತು, ದಯವಿಟ್ಟು ನಾನು ಮಡಿಕೇರಿಯಿಂದ ತೆರಳಿದ ನಂತರ ಈ ಬೀದಿ ನಾಯಿಗೆ ನಿತ್ಯ ಆಹಾರ ನೀಡುವುದಾಗಿ ನೀವು ನನಗೆ ಭರವಸೆ ನೀಡಬಹುದೇ? ನನ್ನಲ್ಲಿ ಮೈಸೂರಿನಿಂದ ರಕ್ಷಿಸಿದ ಇನ್ನೊಂದು ನಾಯಿಮರಿ ಇದೆ. ಹಾಗಾಗಿ, ಈ ರೋಗಪೀಡಿತ ನಾಯಿಯನ್ನು ನನಗೆ ಕರೆದುಕೊಂಡು ಹೋಗುವದು ಅಸಾಧ್ಯ,” ಎಂದು ಒಂದೇ ಉಸಿರಿನಲ್ಲಿ ವಿವರಿಸಿದಳು.
ಕೊಡಗಿಗೆ ಭೇಟಿ ನೀಡುತ್ತಿದ್ದ ಅನು ಎರಡು ದಿನ ಪ್ರವಾಸಿಯಾಗಿ ಮಡಿಕೇರಿಯಲ್ಲಿದ್ದರು. ಅವರು ನಗರವಿಡೀ ಸುತ್ತಾಡಿ ನೋಡಬೇಕೆಂದಿದ್ದುಕೊAಡಿದ್ದರೂ, ಈ ಬೀದಿ ನಾಯಿಯ ಪರಿಸ್ಥಿತಿ ಅವಳೆಲ್ಲಾ ಯೋಜನೆಗಳನ್ನು ಬದಲಾಯಿಸಿದವು. ನನಗೆ ಪುನಃ ಕರೆ ಮಾಡಿ, ಮೈತ್ರಿ ಹಾಲ್ನ ಪಕ್ಕ ಬರಲು ವಿನಂತಿಸಿದಳು. ಅಲ್ಲಿಗೆ ನಾನು ತೆರಳಿದಾಗ, ಆರೈಕೆಯ ಅವಶ್ಯಕತೆ ಇದ್ದ ಬೀದಿನಾಯಿಯನ್ನು ತೋರಿಸಿ - ಇವನು ‘ಭೋಲೂ’ ಎಂದು ಪರಿಚಯಿಸಿಕೊಟ್ಟಳು. ಭೋಲುವಿನÀ ತಲೆಯು ನಡುಗುತ್ತಿತ್ತು, ಅವನಿಗೆ ಹಲ್ಲು ಇರಲಿಲ್ಲ ಹಾಗೂ ಸಣಕಲು ದೇಹವಿದ್ದರಿಂದ ಮೂಳೆಗಳೆಲ್ಲವೂ ಎದ್ದು ಕಾಣುತ್ತಿತು.
ಸಮೀಪದಲ್ಲಿನ ಆಟೋ ಚಾಲಕರು ಸೇರಿದಂತೆ ಆ ವ್ಯಾಪ್ತಿಯ ನಿವಾಸಿಗಳು ಅವನಿಗೆ ಬಿಸ್ಕತ್ತುಗಳನ್ನು ತಿನ್ನಿಸುತ್ತಿದ್ದರಾದರೂ, ಅವನಿಗೆ ಬದುಕಲು ಹೆಚ್ಚಿನ ಪೋಷಕಾಂಶಗಳ ಅವಶ್ಯಕತೆ ಇತ್ತು. ಅವನಿಗೆ ನೀಡಿದ ಆಹಾರವನ್ನು ಅಗಿಯಲು ಸಾಧ್ಯವಾಗದ ಕಾರಣ, ಅವನ ಆಹಾರವನ್ನು ಮೃದುವಾಗಿ ಬೇಯಿಸಬೇಕಾಯಿತು.
ಅನು ಮಾತು ಮುಂದುವರೆಸಿದಳು, “ನಾನು ಎರಡು ದಿನ ಇಲ್ಲೇ ಇದ್ದೀನಿ. ನಾನು ಪಶುವೈದ್ಯರನ್ನು ಸಂಪರ್ಕಿಸಿ ಭೋಲುಗಾಗಿ ಮಾತ್ರೆಗಳನ್ನು ಖರೀದಿಸಿದ್ದೇನೆ. ನಾನು ಇಲ್ಲಿಂದ ಹೋದ ನಂತರ ನೀವು ‘ಭೋಲು’ವಿನ ಜವಾಬ್ದಾರಿ ವಹಿಸಿಕೊಳ್ಳಬಹುದೇ?” ಅಂತ ಕೇಳಿದಳು. ಅವಳ ಪ್ರಾಮಾಣಿಕತೆಯಿಂದ ನಾನು ದಿಗ್ಭ್ರಮೆಗೊಂಡೆ. ನಾನು ಕೂಡ ನಾಯಿ ಪ್ರೇಮಿ, ಆದರೆ ಈ ಮೂಕ ಪ್ರಾಣಿಗಳಿಗೆ ಸಹಾಯ ಮಾಡಲು ನಾನು ಅವಳ ಮಟ್ಟಕ್ಕೆ ಹೋಗುತ್ತೇನೆ? ಎಂದು ನನಗೆ ನಾನೆ ಪ್ರಶ್ನಿಸಿಕೊಂಡೆ. ಆದರೆ ನಾನು ಅವಳ ಮಾತುಗಳಿಂದ ಪ್ರಭಾವಿತಳಾಗಿ ಅವಳಿಗೆ ಭರವಸೆ ನೀಡಿದೆ, “ಆಗಲಿ, ನಾನು ಭೋಲುವಿಗೆೆ ಪ್ರತಿದಿನ ಆಹಾರವನ್ನು ನೀಡುತ್ತೇನೆ ಮತ್ತು ಅವನ ಆರೋಗ್ಯದ ಬಗ್ಗೆ ನಿಮಗೆ ಫೋನ್ ಮೂಲಕ ತಿಳಿಸುತ್ತೇನೆÉ." ಎಂದೆ.
ಪ್ರತಿದಿನ ಬೆಳಿಗ್ಗೆ ನಾನು ಮನೆಯಿಂದ ಆಹಾರ ಪೊಟ್ಟಣವನ್ನು ಹೊತ್ತು ಭೋಲುವಿನ ಬಳಿ ‘ಸ್ಕೂಟರ್’ ನಿಲ್ಲಿಸಿದಾಕ್ಷಣ ಭೋಲು ತನ್ನ ಬಾಲವನ್ನು ಅಲ್ಲಾಡಿಸಿಕೊಂಡು ನನ್ನೆಡೆಗೆ ಬರುತ್ತಿದ್ದ. ಆಹಾರ ಸೇವಿಸುತ್ತಿದ್ದ. ಆದರೂ, ಕಾಲಕ್ರಮೇಣ ಭೋಲುವಿನÀ ಸ್ಥಿತಿ ಹದಗೆಟ್ಟಿತು. ಕೆಲವೊಮ್ಮೆ, ಅವನ ಮೂಗಿನಿಂದ ಹೆಚ್ಚಿನ ಲೋಳೆ ಹರಿಯುತ್ತಿತ್ತು, ಅದು ಅವನಿಗೆ ಆಹಾರ ಸೇವಿಸಲು ಅಡಚಣೆಯಾಗುತ್ತಿತ್ತು. ಅವನು ಶಾಂತಿಯುತವಾಗಿ ತಿನ್ನಬೇಕೆಂದು ನಾನು ಒಂದೆರಡು ಸಲ ದೊಡ್ಡ ಎಲೆಗಳಿಂದ ಅವನ ಮೂಗನ್ನು ಸ್ವಚ್ಛಗೊಳಿಸಿದೆ. ಆ ಸಂದರ್ಭದಲ್ಲಿ ಅವನು ನನಗೆ ಗೊಣಗಿದ್ದು ಸಹ ಉಂಟು.. ಭೋಲು ಹೀಗೆ ದಿನವೂ ಊಟ ಮಾಡುತ್ತಿದ್ದ. ಇಷ್ಟಾದರೂ, ಅವನÀ ಸ್ಥಿತಿ ಹದಗೆಟ್ಟಿದ್ದು ಮಾರ್ಚ್ ೭ರಂದು ತಿನ್ನುವುದನ್ನು ನಿಲ್ಲಿಸಿದನು. ಜೀವಿಸಲು ಇಚ್ಛೆಯೇ ಇಲ್ಲದಂತೆ ಆಡುತ್ತಿದ್ದ. ಹತ್ತಿರದಲ್ಲಿ ಬೇಕರಿ ನಡೆಸುತ್ತಿರುವ ವ್ಯಕ್ತಿಯೊಬ್ಬರು, “ಅವನು ಈಗ ರಸ್ತೆಯ ಮಧ್ಯದಲ್ಲಿಯೇ ಮಲಗುತ್ತಾನೆ - ಅವನು ಆತ್ಮಹತ್ಯೆಗೆ ಸಿದ್ಧನಾಗಿದ್ದಾನೆ ಎಂದು ಭಾಸವಾಗುತ್ತದೆ. ನಾವು ಅವನನ್ನು ಈ ರೀತಿ ನೋಡಲು ಸಾಧ್ಯವಿಲ್ಲ.” ಎಂದು ಹೇಳಿದರು.
ನಾನು ಅನುಗೆ ಕರೆಮಾಡಿ ಭೋಲುವಿನ ಆರೋಗ್ಯದ ಬಗ್ಗೆ ತಿಳಿಸಿದೆ. ಅನು ಅಸಮಾಧಾನಗೊಂಡಳು. ಕೊಡಗಿನಲ್ಲಿ ಯಾವದೇ ‘ಪ್ರಾಣಿ ಆಶ್ರಯ ಮನೆ’ ಇಲ್ಲವೇ? ಎಂದೆಲ್ಲ ವಿಚಾರಿಸಿದಳು. ಮುಂದುವರೆದು, ಅವಳು ತಕ್ಷಣವೇ’ ಪೀಪಲ್ ಫಾರ್ ಅನಿಮಲ್’್ಸ ಸಂಸ್ಥೆಯನ್ನು ಸಂಪರ್ಕಿಸಿ ಬೆಂಗಳೂರಿನಲ್ಲಿರುವ ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ಭೋಲುವನ್ನು ಸ್ಥಳಾಂತರಿಸಲು ಮನವಿ ಸಲ್ಲಿಸಿದಳು. ಅವಳು ಸಾರಿಗೆ ವೆಚ್ಚವನ್ನು ಪಾವತಿಸಿದಳು ಮತ್ತು ಮಾರ್ಚ್ ೧೦ ರಂದು ಭೋಲುವನ್ನು ಕರೆದುಕೊಂಡು ಹೋಗಲು ಮೈಸೂರಿನಿಂದ ಪಶು ಆ್ಯಂಬುಲೆನ್ಸ್ ಬಂದಿತು.
ಆ್ಯAಬುಲೆನ್ಸ್ ಬರುವ ಮೊದಲು, ನಾನು ಭೋಲು ಓಡಿ ಹೋಗಬಾರದೆಂದು ಅವನನ್ನು ಅಲ್ಲೇ ಕಟ್ಟಿಹಾಕಿದ್ದೆ. ಅವನ ಮುಂದೆ ಆಹಾರದ ಬಟ್ಟಲನ್ನು ಇಟ್ಟು ಕಾದುಕುಳಿತೆ. ಸುಮಾರು ೧೫ ನಿಮಿಷÀಗಳ ನಂತರ, ಭೋಲು ಬಟ್ಟಲಲ್ಲಿದ್ದ ಆಹಾರವನ್ನು ಸೇವಿಸಿದನು. ಅವನು ಇದಕ್ಕೂ ಮೊದಲು ಸುಮಾರು ನಾಲ್ಕು ದಿನಗಳವರೆಗೆ ಆಹಾರ ಸೇವಿಸಿರಲಿಲ್ಲ. ನಾನು ಅವನು ಕಾಯಿಲೆಯಿಂದ ಚೇತರಿಸಿಕೊಳ್ಳಬೇಕೆಂದು ಆಶಿಸಿ, ಅವನನ್ನು ಆ್ಯಂಬುಲೆನ್ಸ್ಗೆ ಹತ್ತಿಸಿದೆ. ಅವನು ಮರಳಿ ಬರಲಿ ಎಂದು ಆಶಿಸಿದೆ.
ಆದರೆ, ಸಂಜೆ ೪ ಗಂಟೆ ಸುಮಾರಿಗೆ ‘ಪಿಎಫ್ಎ’ ಮ್ಯಾನೇಜರ್ನಿಂದ ನನಗೆ ಕರೆ ಬಂದು, ಭೋಲು ಸಾವನ್ನಪ್ಪಿದ್ದಾನೆ ಎಂಬ ಸಂದೇಶ ದೊರೆಯಿತು. ಪಶುವೈದ್ಯರು ಆತನಿಂದ ರಕ್ತ ತೆಗೆಯುತ್ತಿದ್ದಾಗ ಅವನು ಕುಸಿದುಬಿದ್ದನಂತೆ. "ಅವನನ್ನು ಕೊಂದರು ಪ್ರಜ್ಞಾ!" ಎಂದು ಅನುವಿನಿಂದ ಕರೆ ಬಂತು. "ನಾನು ಪಶು ವೈದ್ಯರೊಂದಿಗೆ ಮಾತನಾಡಿದೆ. ಭೋಲು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದನು. ಆ್ಯಂಬುಲೆನ್ಸ್ ವ್ಯಕ್ತಿಗಳು ಅವನಿಗೆ ನೀರು ಒದಗಿಸಲಿಲ್ಲ ಮತ್ತು ಸರಿಯಾದ ಗಾಳಿಯ ವ್ಯವಸ್ಥೆ ಮಾಡಲಿಲ್ಲ, ಇದು ಭೋಲುವಿನ ಸಾವಿಗೆ ಕಾರಣವಾಗಿದೆ.” ಎಂದು ರೋದಿಸಿದಳು. ನಾನು ಮೂಕನಾಗಿದ್ದೆ. ಕಣ್ಣೀರು ಉರುಳಿತು ಮತ್ತು ನಾವಿಬ್ಬರೂ ಕಂಗಾಲಾದೆವು. ‘ನಾವು ತುಂಬಾ ಮಧ್ಯಪ್ರವೇಶಿಸಿ ಅವನನ್ನು ಕೊಂದಿದ್ದೇವೆಯೇ? ಅಥವಾ ಇದು ವಿಧಿಯೇ?’ ನಮಗೆ ಗೊತ್ತಿಲ್ಲ. ಭೋಲು ಪಿಎಫ್ಎ ಯ ಬೇಜವಾಬ್ದಾರಿತನದಿಂದ ನಿಧನನಾದ. ಇದರಿಂದ ಕೋಪಗೊಂಡ ಅನು ಪಿಎಫ್ಎ ಆಡಳಿತದೊಂದಿಗೆ ಅವಳ ಹೋರಾಟ ಮುಂದುವರಿಸಿದ್ದಾಳೆ.
ಶ್ವಾನಪ್ರೇಮಿಗಳು ಬೀದಿ ನಾಯಿಗಳಿಗೆ ಆಹಾರ ನೀಡಿದಾಗ ಗೋಳಾಡುವ ಎಷ್ಟೋ ಸಮಾಜದ ಗಣ್ಯರನ್ನು ನಾನು ನೋಡಿದ್ದೇನೆ. ಅದೇ ರೀತಿ, ತಮ್ಮಲ್ಲಿರುವ ಸ್ವಲ್ಪ ಆಹಾರವನ್ನು ಮೂಕ ಪ್ರಾಣಿಗಳಿಗೆ ನೀಡುವ ‘ಸ್ಲಂ’ನ ಕಡುಬಡವರನ್ನೂ ನೋಡಿದ್ದೇನೆ. ನಾಯಿಗಳಿಗೆ ಆಹಾರ ನೀಡಿದ್ದಕ್ಕಾಗಿ, ನಾಯಿಗಳ ಸಂಪೂರ್ಣ ಜವಾಬ್ದಾರಿಯನ್ನೇ ನೀವು ವಹಿಸಿಕೊಳ್ಳಿ ಎಂದು ‘ಆಂಗ್ಲ’ ಭಾಷೆಯಲ್ಲಿ ನನಗೆ ಬೈದವರನ್ನೂ ನಾನು ನೋಡಿದ್ದೇನೆ.
ಆದರೆ, ಅನುಪ್ರಿಯರವರಂತವರನ್ನು ನಾವು ಬಹಳ ಅಪರೂಪವಾಗಿ ನೋಡಬಹುದು. ಭೋಲುವಿನ ಸಾವು ಅವಳನ್ನು ಕುಗ್ಗಿಸಿದೆ. ಆದರೆ, ಇದೆಲ್ಲ ವಿಧಿ ಎಂದೆನಿಸುತ್ತದೆ. ಭೋಲು ಮತ್ತು ಅನು ಪ್ರಿಯಾ ಅವರ ಕಥೆಯು ಸಮಾಜದಲ್ಲಿ ಸೌಕರ್ಯ ಮತ್ತು ಐಷಾರಾಮಿಗಳಿಂದ ತುಂಬಿರುವ ಕೆಲವು ಗಣ್ಯ ವ್ಯಕ್ತಿಗಳಿಗೆ ಸಂದೇಶ ನೀಡಿದೆ ಎಂದು ನಾನು ಭಾವಿಸುತ್ತೇನೆ. ಈ ಭೂಮಿ ಕೇವಲ ನಮ್ಮದಲ್ಲ. ಇದು ಎಲ್ಲರಿಗೂ ಸಮಾನವಾಗಿ ಸೇರಿದ್ದು. ನಮ್ಮಿಂದ ಆದಷ್ಟು ಒಳಿತು, ಸಮಾಜಕ್ಕೆ ಸಹಾಯ ಮಾಡುವದು ನಮ್ಮೆಲ್ಲರ ಜವಾಬ್ದಾರಿಯಲ್ಲವೆ?
- ಪ್ರಜ್ಞಾ ಜಿ.ಆರ್.