ಶನಿವಾರಸAತೆ, ಮಾ. ೨೫: ಪಟ್ಟಣದಲ್ಲಿ ರಾಜಸ್ಥಾನಿ ಸಮುದಾಯದವರು ಚೈತ್ರ ಮಾಸದ ಆಗಮನವನ್ನು ಸಾರುವ ಬಣ್ಣದ ಹಬ್ಬ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ನೆಲೆಸಿರುವ ರಾಜಸ್ಥಾನ ಮೂಲದವರು ಚಿನ್ನಾಭರಣ, ಬಟ್ಟೆ ಅಂಗಡಿ, ಹೋಂ ಅಪ್ಲೆಯನ್ಸ್ ಇತ್ಯಾದಿ ವ್ಯಾಪಾರೋದ್ಯಮಗಳನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದು ತಮ್ಮ ಸಂಸ್ಕೃತಿ, ಸಾಂಪ್ರದಾಯವನ್ನು ಸಾರುವ ಹಬ್ಬಗಳನ್ನು ಆಚರಿಸಿ ಸಂಭ್ರಮಿಸುತ್ತಾರೆ. ವಿವಿಧ ಬಣ್ಣಗಳು ತುಂಬಿದ ಹರಿವಾಣಗಳನ್ನು ಹಿಡಿದು ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ ರಾಜಸ್ಥಾನಿ ಸಮುದಾಯದ ಸ್ತಿçÃಯರು, ಪುರುಷರು, ಮಕ್ಕಳು ಸಾರ್ವಜನಿಕರಿಗೆ ಶುಭಾಶಯಗಳನ್ನು ತಿಳಿಸುತ್ತಾ ಸಿಹಿ ಹಂಚುತ್ತಾ ಬಣ್ಣ ಹಚ್ಚುತ್ತಾ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸೇರಿದರು. ಪರಸ್ಪರ ಬಣ್ಣದ ಓಕುಳಿಯಾಡುತ್ತಾ ಹೋಳಿ ಹಬ್ಬವನ್ನು ಸಂಭ್ರಮಿಸಿದರು. ಸಮುದಾಯದ ಪ್ರಮುಖರಾದ ಶೇಷರಾಂ, ಮಂಗಲರಾಮ್, ಮೋಹನ್ ಲಾಲ್, ಸುರೇಶ್, ಚೇತನ್, ತೇಜರಾಂ, ಪ್ರಕಾಶ್, ಗಣಪತಿ, ಮಹೇಂದರ್, ವಿಕ್ರಮ್, ಸೀತಾ, ವಿಮಲಾ, ಮುನ್ನಿ, ಸಂತೋಷಿದೇವಿ ನೇತೃತ್ವ ವಹಿಸಿದ್ದರು.