ಸುಂಟಿಕೊಪ್ಪ, ಮಾ. ೨೬: ೭ನೇ ಹೊಸಕೋಟೆಯ ಮಟ್ನಳದಲ್ಲಿ ನೆಲೆಗೊಂಡಿರುವ ಶ್ರೀ ಅಮ್ಮನವರು ಭೈರವೇಶ್ವರ ಪಾಷಾಣಮೂರ್ತಿ ಹಾಗೂ ಪರಿವಾರ ದೇವತೆಗಳ ಸನ್ನಿಧಾನದಲ್ಲಿ ೨ನೇ ವರ್ಷದ ವರ್ಷಾವಧಿ ಕೋಲವು ತಾ. ೨೨ ರಿಂದ ರಾತ್ರಿ ವಿಜೃಂಭಣೆಯಿAದ ನಡೆಯಿತು.
ಶ್ರೀ ಅಮ್ಮನವರ ದೇವಾಲಯವನ್ನು ವಿದ್ಯುತ್ ದೀಪಾಲಂಕಾರದಿAದ ಅಲಂಕರಿಸಲಾಗಿತ್ತು. ತಾ. ೨೩ರಂದು ಸಾರ್ಲಪಟ್ಟಿ ಕೊರಗಜ್ಜನ ನೇಮ ನಡೆಯಿತು. ೭ನೇ ಹೊಸಕೋಟೆ, ಅಂದಗೋವೆ, ಸುಂಟಿಕೊಪ್ಪ, ಕುಶಾಲನಗರ, ಹುಣಸೂರು ಕಡೆಗಳಿಂದ ಅಧಿಕ ಭಕ್ತರು ಪಾಲ್ಗೊಂಡಿದ್ದರು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆಯೊAದಿಗೆ ದೈವ ಕಾರ್ಯ ಸಮಾಪ್ತಿಗೊಂಡಿತು.