ಸೋಮವಾರಪೇಟೆ, ಮಾ. ೨೫: ನಗರೋತ್ಥಾನ ಯೋಜನೆಯ ಕಾಮಗಾರಿಗಳನ್ನು ಗಮನಿಸಿದರೆ ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಅಕ್ಷರಶಃ ನಿಷ್ಕಿçಯ ವಾಗಿರುವಂತೆ ಕಂಡುಬರುತ್ತಿದೆ. ೫ ಕೋಟಿ ಅನುದಾನದ ಬಹುತೇಕ ಕಾಮಗಾರಿಗಳು ಅರೆಬರೆ ನಿರ್ಮಾಣ ವಾಗಿದ್ದು, ಇಲ್ಲಿನ ರೇಂಜರ್ ಬ್ಲಾಕ್ನಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಚರಂಡಿಯನ್ನು ಅಗೆದ ಗುತ್ತಿಗೆದಾರ, ನಂತರ ನಾಪತ್ತೆಯಾಗಿದ್ದಾರೆ.
ಪರಿಣಾಮ ಚರಂಡಿಗೆ ಒತ್ತಿಕೊಂಡAತೆ ಇದ್ದ ತಡೆಗೋಡೆ ಕುಸಿಯುತ್ತಿದ್ದು, ವಾಸದ ಮನೆಗೆ ಅಪಾಯ ತಂದಿಟ್ಟಿದೆ. ಅಭಿವೃದ್ಧಿಗೆ ಪೂರಕವಾಗಬೇಕಾಗಿದ್ದ ನಗರೋತ್ಥಾನ ಯೋಜನೆ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಜನರಿಗೆ ಮಾರಕವಾಗುತ್ತಿದೆ. ಗುತ್ತಿಗೆದಾರನ ಮೇಲೆ ಯಾವುದೇ ಹಿಡಿತ ಸಾಧಿಸದ ಪಟ್ಟಣ ಪಂಚಾಯಿತಿ, ಗುತ್ತಿಗೆದಾರನ ತಾಳಕ್ಕೆ ಕುಣಿಯುವ ಗೊಂಬೆಯAತಾಗಿದೆಯಷ್ಟೇ ಎಂದು ಸ್ವತಃ ಸದಸ್ಯರುಗಳೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ವಾರ್ಡ್ ಸಂಖ್ಯೆ ೭ರ ರೇಂಜರ್ಸ್ ಬ್ಲಾಕ್ನಲ್ಲಿರುವ ನಂಬಿಯಾರ್ ಅವರ ಮನೆಯ ಮುಂದೆ ಉತ್ತಮ ಸ್ಥಿತಿಯಲ್ಲಿದ್ದ ಚರಂಡಿಯನ್ನು, ಕಾಂಕ್ರೀಟ್ ಚರಂಡಿ ಮಾಡುವ ಉದ್ದೇಶದಿಂದ ಕಳೆದ ವರ್ಷ ಅಗೆದು ಹಾಕಲಾಗಿದೆ. ನಂತರ ಚರಂಡಿ ನಿರ್ಮಾಣ ಮಾಡದೇ ಇರುವುದರಿಂದ ಕಳೆದ ಮಳೆಯಲ್ಲಿ ಮನೆಗೆ ಕಟ್ಟಲಾಗಿದ್ದ ತಡೆಗೋಡೆ ಕುಸಿಯಲಾರಂಭಿಸಿದೆ. ಆದರೆ ಈ ಬಗ್ಗೆ ಪಟ್ಟಣ ಪಂಚಾಯ್ತಿಯಾಗಲಿ, ಗುತ್ತಿಗೆ ದಾರನಾಗಲಿ ತಲೆಕೆಡಿಸಿಕೊಂಡಿಲ್ಲ.
ಇತ್ತೀಚೆಗೆ ಅಗೆದು ಹಾಕಿರುವ ಸ್ಥಳವನ್ನು ಬಿಟ್ಟು ೨೦ ಮೀಟರ್ ಮುಂದೆ ಹೊಸ ಚರಂಡಿ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಇದ್ದ ಚರಂಡಿ ಸ್ಥಳವನ್ನು ಹಾಗೆಯೇ ಬಿಡಲಾಗಿದೆ. ಪರಿಣಾಮ ತಡೆಗೋಡೆ ಕುಸಿಯುತ್ತಿದ್ದು, ಮನೆಗೆ ಅಪಾಯ ತಂದೊಡ್ಡಿದೆ. ಪ.ಪಂ. ಮುಖ್ಯಾಧಿ ಕಾರಿಗಳು, ಆಡಳಿತಾಧಿಕಾರಿಗಳು, ಸಂಬAಧಿಸಿದ ಅಭಿಯಂತರರು ಈ ಬಗ್ಗೆ ಎಳ್ಳಷ್ಟೂ ಗಮನ ಹರಿಸುತ್ತಿಲ್ಲ. ಇಂತಹ ಅಧ್ವಾನಗಳು ನಗರೋತ್ಥಾನದಡಿ ಹಲವಷ್ಟು ನಡೆದಿದ್ದರೂ ಯಾರೂ ಗಮನಿಸುತ್ತಿಲ್ಲ. ಒಟ್ಟಾರೆ ಪ.ಪಂ. ಆಡಳಿತ ನಿಂತ ನೀರಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಗರೋತ್ಥಾನ ಯೋಜನೆ ಗುತ್ತಿಗೆ ಪಡೆದ ಗುತ್ತಿಗೆದಾರ ಸರಿಯಾಗಿ ಕಾಮಗಾರಿ ನಡೆಸದೆ ಇರುವುದರಿಂದ ಸಮಸ್ಯೆ ಉದ್ಭವವಾಗಿದೆ.
ಈ ಬಗ್ಗೆ ಸಭೆಗಳಲ್ಲಿ ಚರ್ಚಿಸಿದ್ದೇವೆ; ಆದರೂ ಪ್ರಯೋಜನವಾಗಿಲ್ಲ .ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಆದಷ್ಟು ಬೇಗ ಕಾಮಗಾರಿ ಮುಗಿಸಬೇಕೆಂದು ವಾರ್ಡ್ ಸದಸ್ಯ ಜೀವನ್ ಒತ್ತಾಯಿಸಿದ್ದಾರೆ.