ಮಡಿಕೇರಿ, ಮಾ. ೨೫: ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಜಲಪಾತ ಕವಿಗೋಷ್ಠಿ ಹಾಗೂ ಇರ್ಪು ಜಲಪಾತ ಸ್ಥಳ ಪುರಾಣ ಅಧ್ಯಯನ ಪ್ರವಾಸ ಕಾರ್ಯಕ್ರಮದಲ್ಲಿ ಇರ್ಪು ಜಲಪಾತದಂಚಿ ನಲ್ಲಿ ನಡೆದ ಕವಿಗೋಷ್ಠಿಯಲ್ಲಿ ನಿಸರ್ಗ ಮಡಿಲಿನಲ್ಲಿ ರುವ ಸುಂದರ ತಾಣದಲ್ಲಿ ಹಲವು ಕವಿ ಮನದಾಳದ ಭಾವನೆಗಳ ಕವನಗಳು ಮೂಲಕ ಹೊರಹೊಮ್ಮಿದವು.

ಉದ್ಘಾಟನೆಯನ್ನು ಭಕ್ತಿಗೀತೆ ಹಾಡುವ ಮುಖಾಂತರ ನೆರವೇರಿಸಿದ ಡಾ,ಕಾಳಿಮಾಡ ಕೆ. ಶಿವಪ್ಪ ಅವರ ಮಧುರಕಂಠದ ಹಾಡಿಗೆ ಸಭಿಕರು ಮಾತ್ರವಲ್ಲದೆ ಜಲಪಾತಕ್ಕೆ ಆಗಮಿಸಿದ ಪ್ರವಾಸಿಗರನ್ನು ವೇದಿಕೆಯತ್ತ ಸೆಳೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ ಶಿವಪ್ಪ ಅವರು ಆಧುನಿಕ ಯುಗದಲ್ಲೂ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸ್ತಿçÃಯರ ಪಾತ್ರ ಮುಖ್ಯವಾಗಿದೆ. ಜಗತ್ತಿನಲ್ಲಿ ಏನೇ ಬದಲಾದರೂ ಸಂಸ್ಕಾರ ಮಾತ್ರ ಬದಲಾಗಬಾರದು. ಪುರಾಣ ಕಾಲದಿಂದಲೂ ನದಿಗಳು ಸೇರಿದಂತೆ ಪ್ರಕೃತಿಯನ್ನು ತಾಯಿ ಸ್ಥಾನದಲ್ಲಿ ಇಟ್ಟು ಪೂಜಿಸಲಾಗಿದೆ. ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಜವಾಬ್ದಾರಿ ಆಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇರ್ಪು ಶ್ರೀರಾಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮದ್ರೀರ ವಿಷ್ಣು ದೇವಾಲಯದ ಇತಿಹಾಸ ಮಂಡಿಸಿದರು. ಮತ್ತೋರ್ವ ಅತಿಥಿ ಕಾಫಿ ಬೆಳೆಗಾರರಾದ ಕೆ.ಎನ್. ಸಂದೀಪ್ ಸಾಹಿತಿ ಡಾ. ಕಾವೇರಿ ಉದಯ ಮಾತನಾಡಿದರು.

ಗಾಯಕರಾದ ಕಬ್ಬಚೀರ ರಶ್ಮಿ, ಎಂ.ಎಸ್. ಆಶಾ, ಮಾಲಾಮೂರ್ತಿ ಮೀರ, ನಳಿನಿ, ನಾಗರಾಜ್, ಉಮೇಶ್ ಹಾಗೂ ಆವರ್ತಿ ಮಹದೇವಪ್ಪ ಗಾಯನ ಹಾಡಿದರು ಸ್ನೇಹಸಿರಿ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕಿ ಪ್ರೇಮ ನಿರೂಪಿಸಿದರು. ಮಾಲಾಮೂರ್ತಿ ಸ್ವಾಗತಿಸಿದರು. ಕಬ್ಬಚೀರ ರಶ್ಮಿ ಪ್ರಾರ್ಥನೆ ಮಾಡಿದರು.