ಮಡಿಕೇರಿ, ಮಾ. ೨೫: ಕೊಡಗು ಮೈಸೂರು ಲೋಕಸಭಾ ಚುನಾವಣೆ ಯಲ್ಲಿ ತಮ್ಮ ಮತದ ಹಕ್ಕು ಚಲಾಯಿಸಲು ಪುರುಷರಿಗಿಂತ ಮಹಿಳೆ ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಅರಮನೆ ನಗರ ಎನಿಸಿರುವ ಮೈಸೂರು ಮತ್ತು ಕಾಫಿ ನಾಡು ಎಂಬ ಹಿರಿಮೆಯ ಕೊಡಗು ಜಿಲ್ಲೆಗಳನ್ನೊಳ ಗೊಂಡ ಈ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ನಿರ್ಣಾಯ ಕರು ಮಹಿಳೆಯರೇ ಆಗಿರುವುದು ವಿಶೇಷ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಸೇರಿ ಒಟ್ಟು ೬ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು ೮ ವಿಧಾನಸಭಾ ಕ್ಷೇತ್ರಗಳಿವೆ.

೨೦೨೪ರ ಮಾರ್ಚ್ ೯ ಅಂತ್ಯದ ನೋಂದಣಿ ಪ್ರಕಾರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೨೦,೭೨,೩೩೭ ಮತದಾರರಿದ್ದಾರೆ. ಈ ಪೈಕಿ ೨೦೨೪ ರ ಜನವರಿ ೨೧ ರಿಂದ ಮಾರ್ಚ್ ೧೫ ರವರೆಗಿನ ಅವಧಿಯ ನಡುವೆ ೧೭,೭೯೯ ಮಂದಿ ಹೊಸ ಮತದಾರರ ಸೇರ್ಪಡೆಯಾಗಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨,೩೬,೫೬೨ ಮತದಾರರಿದ್ದು, ಆ ಪೈಕಿ ೧,೧೫,೧೫೯ ಪುರುಷರು, ೧,೨೧,೩೯೪ ಮಹಿಳೆಯರು ಹಾಗೂ ೯ ಮಂದಿ ಇತರರು ಇದ್ದಾರೆ. ಅಂದರೆ, ಈ ಕ್ಷೇತ್ರದಲ್ಲಿ ಪುರುಷರಿಗಿಂತ ೬,೨೩೫ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨,೨೯,೫೯೨ ಮತದಾರರಿದ್ದು, ಆ ಪೈಕಿ ೧,೧೩,೩೧೯ ಪುರುಷರು, ೧,೧೬,೨೬೬ ಮಹಿಳೆಯರು ಹಾಗೂ ೭ ಮಂದಿ ಇತರರು ಇದ್ದಾರೆ. ಈ ಕ್ಷೇತ್ರದಲ್ಲಿ ಪುರುಷರಿಗಿಂತ ೨,೯೪೭ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಅಂದರೆ, ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಪುರುಷರಿಗಿಂತ ೯,೧೮೨ ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ ಒಟ್ಟು ೪,೬೬,೧೫೪ ಮತದಾರರ ಪೈಕಿ ೨,೨೮,೪೭೮ ಪುರುಷ ಮತ್ತು ೨,೩೭,೬೬೦ ಮಹಿಳಾ ಮತದಾರರಿದ್ದಾರೆ.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೧,೯೭,೨೧೫ ಮತದಾರರಿದ್ದು, ಆ ಪೈಕಿ ೯೮,೪೪೭ ಪುರುಷರು, ೯೮,೭೬೪ ಮಹಿಳೆಯರು ಹಾಗೂ ೪ ಮಂದಿ ಇತರರು ಇದ್ದಾರೆ. ಈ ಕ್ಷೇತ್ರದಲ್ಲಿ ಪುರುಷರಿಗಿಂತ ೩೧೭ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಹುಣಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨,೪೬,೫೦೮ ಮತದಾರರಿದ್ದು, ಆ ಪೈಕಿ ೧,೨೨,೨೮೪ ಪುರುಷರು, ೧,೨೪,೨೦೮ ಮಹಿಳೆಯರು ಹಾಗೂ ೧೬ ಮಂದಿ ಇತರರು ಇದ್ದಾರೆ. ಈ ಕ್ಷೇತ್ರದಲ್ಲಿ ಪುರುಷರಿಗಿಂತ ೧,೯೨೪ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೩,೪೫,೩೨೦ ಮತದಾರರಿದ್ದು, ಆ ಪೈಕಿ ೧,೭೧,೦೯೦ ಪುರುಷರು, ೧,೭೪,೧೯೬ ಮಹಿಳೆಯರು ಹಾಗೂ ೩೪ ಮಂದಿ ಇತರರು ಇದ್ದಾರೆ. ಅಂದರೆ, ಈ ಕ್ಷೇತ್ರದಲ್ಲಿ ಪುರುಷರಿಗಿಂತ ೩,೧೦೬ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨,೫೫,೬೧೫ ಮತದಾರರಿದ್ದು, ಆ ಪೈಕಿ ೧,೨೪,೪೧೯ ಪುರುಷರು, ೧,೩೧,೧೬೮ ಮಹಿಳೆಯರು ಹಾಗೂ ೨೮ ಮಂದಿ ಇತರರು ಇದ್ದಾರೆ. ಈ ಕ್ಷೇತ್ರದಲ್ಲಿ ಪುರುಷರಿಗಿಂತ ೬,೭೪೯ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೨,೫೪,೯೨೫ ಮತದಾರರಿದ್ದು, ಆ ಪೈಕಿ ೧,೨೪,೮೯೭ ಪುರುಷರು, ೧,೨೯,೯೯೬ ಮಹಿಳೆಯರು ಹಾಗೂ ೩೨ ಮಂದಿ ಇತರರು ಇದ್ದಾರೆ. ಅಂದರೆ, ಈ ಕ್ಷೇತ್ರದಲ್ಲಿ ಪುರುಷರಿಗಿಂತ ೫,೦೯೯ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ೩,೦೬,೬೦೦ ಮತದಾರರಿದ್ದು, ಆ ಪೈಕಿ ೧,೪೭,೫೦೫ ಪುರುಷರು, ೧,೫೯,೦೪೩ ಮಹಿಳೆಯರು ಹಾಗೂ ೫೨ ಮಂದಿ ಇತರರು ಇದ್ದಾರೆ. ಅಂದರೆ, ಈ ಕ್ಷೇತ್ರದಲ್ಲಿ ಪುರುಷರಿಗಿಂತ ೧೧,೫೩೮ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ೮ ವಿಧಾನಸಭಾ ಕ್ಷೇತ್ರಗಳ ಪೈಕಿ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರ ಅತಿ ಹೆಚ್ಚಿನ ಮತದಾರರನ್ನು ಹೊಂದಿದ್ದರೆ, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ ಕಡಿಮೆ ಮತದಾರರನ್ನು ಒಳಗೊಂಡಿದೆ. - ಅನಿಲ್ ಎಚ್.ಟಿ.