ಶ್ರೀಮಂಗಲ, ಮಾ. ೨೫: ಹಸುವಿಗೆ ಕಾಡುಕೋಣ ತಿವಿದ ಹಿನ್ನೆಲೆ ತೀವ್ರವಾಗಿ ಗಾಯವಾಗಿ ಹಸು ಸಾವು - ಬದುಕು ನಡುವೆ ಒದ್ದಾಡುತ್ತಿದ್ದ ಹಸುವಿಗೆ ತುರ್ತು ಚಿಕಿತ್ಸೆ ನಂತರ ಹಸು ಚೇತರಿಕೆ ಕಂಡಿದೆ.
ಶ್ರೀಮAಗಲ ಸಮೀಪ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ಹಸುಗೆ ಕಾಡುಕೋಣ ಹಿಂಬದಿಯಿAದ ಹಸುವಿಗೆ ಕೊಂಬಿನಿAದ ತಿವಿದಿದೆ. ಗ್ರಾಮದ ಬೆಳೆಗಾರ ಚೊಟ್ಟೆಯಂಡಮಾಡ ಉದಯ ಅವರಿಗೆ ಸೇರಿದ ಹಸುವಿನ ಮೇಲೆ ಕಿಬ್ಬೊಟ್ಟೆಯ ಭಾಗಕ್ಕೆ ಸುಮಾರು ಒಂದೂವರೆ ಅಡಿ ಆಳ-ಉದ್ದ ಗಾಯವಾಗಿತ್ತು. ಭಾನುವಾರ ಸಂಜೆ ಈ ಘಟನೆ ನಡೆದಿದ್ದು ರಜೆಯಲ್ಲಿದ್ದರೂ ಸಹ ಶ್ರೀಮಂಗಲ ಮುಖ್ಯ ಪಶುವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಅವರು ಸತತ ಮೂರು ಗಂಟೆಗಳ ಸಮಯ ನಿರಂತರವಾಗಿ ಮೂರು ಪದರು ಆಪರೇಷನ್ ನಡೆಸಿ ಚಿಕಿತ್ಸೆ ನೀಡಿದ್ದಾರೆ. ಬೆಳೆಗಾರ ಚೊಟ್ಟೆಯಂಡಮಾಡ ಉದಯ ಅವರು ಪ್ರತಿಕ್ರಿಯಿಸಿ ಹಸುವಿನ ಗಾಯ ನೋಡಿ, ಬದುಕುಳಿಯುವ ಭರವಸೆ ಇರಲಿಲ್ಲ. ಆದರೆ ಪಶು ವೈದ್ಯಾಧಿಕಾರಿಗಳ ನಿರಂತರ ಮೂರುಗಂಟೆಗಳ ಪರಿಶ್ರಮದಿಂದ ಸೋಮವಾರ ಬೆಳಿಗ್ಗೆ ಹಸು ಎದ್ದು ನಡೆಯುತ್ತಿದ್ದು, ಸ್ವಲ್ಪ ಹುಲ್ಲು ತಿನ್ನುತ್ತಿದೆ, ಪಶುವೈದ್ಯಾಧಿಕಾರಿ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ರಜೆಯಲ್ಲಿದ್ದರೂ ಕರೆಗೆ ಸ್ಪಂದಿಸಿ ತಕ್ಷಣ ಆಗಮಿಸಿ, ತುರ್ತು ಚಿಕಿತ್ಸೆಯನ್ನು ಸಕಾಲಕ್ಕೆ ನೀಡಿದ್ದರಿಂದ ಇದೀಗ ಹಸು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.