ಕುಶಾಲನಗರ, ಮಾ. ೨೫: ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಒಬ್ಬರು ಸರ್ಕಾರಿ ಬಸ್ನ ಫುಟ್ಬೋರ್ಡ್ನಲ್ಲಿ ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳನ್ನು ಇಳಿಸಿ ಕ್ರಮ ಕೈಗೊಂಡ ಘಟನೆಗೆ ಸಂಬAಧಿಸಿದAತೆ ಮಾಹಿತಿ ತಿಳಿದ ಪೊಲೀಸ್ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸೆ÷್ಟÃಬಲ್ ಆಶಾ ಎಂಬವರು ಕುಶಾಲನಗರ ತಾವರೆಕೆರೆ ಬಳಿ ಕರ್ತವ್ಯ ನಿರತರಾಗಿದ್ದಾಗ ರಸ್ತೆ ಸಾರಿಗೆ ನಿಲುಗಡೆ ಬಸ್ನಲ್ಲಿ ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಫುಟ್ಬೋರ್ಡ್ನಲ್ಲಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದ ವೇಳೆ ಗಮನಿಸಿ ಬಸ್ ನಿಲ್ಲಿಸಿ ಅವರನ್ನು ಇಳಿಸಿ ಅವರಿಗೆ ಬುದ್ಧಿವಾದ ಹೇಳಿ ನಂತರ ಖಾಸಗಿ ವಾಹನಗಳಲ್ಲಿ ಅವರನ್ನು ಕಾಲೇಜಿಗೆ ಕಳುಹಿಸಿ ಕರ್ತವ್ಯ ಪ್ರಜ್ಞೆ ಮೆರೆದಿರುವ ಬಗ್ಗೆ ‘ಶಕ್ತಿ’ ಪತ್ರಿಕೆಯಲ್ಲಿ ವರದಿಯಾಗಿತ್ತು.