ಮಡಿಕೇರಿ, ಮಾ. ೨೬: ಕುಶಾಲನಗರ ತಾಲೂಕು, ಬಸವನಹಳ್ಳಿ ಗ್ರಾಮದ ಪೈಸಾರಿ ಜಾಗ ಸರ್ವೆ ನಂ.೧/೧ ರ ಜಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವತಿಯಿಂದ ಕುಶಾಲನಗರದ ಬಸ್ ಘಟಕ ನಿರ್ಮಾಣ ಕಾಮಗಾರಿಗೆ ಅಡಚಣೆಯಾಗಿರುವ ೯೬ ಮರಗಳಿದ್ದು, ಈ ಮರಗಳ ಪೈಕಿ ೭೯ ಮರಗಳು ಗಟ್ಟೆ ಜಾತಿಯ ಮರಗಳನ್ನು ಇಲಾಖಾ ವತಿಯಿಂದ ಕಡಿದು ಸರ್ಕಾರಿ ನಾಟ ಸಂಗ್ರಹಾಲಯ, ಆನೆಕಾಡುವಿಗೆ ಸಾಗಿಸಲು ಮತ್ತು ೧೭ ಮೆದು ಜಾತಿಯ ಮರಗಳನ್ನು ಸ್ಥಳದಲ್ಲಿಯೇ ಹೇಗಿದೆಯೋ ಹಾಗೆ ಇರುವ ಸ್ಥಿತಿಯಲ್ಲಿ ಇಲಾಖಾ ವತಿಯಿಂದ ಬಹಿರಂಗ ಹರಾಜು ಮಾಡಲು ಕೋರಿರುತ್ತಾರೆ.

ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ತಾ. ೩೧ ರೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಇವರಿಗೆ ಸಲ್ಲಿಸುವಂತೆ ತಿಳಿಸಿದೆ. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.