ಮಡಿಕೇರಿ, ಮಾ. ೨೪: ಹೊದ್ದೂರು ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ ತಾ. ೨೬ ರಿಂದ ಏಪ್ರಿಲ್ ೨ರ ತನಕ ನಡೆಯಲಿದೆ.
ತಾ. ೨೬ ರಂದು ಸಂಜೆ ೬ ಗಂಟೆಗೆ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಅಂದಿಬೊಳಕ್, ತಾ. ೨೭ ರಂದು ಪಟ್ಟಣಿ, ಬೇಡುಹಬ್ಬ, ಸಂಜೆ ೪ ಗಂಟೆಗೆ ಭಗವತಿ ದೇವಿ ಹೊರ ಬರುವುದು. ತಾ. ೨೮ ರಂದು ಅಪರಾಹ್ನ ೩ ಗಂಟೆಗೆ ಶ್ರೀ ಭಗವತಿ ದೇವಿಯ ಅವಭೃತ ಸ್ನಾನ, ಕಾವೇರಿ ಹೊಳೆಯಲ್ಲಿ ದೇವಿಯ ಜಳಕದ ನಂತರ ಚಂಡೆ - ಮದ್ದಳೆಯೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಬಳಿಕ ವಿವಿಧ ನೃತ್ಯಬಲಿ ನಡೆಯಲಿದ್ದು, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ. ತಾ. ೨೯ ರಂದು ಶುದ್ಧಕಲಶ, ಮಧ್ಯಾಹ್ನ ಅನ್ನದಾನ ನಡೆಯಲಿದೆ.
ತಾ. ೩೦ ರಂದು ಶ್ರೀ ಭದ್ರಕಾಳಿ ದೇವರ ಕೋಲ, ಅಂದು ಬೆಳಿಗ್ಗೆ ಪಟ್ಟಣಿ ನಡೆಯಲಿದೆ. ತಾ. ೩೧ ರಂದು ಶ್ರೀ ಚಾಮುಂಡಿ ದೇವರಿಗೆ ಮೇಲೇರಿ ಸೌದೆ ಕಡಿಯುವುದು, ರಾತ್ರಿ ೭ ಗಂಟೆಗೆ ತೋತ ತೆರೆ, ಏಪ್ರಿಲ್ ೧ ರಂದು ರಾತ್ರಿ ೮ ಗಂಟೆಗೆ ಮೇಲೇರಿ ಅಗ್ನಿಸ್ಪರ್ಶ ಬಳಿಕ ವಿವಿಧ ತೋತತೆರೆ ನಡೆಯಲಿದೆ. ತಾ. ೨ ರಂದು ಬೆಳಿಗ್ಗೆ ೮ ಗಂಟೆಗೆ ಕಲ್ಯಾಟಜ್ಜಪ್ಪ ಕೋಲ ಹಾಗೂ ೧೧ ಗಂಟೆÀಗೆ ಶ್ರೀ ಚಾಮುಂಡಿ ದೇವರ ಕೋಲ ಜರುಗಲಿದೆ ಎಂದು ಶ್ರೀ ಮಹದೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.