ಮಾಸ್ಕೊ, ಮಾ. ೨೪: ತಾ.೨೨ ರ ರಾತ್ರಿ ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ನಡೆದ ಭಯಾನಕ ಭಯೋತ್ಪಾದನಾ ಘಟನೆಗೆ ಕಾರಣವಾದ ಐಸಿಸ್, ಅಮಾಯಕ ರಷ್ಯಾ ನಾಗರಿಕರನ್ನು ಹತ್ಯೆ ಮಾಡಿರುವ ವೀಡಿಯೋವನ್ನು ಬಿಡುಗಡೆಗೊಳಿಸಿದೆ. ನಾಲ್ವರು ಶಸ್ತçಸಜ್ಜಿತ ಉಗ್ರರು ಕೃತ್ಯ ಎಸಗುವ ಮುನ್ನ ವೀಡಿಯೋ ಚಿತ್ರೀಕರಣ ಪ್ರಾರಂಭಿಸಿ ಹತ್ಯೆ ಮಾಡುವಾಗಲೂ ‘ಬಾಡಿಕ್ಯಾಮ್' ಮೂಲಕ ವೀಡಿಯೋ ಚಿತ್ರೀಕರಿ ಸಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಐಸಿಸ್ ಭಯೊತ್ಪಾದನಾ ಕೃತ್ಯದ ಹೊಣೆ ಹೊತ್ತುಕೊಂಡಿದೆ.
೧೩೩ ಮಂದಿ ಮರಣ
ಮಾಸ್ಕೋವಿನ ಕ್ರಾಕಸ್ ಹಾಲ್ ಮಾಲ್ ನಲ್ಲಿದ್ದ ಒಟ್ಟು ೧೩೩ ಮಂದಿ ಉಗ್ರಗಾಮಿಗಳ ದಾಳಿಗೆ ಇದುವರೆಗೆ ಸಾವನ್ನಪ್ಪಿದ್ದು, ೧೫೦ ಕ್ಕೂ ಅಧಿಕ ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಕ್ರೇನ್ ದೂಷಿಸಿದ ಪುಟಿನ್
ಈ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೆರೆ ರಾಷ್ಟç ಉಕ್ರೇನ್, ಭಯೋತ್ಪಾದಕರಿಗೆ ಸಹಾಯ ಮಾಡಿದೆ ಎಂದು ಆರೋಪಿಸಿ ಕಿಡಿಕಾರಿದ್ದಾರೆ. ನಿನ್ನೆ ಸೆರೆಯಾದ ಭಯೋತ್ಪಾದಕರು ವಾಹನದಲ್ಲಿ ತಪ್ಪಿಸಿಕೊಳ್ಳುತ್ತಿದ್ದ ಸಂದರ್ಭ ಉಕ್ರೇನ್ನತ್ತ ತೆರಳುತ್ತಿದ್ದು, ಪುಟಿನ್ ಈ ಆರೋಪ ಮಾಡಲು ಕಾರಣ.
ತನ್ನ ನೇತೃತ್ವದಲ್ಲಿಯೇ ಕಳೆದೆರಡು ವರ್ಷಗಳ ಹಿಂದೆ ರಷ್ಯಾ ದೇಶವು ಉಕ್ರೇನ್ ರಾಷ್ಟçದ ಮೇಲೆ ದಾಳಿ ಪ್ರಾರಂಭಿಸಿದ್ದು ಇಂದಿಗೂ ಕೂಡ ನೆರೆ ರಾಷ್ಟçಗಳ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಲಿದೆ.
ಉಗ್ರಗಾಮಿಯ ಕಿವಿ ಕತ್ತರಿಸಿದ ರಷ್ಯಾ ಯೋಧ..?
ರಷ್ಯಾ ಭದ್ರತಾ ಪಡೆಗೆ ಸೆರೆಯಾದ ೪ ಉಗ್ರಗಾಮಿಗಳ ಪೈಕಿ ಓರ್ವನನ್ನು ವಿಚಾರಣೆ ನಡೆಸುತ್ತಿರುವ ವೇಳೆ ಕೋಪಗೊಂಡ ಯೋಧ ಉಗ್ರಗಾಮಿಯ ಕಿವಿಯನ್ನು ಕತ್ತರಿಸಿದ ವೀಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ ಯಾದರೂ ಇದರ ಸತ್ಯಾಸತ್ಯತೆ ಬಗ್ಗೆ ಅಲ್ಲಿನ ಸ್ಥಳೀಯ ಯಾವುದೇ ಮಾಧ್ಯಮ ದವರೂ ಪರಿಶೀಲನೆ ನಡೆಸಿಲ್ಲ.