ಮಡಿಕೇರಿ, ಮಾ. ೨೪: ಮಡಿಕೇರಿ ಕೊಡವ ಸಾಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ಇತ್ತೀಚೆಗೆ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊಡವ ಸಮಾಜದ ಸಭಾಂಗಣದಲ್ಲಿ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲೆ ಹಾಗೂ ಮಾಜಿ ಅಂತರ ರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ್ತಿ ಡಾ. ಮಂಡೇಪAಡ ಪುಷ್ಪಾ ಕುಟ್ಟಣ್ಣ ಅವರು ಪಾಲ್ಗೊಂಡಿದ್ದರು. ವಿವಿಧ ಕ್ರೀಡಾ ಸ್ಪರ್ಧೆಗಳ ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಕೊಡವ ಎಂ.ಎ. ಪದವಿ ಪಡೆದ ೭ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದರೊಂದಿಗೆ ಗಣರಾಜ್ಯೋತ್ಸವ ಸಂದರ್ಭ ನವದೆಹಲಿಯಲ್ಲಿ ಎನ್.ಸಿ.ಸಿ.ಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿನಿ ಪೆಮ್ಮಚಂಡ ಪುಣ್ಯ ಪೊನ್ನಮ್ಮ ಹಾಗೂ ಮೇವಡ ಆಲಿಯಾ ಚೋಂದಮ್ಮ ಅವರುಗಳನ್ನು ಸನ್ಮಾನಿಸಲಾಯಿತು. ಪುಷ್ಪ ಕುಟ್ಟಣ್ಣ ಅವರು ಈ ಸಂದರ್ಭ ಮಾತನಾಡಿ, ಮಹಿಳೆಯರ ಸಾಧನೆಗೆ ತವರು ಮನೆ ಹಾಗೂ ವಿವಾಹವಾಗಿ ಹೋದ ಮನೆಯಿಂದಲೂ ಸಹಕಾರ ಅಗತ್ಯವೆಂದರು. ಐಚಂಡ ರಶ್ಮಿ ಮೇದಪ್ಪ ಅವರು ಕೊಡವ ಸಮು ದಾಯದಲ್ಲಿ ಪೊಮ್ಮಕ್ಕಡ ಸ್ಥಾನಮಾನ ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಿದರು. ಅಧ್ಯಕ್ಷೆ ಕವಿತಾ ಅವರು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ಬೊಳ್ಳಜೀರ ಯಮುನಾ ಅಯ್ಯಪ್ಪ ಸ್ವಾಗತಿಸಿ, ಸಣ್ಣುವಂಡ ಉಷಾ ಅಯ್ಯಣ್ಣ ವಂದಿಸಿದರು. ಚೋಕಿರ ಅನಿತಾ ದೇವಯ್ಯ ನಿರೂಪಿಸಿದರು. ಮುಕ್ಕಾಟಿರ ಅಂಜು ಸುಬ್ರಮಣಿ, ಕನ್ನಂಡ ಶೀತಲ್, ಪಳಂಗAಡ ರೇಖ, ಮೂವೆರ ಸರಿತ, ಮಾದೇಟಿರ ಪ್ರಮೀಳ, ಕನ್ನಂಡ ಸುನಿತ ಅತಿಥಿ ಸಾಧಕರನ್ನು ಪರಿಚಯಿಸಿದರು.