ವೀರಾಜಪೇಟೆ, ಮಾ. ೨೪: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವೀರಾಜಪೇಟೆಯ ಐ.ಕ್ಯೂ.ಎ.ಸಿ ಘಟಕ, ರಾಜ್ಯಶಾಸ್ತç ವಿಭಾಗ, ಮಾನವ ಹಕ್ಕುಗಳ ಸಮಿತಿ ಹಾಗೂ ಬೆಂಗಳೂರು ನಿಮಾನ್ಸ್ನ ಯುವಸ್ಪಂದನ ಇವುಗಳÀ ಸಂಯುಕ್ತಾಶ್ರಯದಲ್ಲಿ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ದಯಾನಂದ ಕೆ.ಸಿ. ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರಿನ ನಿಮಾನ್ಸ್ನ ಜೀವನ ಕೌಶಲ್ಯ ತರಬೇತಿ ಮತ್ತು ಆಪ್ತ ಸಮಾಲೋಚನಾ ಸೇವೆಗಳ ವಿಭಾಗದ ಕಾರ್ಯಕ್ರಮ ಸಂಯೋಜನಾಧಿಕಾರಿ ಶ್ರೀವಿದ್ಯಾ ಆರ್.ಎನ್, ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಇಂದಿನ ಯುವ ಜನಾಂಗವು ಜೀವನ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಸಾಮಾಜಿಕ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ತರುವುದರೊಂದಿಗೆ, ವ್ಯಕ್ತಿಗಳ ಭಾವನೆಗಳು ಮತ್ತು ಒತ್ತಡಗಳ ನಿರ್ವಹಣೆಯಿಂದ ಸುಂದರ ಬದುಕಿನ ನಿರ್ಮಾಣ ಸಾಧ್ಯ ಎಂದರು. ಮತ್ತೋರ್ವ ಅತಿಥಿ ನಿಮಾನ್ಸ್ ಆಪ್ತ ಸಮಾಲೋಚನಾ ಸೇವೆಗಳ ಸಹಾಯಕರಾದ ಸೌಜನ್ಯ ಮಾತನಾಡಿ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿರುವ ಯುವ ಸ್ಪಂದನ ವೇದಿಕೆಯ ವಿವಿಧ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಆಪ್ತ ಸಮಾಲೋಚನೆಯ ಅವಶ್ಯಕತೆಗಳ ಬಗ್ಗೆ ಮಾಹಿತಿಯಿತ್ತರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ದಿವ್ಯ. ಆರ್ ಮತ್ತು ಮಾನವ ಹಕ್ಕುಗಳ ಸಮಿತಿಯ ಸಂಚಾಲಕರು, ರಾಜ್ಯಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ದಿವ್ಯ ಎಂ.ಬಿ. ಉಪಸ್ಥಿತರಿದ್ದರು.