ಸಿದ್ದಾಪುರ, ಮಾ. ೨೫: ಕಳೆದ ಎರಡು ದಿನಗಳ ಹಿಂದೆ ನೆಲ್ಯಹುದಿಕೇರಿ ಗ್ರಾಮದ ಅತ್ತಿಮಂಗಲ ಸಮೀಪ ಕಾಫಿ ತೋಟದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಅಣ್ಣಾಮಲೈ ಎಂಬ ಕಾರ್ಮಿಕನ ಆರೋಗ್ಯ ಕ್ಷೇಮದ ಬಗ್ಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಮಂತರ್ ಗೌಡ ವಿಚಾರಿಸಿದರು. ಈ ಸಂದರ್ಭ ವೈದ್ಯಾಧಿಕಾರಿಗಳಿಗೆ ಗಾಯಾಳುಗೆ ಉತ್ತಮ ಚಿಕಿತ್ಸೆಯನ್ನು ನೀಡುವಂತೆ ಸೂಚನೆ ನೀಡಿದರು.