ಕೋವರ್ಕೊಲ್ಲಿ ಇಂದ್ರೇಶ್
ಕುಕ್ಕೆ ಸುಬ್ರಹ್ಮಣ್ಯ, ಮಾ. ೨೪: ಇಲ್ಲಿಗೆ ಸಮೀಪದ ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿಗೆ ಶನಿವಾರ ಸಂಜೆ ನಾಲ್ಕು ಜನ ನಕ್ಸಲರ ತಂಡ ಕಾಣಿಸಿಕೊಂಡ ನಂತರ ಕಾಡಿನೊಳಗೆ ಹೋಗಿರುವ ಕುರಿತು ವರದಿ ಆಗಿದೆ. ಅರಣ್ಯದ ಅಂಚಿನಲ್ಲಿ ವಾಸಿಸುವ ಅಶೋಕ್ ಎಂಬ ಗ್ರಾಮಸ್ಥರೊಬ್ಬರ ಮನೆಗೆ ಬಂದಿದ್ದ ಅಪರಿಚಿತರು ಸುಮಾರು ಒಂದು ಗಂಟೆಗಳ ಕಾಲ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆಯೆಷ್ಟೆ ದಕ್ಷಿಣಕನ್ನಡ - ಕೊಡಗು ಗಡಿಭಾಗದ ಕಡಮಕಲ್ಲು ಕೂಜಿಮಲೆಯಲ್ಲಿ ಪ್ರತ್ಯಕ್ಷಗೊಂಡಿದ್ದ ನಕ್ಸಲರು ಆತಂಕ ಹುಟ್ಟಿಸಿದ್ದರು. ಇದೀಗ ಸಮೀಪದ ಸುಬ್ರಹ್ಮಣ್ಯದಲ್ಲಿ ಕಾಣಿಸಿಕೊಂಡಿರುವುದು ದುಗುಡ ಹುಟ್ಟಿಸಿದೆ. ಶನಿವಾರ ಸಂಜೆ ಸುಮಾರು ೬.೩೦ ಗಂಟೆ ಸುಮಾರಿಗೆ ಸಣ್ಣದಾಗಿ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಶಂಕಿತರ ತಂಡ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಐನೆಕಿದು ಗ್ರಾಮದ ಅರಣ್ಯದಂಚಿನ ತೋಟದ ಮೂಲಕ ಆಗಮಿಸಿದ್ದರು. ರಬ್ಬರ್ ತೋಟದಲ್ಲಿದ್ದ ಕೆಲಸದವರ ಶೆಡ್ಗೆ ಭೇಟಿ ನೀಡಿದ ವೇಳೆ ಅಲ್ಲಿದ್ದವರು ಶೆಡ್ನ ಬಾಗಿಲು ಹಾಕಿದ್ದು, ಬಳಿಕ ಶಂಕಿತರ ತಂಡ ಅಲ್ಲೇ ಪಕ್ಕದಲ್ಲಿನ ತೋಟದ ಮಾಲೀಕರ ಮನೆಗೆ ತೆರಳಿದ್ದರು ಎನ್ನಲಾಗಿದೆ. ಮನೆಯಿಂದ ಎರಡು ಕೆಜಿಯಷ್ಟು ಅಕ್ಕಿ ಮತ್ತು ಸಕ್ಕರೆಯನ್ನು ತಂಡವು ಪಡೆದುಕೊಂಡು ಕತ್ತಲಿನಲ್ಲೇ ಜಿನುಗುತ್ತಿದ್ದ ಮಳೆಯಲ್ಲಿ ಅರಣ್ಯದೊಳಗೆ ಕಣ್ಮರೆ ಆಗಿದೆ.
ನಾಲ್ವರ ತಂಡ ಮನೆಯೊಳಗೆ ಬಂದಿದೆ ಎನ್ನಲಾಗಿದ್ದರೂ, ತಂಡದಲ್ಲಿ ನಾಲ್ಕೆöÊದು ಮಂದಿ ಇರುವ ಶಂಕೆ ಇದೆ. ಮನೆಗೆ ಆಗಮಿಸಿದ ಶಂಕಿತರ ಕೈಯಲ್ಲಿ ಗನ್ ಮಾದರಿ ಇದ್ದಿದ್ದು, ಅದನ್ನು ಬಟ್ಟೆ ಅಥವಾ ಯಾವುದೋ ವಸ್ತುವಿನಿಂದ ಸುತ್ತಿ ಕವರ್ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಶಂಕಿತರು ಮನೆಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಲಾಗಿದ್ದು, ಪೊಲೀಸರು ಅಲ್ಲಿಗೆ ತೆರಳಿ ಮಾಹಿತಿ ಕಲೆ ಹಾಕಲು ಆರಂಭಿಸಿದ್ದಾರೆ.
ನಕ್ಸಲ್ ನಿಗ್ರಹ ದಳದ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದು, ತನಿಖಾ ಅಧಿಕಾರಿಗಳು ಮನೆಯವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಕ್ಸಲ್ ನಿಗ್ರಹ ದಳದವರು ಈ ಪ್ರದೇಶಗಳ ಸಮೀಪದಲ್ಲಿ ಕೂಂಬಿAಗ್ ನಡೆಸುತ್ತಿದ್ದಾರೆ. ನಕ್ಸಲರು ಕಳೆದ ಭಾನುವಾರ ಕಾಣಿಸಿಕೊಂಡಿದ್ದ ಕೂಜಿಮಲೆ ಮತ್ತು ನಿನ್ನೆ ಕಾಣಿಸಿಕೊಂಡ ಐನೆಕಿದು ನಡುವೆ ಸುಮಾರು ೨೫-೨೮ ಕಿ.ಮೀ. ಅಂತರವಿದೆ. ಇದೇ ಭಾಗದಲ್ಲಿ ನಕ್ಸಲ್ ನಿಗ್ರಹ ದಳ ನಿರಂತರ ಶೋಧ ಕಾರ್ಯ ನಡೆಸುತ್ತಿದ್ದರೂ ಎಎನ್ಎಫ್ ತಂಡಕ್ಕೆ ಶಂಕಿತರು ಕಾಣಿಸಿರಲಿಲ್ಲ. ನಕ್ಸಲರು ಭೇಟಿ ನೀಡಿದ ಪ್ರದೇಶ ಕುಮಾರಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿಗೆ ಹತ್ತಿರವಿದೆ. ಇಲ್ಲಿಂದ ಸೋಮವಾರಪೇಟೆ ಕಡೆಗೆ ಮತ್ತು ಇನ್ನೊಂದು ದಾರಿಯಾಗಿ ಗಾಳಿಬೀಡು ನಂತರ ಸಂಪಾಜೆ ಮೂಲಕ ಕೇರಳಕ್ಕೆ ಅರಣ್ಯದೊಳಗೆೆ ಹೋಗಬಹುದಾಗಿದೆ. ಸದ್ಯ ನಕ್ಸಲ್ ನಿಗ್ರಹ ದಳ ಶೋಧ ಚುರುಕುಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಸುಬ್ರಮಣ್ಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಕಾರ್ತಿಕ್ ಅವರು ನಕ್ಸಲರ ತಂಡ ಭೇಟಿ ನೀಡಿದ್ದನ್ನು ಖಚಿತಪಡಿಸಿದ್ದು, ಕೊಂಬಿAಗ್ ನಡೆಸಲಾಗುತ್ತಿದೆ ಎಂದರು. ಮಳೆ ಬರುತಿದ್ದ ಕಾರಣದಿಂದ ನಕ್ಸಲರು ಆಶ್ರಯ ಪಡೆಯಲು ಒಂದು ಗÀಂಟೆ ಮನೆಯಲ್ಲಿ ಇದ್ದು ಕಾಡಿಗೆ ಹೋಗಿದ್ದಾರೆ ಎಂದು ಅವರು ಹೇಳಿದರು.
ನಕ್ಸಲರು ದಟ್ಟ ಆರಣ್ಯದೊಳಗೆ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದು ರಾತ್ರಿ ಹೊತ್ತಿನಲ್ಲಿ ಮಾತ್ರ ಅಡುಗೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಹಗಲಿನಲ್ಲಿ ಹೊಗೆ ಕಾಣಿಸಿಕೊಳ್ಳುವದರಿಂದ ರಾತ್ರಿ ಅಡುಗೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ನಕ್ಸಲರು ಒಂದೇ ಸ್ಥಳದಲ್ಲಿ ಠಿಕಾಣಿ ಹೂಡದೇ ಸ್ಥಳ ಬದಲಾಯಿಸುತ್ತಿದ್ದಾರೆ ಎಂದು ಎಎನ್ಎಫ್ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪೊಲೀಸರು ಎಷ್ಟೇ ಕೊಂಬಿAಗ್ ನಡೆಸಿದರೂ ರಾತ್ರಿ ಹೊತ್ತಿನಲ್ಲಿ ಸ್ವಸ್ಥಳಕ್ಕೆ, ಶಿಬಿರಕ್ಕೆ ಮರಳಲೇಬೇಕಾಗುತ್ತದೆ. ಆ ಸಮಯದಲ್ಲಿ ನಕ್ಸಲರು ಸ್ಥಳ ಬದಲಿಸುತ್ತಾರೆ ಎಂಬ ಮಾಹಿತಿ ಇದೆ. ಈ ರೀತಿ ಸ್ಥಳ ಬದಲಿಸುವಾಗಲೇ ನಕ್ಸಲರು ತಮಗೆ ಅವಶ್ಯದ ಆಹಾರ ಪದಾರ್ಥ ಸಂಗ್ರಹಿಸಲು ಕಾಡಂಚಿನ ಮನೆಗೆ ಬರುತ್ತಾರೆ ಎನ್ನಲಾಗಿದೆ. ಈ ಹಿಂದೆಯೂ ಸಂಜೆ ಹೊತ್ತಿನಲ್ಲೇ ನಕ್ಸಲರು ಕಾಣಿಸಿಕೊಂಡಿದ್ದು, ಶಂಕಿತ ನಕ್ಸಲ ವಿಕ್ರಂಗೌಡ ಮತ್ತು ಆವನ ತಂಡ ಇಲ್ಲಿ ಸುತ್ತಾಡುತ್ತಿದೆ ಎಂದು ಪೋಲೀಸರು ಶಂಕಿಸಿದ್ದಾರೆ.