ಹೋಳಿ ಹಬ್ಬವು ಭಾರತ ದೇಶದಲ್ಲಿ ಆಚರಿಸಲ್ಪಡುವ ಪ್ರಮುಖವಾದ ಸಂಭ್ರಮ ಸಡಗರದ ಹಬ್ಬಗಳಲ್ಲಿ ಒಂದಾಗಿದೆ. ಚಳಿಗಾಲಕ್ಕೆ ವಿದಾಯ ಹೇಳಿ ವಸಂತ ಕಾಲಕ್ಕೆ ಸ್ವಾಗತ ಕೋರುತ್ತಾ ಶಾಂತಿ ನೆಮ್ಮದಿ ಶುಭ ಸಂಕೇತವಾಗಿ ಆಚರಿಸುವ ಸಂಭ್ರಮಾಚರಣೆಯ ಹಬ್ಬವೆಂದು ಕೂಡ ಹೇಳಬಹುದು. ಹೋಳಿ ಹಬ್ಬವನ್ನು ಭಾರತ ಮಾತ್ರವಲ್ಲದೆ ಏಷ್ಯಾದ ಹಲವು ಭಾಗಗಳಲ್ಲಿ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲೂ ಕೂಡ ಆಚರಿಸಲಾಗುತ್ತದೆ.

ಭಾರತ ದೇಶವು ವಿವಿಧ ಸಂಸ್ಕೃತಿಗಳ ತವರೂರು. ಪ್ರತಿಯೊಂದು ಹಬ್ಬದ ಆಚರಣೆಯ ಹಿಂದೆ ಮಹತ್ತರವಾದ ಸಾಮಾಜಿಕ ಸಂದೇಶಗಳನ್ನು ನೀಡುವ ಸಂಪ್ರದಾಯಗಳು ಇದೆ. ಕಾಲದಿಂದ ಕಾಲಕ್ಕೆ ಮಾನವನ ಸಾಮಾಜಿಕ ಜೀವನದಲ್ಲಿ ಬದಲಾವಣೆಗಳನ್ನು ಹೊಂದಿ, ಸಮಕಾಲೀನ ಸಂದರ್ಭದಲ್ಲಿ ಹಬ್ಬಗಳ ಆಚರಣೆಗಳಲ್ಲಿ ಕೂಡ ಬದಲಾವಣೆಯಾಗುತ್ತಾ ಬಂದಿವೆ.

ಈ ವರ್ಷ ಮಾರ್ಚ್ ೨೪ ಮತ್ತು ೨೫ ರಂದು ಈ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಗುವುದು. ವಸಂತ ಋತುವಿನಲ್ಲಿ ಬರುವ ಈ ಹಬ್ಬವನ್ನು ವಸಂತ ಹಬ್ಬವೆಂದೂ ಕೂಡ ಕರೆಯಲಾಗುತ್ತದೆ. ವಸಂತ ಕಾಲದ ಪ್ರಾರಂಭದಲ್ಲಿ ಬರುವ ಪಾಲ್ಗುಣ ಮಾಸದಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಬಣ್ಣಗಳ ಹಬ್ಬವೆಂದೆ ಕರೆಯುವ ಹೋಳಿ ಹಬ್ಬವು ಹಿಂದುಗಳ ಹಬ್ಬವಾದರೂ ಕೂಡ ಸರ್ವ ಧರ್ಮೀಯರು ಆಚರಿಸುತ್ತಾರೆ. ಭಾವೈಕ್ಯತೆಯನ್ನು ಪ್ರತಿಬಿಂಬಿಸುವ ಈ ಹಬ್ಬವು ಜಾತಿ, ಮತ, ಪಂಥವಿಲ್ಲದೆ ಎಲ್ಲರೂ ಒಟ್ಟುಗೂಡಿ ಸಂತೋಷ ಸಡಗರದಿಂದ ಕುಣಿದು ಕುಪ್ಪಳಿಸಿ, ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ಭಾರತ ಮಾತ್ರವಲ್ಲದೆ ಅಮೆರಿಕಾ, ದಕ್ಷಿಣ ಆಫ್ರಿಕಾ, ಕ್ಯಾಲಿಫೋರ್ನಿಯಾ, ಜರ್ಮನಿ, ಮಲೇಶಿಯಾ, ಬ್ರೆಜಿಲ್, ನೆದರ್‌ಲ್ಯಾಂಡ್ ಸೇರಿದಂತೆ ಹತ್ತು ಹಲವಾರು ದೇಶಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಸಾರ್ವಜನಿಕವಾಗಿ ಆಚರಿಸುವ ಈ ಹಬ್ಬದಲ್ಲಿ ಹಲವು ರಂಗು ರಂಗಿನ ಬಣ್ಣಗಳನ್ನು ತಮ್ಮ ಪ್ರೀತಿ ಪಾತ್ರರೊಡನೆ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಯಿಂದ ಹಚ್ಚಿಕೊಂಡು ಆಚರಿಸಿ ಹಬ್ಬವು ಮಾನವನ ಕ್ರೌರ್ಯ ಮತ್ತು ಅಜ್ಞಾನ, ಅಹಂಕಾರ, ಅಂಧಕಾರವನ್ನು ದೂರ ಮಾಡಿ ಆರಿಷಡ್ವರ್ಗಗಳನ್ನು ನಾಶ ಮಾಡಿ ಸುಜ್ಞಾನ, ಸಮಾನತೆ, ಏಕತಾ ಮನೋಭಾವವನ್ನು, ಪ್ರೀತಿ ನಂಬಿಕೆಯನ್ನು ಬಿಂಬಿಸುವ ಕೆಟ್ಟದನ್ನು ಮೆಟ್ಟಿ ಒಳ್ಳೆಯದನ್ನು ಬಯಸುವ ಶುಭ ಸಂಕೇತವಾಗಿದೆ.

ಈ ಹಬ್ಬಕ್ಕೆ ಹಲವಾರು ಪೌರಾಣಿಕ ಹಿನ್ನೆಲೆಗಳ ಕಥೆಗಳು ಇವೆ. ಪುರಾಣ ಧರ್ಮ ಗ್ರಂಥಗಳಲ್ಲಿ ಕೂಡ ಹೋಳಿ ಹಬ್ಬದ ಉಲ್ಲೇಖ ಕಾಣಬಹುದು. ಏಳನೇ ಶತಮಾನದ ಕೃತಿ ರತ್ನಾವಳಿಯಲ್ಲಿ ರಾಜ ಹರ್ಷನು ಹೋಳಿ ಹಬ್ಬದ ಬಗ್ಗೆ ಉಲ್ಲೇಖಿಸಿದ್ದಾರೆ. ಹೋಳಿ ಹಬ್ಬವು ಪುರುಷ ಪುರುಷೋತ್ತಮನಾದ ಶ್ರೀ ಕೃಷ್ಣ ಮತ್ತು ರಾಧೆಯ ಪ್ರೇಮದ ಸಂಕೇತವೆAದು ಹೇಳಲಾಗುತ್ತದೆ. ಹೋಲಿಕಾದಹನ್ ಅಥವಾ ಕಾಮ ದಹನ ಎಂತಲೂ ಕೂಡ ಈ ಹಬ್ಬವನ್ನು ಕರೆಯಲಾಗುತ್ತದೆ.

ಹಿರಣ್ಯಕಶಿಪುವಿನ ಯಾವ ಶಿಕ್ಷೆಯು ಪ್ರಹ್ಲಾದನಿಗೆ ಮರಣವನ್ನು ನೀಡಲು ಸಾಧ್ಯವಾಗುವುದಿಲ್ಲ. ಕೊನೆಗೆ ತನ್ನ ತಂಗಿ ಹೋಲಿಕಾ ಎಂಬ ರಾಕ್ಷಸಿಯನ್ನು ಕರೆದು ಪ್ರಹ್ಲಾದನನ್ನು ಕೊಲ್ಲಲು ಆದೇಶ ನೀಡಿದಾಗ ಪ್ರಹ್ಲಾದನನ್ನು ಕೂರಿಸಿ ಬೆಂಕಿಯನ್ನು ನೀಡಿದಾಗ ಹೋಲಿಕಾ ಸುಟ್ಟುಹೋಗು ತ್ತಾಳೆ ಮತ್ತು ಉರಿದುಹೋಗಬೇಕಿದ್ದ ಪ್ರಹ್ಲಾದ ತನ್ನ ಹರಿಭಕ್ತಿಯಿಂದಾಗಿ ಬದುಕಿ ಬರುತ್ತಾನೆ. ಈ ಮೂಲಕ ದೈವಭಕ್ತನಾದ ಪ್ರಹ್ಲಾದನನ್ನು ಕೆಟ್ಟ ಉದ್ದೇಶದಿಂದ ಅಂತ್ಯ ಮಾಡಲು ಹೋಗಿ ಆಕೆಯೇ ಸುಟ್ಟು ಭಸ್ಮವಾಗಿ ಹೋಗುತ್ತಾಳೆ. ಹೋಲಿಕಾ ರಕ್ಕಸಿ ಉರಿದುಹೋದ ನೆನಪಿನಲ್ಲಿ ಆಚರಿಸುವ ಹಬ್ಬವಾದ್ದರಿಂದ ಹೋಲಿಕಾ ಅಥವಾ ಹೋಲಿಕಾದಹನ್ ಎಂತಲೂ ಕೂಡ ಈ ಹಬ್ಬವನ್ನು ಕರೆಯಲಾಗುತ್ತದೆ. ಇದೇ ರೀತಿ ಪುರಾಣದಲ್ಲಿ ಅನೇಕ ಉಲ್ಲೇಖಗಳು ಹಬ್ಬಕ್ಕಿದೆ.

ಆಧುನಿಕ ಯುಗದಲ್ಲಿ ಯುವ ಪೀಳಿಗೆಯು ಈ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತದೆ. ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರಾದೀಯಾಗಿ ಸ್ನೇಹಿತರು ಬಂದು ಮಿತ್ರರು, ಸಹೋದರ ಸಹೋದರಿಯರ ನೆಚ್ಚಿನ ಬಣ್ಣದ ಓಕುಳಿಯ ಸಂಭ್ರಮದ ದಿನವಾಗಿದೆ.

-ಹೇಮಂತ್ ಪಾರೇರಾ, ಯಡವನಾಡು. ೯೭೪೩೩೫೩೫೯೭