ಶನಿವಾರಸಂತೆ, ಮಾ. ೨೫: “ರೈತರ ಜಮೀನಿನ ಬೆಳೆ ನಾಶಕ್ಕೆ ಕಾಡಾನೆ, ಕಾಡುಹಂದಿ, ಕಾಟಿ (ಕಾಡುಕೋಣ) ಕಾರಣವೆಂದು ಬೆರಳು ತೋರಿಸುವುದು ಸಹಜ. ಆದರೆ, ಪ್ರತ್ಯಕ್ಷ ಕಾರಣ ಕಾಡು ಪ್ರಾಣಿಗಳಾದರೂ ಪರೋಕ್ಷ ಕಾರಣ ಮಾನವನೇ’’ ಹಿರಿಯ ರೈತರೊಬ್ಬರ ಅನುಭವದ ಮಾತಿದು. ಕೊಡಗು-ಹಾಸನ ಜಿಲ್ಲೆಗಳ ಗಡಿಭಾಗ ಶನಿವಾರಸಂತೆ ಮತ್ತು ಕೊಡ್ಲಿಪೇಟೆ. ಈ ೨ ಹೋಬಳಿಗಳ ಗ್ರಾಮಗಳಲ್ಲಿ ರೈತರ ಕೃಷಿಭೂಮಿಯಲ್ಲಿ ಬೆಳೆ ನಾಶಕ್ಕೆ ಕಾಡಾನೆಗಳೇ ಮುಖ್ಯ ಕಾರಣ. ನಂತರ ಕೆಲವು ಕಡೆ ಮುಳ್ಳಂದಿ, ಕಾಡುಹಂದಿ ಹಾಗೂ ವಿರಳವಾಗಿ ಕಾಟಿ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಹೌದು, ಕಾಡಾನೆಗಳು ಜಮೀನುಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತವೆ. ಬೆಳೆಯನ್ನು ತಿನ್ನುತ್ತವೆ. ಇದು ಸತ್ಯಸಂಗತಿಯಾ ದರೂ ಕಾಡುಗಳ ನಾಶವೇ ಆನೆಗಳ ಗ್ರಾಮ ಸಂಚಾರಕ್ಕೆ, ವಾಸ್ತವ್ಯಕ್ಕೆ ಮುಖ್ಯ ಕಾರಣವಾಗಿದೆ. ಶನಿವಾರ ಸಂತೆ ವಲಯ ವ್ಯಾಪ್ತಿಯಲ್ಲಿ ಮಾಲಂಬಿ, ನಿಡ್ತ ಮೀಸಲು ಅರಣ್ಯ, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಉಂಬಳಿ ಬೆಟ್ಟ, ಕಟ್ಟೇಪುರ ಅರಣ್ಯ ಗಳಿದ್ದು ಕಾಡಾನೆಗಳು ನೆಲೆಸುವ ತಾಣವಾಗಿವೆ. ಕಟ್ಟೇಪುರವೊಂದೇ ಇಂದು ಸ್ವಾಭಾವಿಕವಾದ ಸಂಪನ್ಮೂಲ ಅರಣ್ಯವಾಗಿ ಉಳಿದಿದೆ. ಸಣ್ಣ ಅರಣ್ಯವಾಗಿದ್ದು ಸುತ್ತಲು ಟ್ರೆಂಚ್ ನಿರ್ಮಿಸಲಾಗಿದೆ. ಹಾಗಾಗಿ, ಆನೆಗಳು ಸಿಕ್ಕ ಜಾಗದಲ್ಲೆ ನುಸುಳಿ ನಾಡಿನತ್ತ ಧಾವಿಸುತ್ತವೆ. ಗೊರೂರು ಡ್ಯಾಂ ನಿರ್ಮಾಣದ ನಂತರವೇ ಕಾಡುಗಳ ನಾಶಕ್ಕೆ ಆರಂಭ ಎಂಬ ಅಭಿಪ್ರಾ ಯವಿದೆ. ಹೇಮಾವತಿ ಹಿನ್ನೀರಿನಿಂದ ಬಹಳಷ್ಟು ಪ್ರದೇಶಗಳು ಮುಳುಗಡೆ ಯಾದವು. ಮುಳುಗಡೆ ಸಂತ್ರಸ್ತರಿಗೆ ಪರಿಹಾರವಾಗಿ ಅರಣ್ಯ ಭಾಗದ ಪ್ರದೇ ಶಗಳನ್ನೇ ಮಂಜೂರು ಮಾಡ ಲಾಯಿತು. ಅರಣ್ಯದ ಪರಿಧಿ ಸಂಕು ಚಿತವಾಯಿತು. ಕಾಡಿನಲ್ಲಿ ಸಾಕಷ್ಟು ಆಹಾರ, ನೀರು ಸಿಗದಿದ್ದಾಗ ಆನೆಗಳು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿ ನಿಂದ ಭತ್ತದ ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಗ್ರಾಮಗಳತ್ತ ಸಂಚಾರ ಆರಂಭಿಸುತ್ತವೆ. ನಂತರ ಕಾಫಿ, ಬಾಳೆ, ಹಲಸು ಬೆಳೆ ಇರುವವರೆಗೂ ಮೇ ತಿಂಗಳವರೆಗೂ ಆನೆಗಳ ದಾಳಿ ಸಾಗುತ್ತದೆ. ದಿನವೊಂದಕ್ಕೆ ಆನೆಗೆ ೨೦೦-೩೦೦ ಕೆ.ಜಿ. ಆಹಾರ ಬೇಕು. ೧೦೦-೨೦೦ ಲೀಟರ್ ನೀರು ಬೇಕಾಗು ತ್ತದೆ. ಕಾಲಕಾಲಕ್ಕೆ ತಕ್ಕಂತೆ ಸಿಗುವ ಆಹಾರ ಸೇವಿಸುತ್ತದೆ ಎನ್ನುತ್ತಾರೆ. ಆಹಾರ ಅರಸಿ ಬರುವ ಕಾಡಾನೆಗ ಳನ್ನು ಕಂಡಾಗ ಜನ ಕೂಗುವುದು, ಪಟಾಕಿ, ಗುಂಡು ಹೊಡೆಯುವುದು ಮಾಡುತ್ತಾರೆ. ಇದು ತಪ್ಪು. ಶಬ್ದಕ್ಕೆ ಗಾಬರಿಯಾಗಿ ಒತ್ತಡಕ್ಕೆ ಸಿಲುಕುವ ಆನೆಗಳು ಅತ್ತಿತ್ತ ಓಡಾಡುವ ರಭಸಕ್ಕೆ ತೋಟ-ಗದ್ದೆಗಳಲ್ಲಿ ಬೆಳೆ ನಾಶವಾ ಗುತ್ತಿದೆ, ಮಾನವ ಪ್ರಾಣವೂ ಹಾನಿಯಾಗುತ್ತದೆ. ಆನೆಗಳು ತೋಟ ದಲ್ಲಿದ್ದಾಗ ಪಟಾಕಿ ಹೊಡೆಯ ಬಾರದು. ಬೆದರಿ ಓಡಾಡುವ ಆನೆ ಗಳು ಪಕ್ಕದ ತೋಟಕ್ಕೆ ನುಗ್ಗಿ ಹಾನಿ ಯಾಗುತ್ತದೆ. ಆನೆ ಬರುವ ಹಾದಿ ಯಲ್ಲಿ ರಸ್ತೆ ದಾಟುವಾಗ ಫೋಟೋ ಕ್ಲಿಕ್ಕಿಸುವ ಹುಚ್ಚು ಕೆಲವರಲ್ಲಿದ್ದು ಆಗಲೂ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತ ವಾಗಿದೆ. “ಕಾಡಾನೆಗಳ ಆವಾಸಸ್ಥಾನ ಇಂದು ಕಿರಿದಾಗಿದೆ. ಛಿದ್ರವಾಗಿದೆ. ಅವು ಸಂಚರಿಸುವ ಪಥದಲ್ಲೂ ರೈಲು ಹಳಿಯೋ ಕಟ್ಟಡವೋ ತೋಟವೊ ನಿರ್ಮಾಣವಾಗಿವೆ. ಕಟ್ಟೇಪುರ ಅರಣ್ಯದಲ್ಲಿ ಬಿದಿರು ಬೆಳೆಯೂ ಕಡಿಮೆಯಾಗಿದೆ. ಹಾಗಾಗಿ, ಆನೆಗಳು ಆಹಾರ ಅರಸುತ್ತಾ ಗ್ರಾಮದತ್ತ, ನಾಡಿನತ್ತ ಸಂಚಾರ ಆರಂಭಿಸಿವೆ ಎಂದು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೊಡ್ಲಿಪೇಟೆಯ ವನ್ಯಜೀವಿ ಸಂರಕ್ಷಕ ನಿಶಾಂತ್ ಪಿ.ಬೆಲ್ಲದ್ ಮಾನವ ಹಾಗೂ ವನ್ಯಜೀವಿ ನಡುವಿನ ತಿಕ್ಕಾಟಕ್ಕೆ ಯಾವುದೇ ಶಾಶ್ವತ ಪರಿ ಹಾರವಿಲ್ಲ. ನಾವು ಪ್ರಕೃತಿಯ ವ್ಯವಸ್ಥೆಯನ್ನು ಅಸ್ತವ್ಯಸ್ತ ಮಾಡಿರುವ ಕಾರಣದಿಂದ ನಮಗೆ, ಪರಿಸರಕ್ಕೆ ಹಾಗೂ ವನ್ಯಜೀವಿಗಳಿಗೆ ತೊಂದರೆ ಇಲ್ಲದೆ ಬದುಕುವುದು ಕಷ್ಟ. ಈ ಸಮಸ್ಯೆಗೆ ಪರಿಹಾರ ವನ್ಯಜೀವಿಗಳು ಹಾಗೂ ಪರಿಸರ ದೊಂದಿಗೆ ಹೊಂದಿ ಕೊಂಡು ಸಹ ಜೀವನಸಾಗಿಸು ವುದು ಮಾತ್ರ ಎಂದು ಹೇಳುತ್ತಾರೆ.

-ಶ.ಗ. ನಯನತಾರಾ