*ಗೋಣಿಕೊಪ್ಪ, ಮಾ. ೨೪: ಪೊನ್ನಂಪೇಟೆ, ವೀರಾಜಪೇಟೆ ತಾಲೂಕು ಸಂಜೀವಿನಿ ಒಕ್ಕೂಟ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಆಟೋಟ ಸ್ಪರ್ಧೆಗೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹೂ ತುಂಬಿದ ಮಣ್ಣಿನ ಮಡಿಕೆಯನ್ನು ಒಡೆಯುವ ಮೂಲಕ ಚಾಲನೆ ನೀಡಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಹಳೆಯ ಕಟ್ಟಡದ ಆವರಣದಲ್ಲಿ ಸಂಜೀವಿನಿ ಒಕ್ಕೂಟ ಮಹಿಳೆಯರಿಗಾಗಿ ಬಲೂನ್ ಒಡೆಯುವುದು, ಮಡಿಕೆ ಒಡೆಯುವುದು, ಬಾಂಬ್ ಇನ್ ದ ಸಿಟಿ, ಹಗ್ಗ ಜಗ್ಗಾಟ, ಜಾನಪದ ನೃತ್ಯಗಳು ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ಅಯೋಜಿಸಿತ್ತು. ಗ್ರಾ.ಪಂ. ಉಪಾಧ್ಯಕ್ಷ ಮಂಜುಳಾ ಎಂ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಸದಸ್ಯ ಶರತ್ ಕಾಂತ್, ಸಂಜೀವಿನಿ ಒಕ್ಕೂಟದ ತಾಲೂಕು ಸಂಯೋಜಕಿ ವರಲಕ್ಷಿö್ಮ ಹಾಜರಿದ್ದರು.

ನಂತರ ನಡೆದ ಸಭಾ ಕಾರ್ಯಕ್ರಮ ತಾಲೂಕು ಪ್ರಗತಿ ಸಂಜೀವಿನಿ ಸಂಘಟನೆಯ ಅಧ್ಯಕ್ಷ ಪಾರ್ವತಿ ಟಿ.ಎನ್ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಶಾಸಕ ಎ.ಎಸ್. ಪೊನ್ನಣ್ಣ ಭಾಗವಹಿಸಿ, ಈ ಸಮಾಜದಲ್ಲಿರುವ ಲಿಂಗ ತಾರತಮ್ಯವನ್ನು ಹೊರಗಟ್ಟಲು ಮಹಿಳೆಯರ ಹೋರಾಟ ಮುಂದುವರೆಯಬೇಕಾಗಿದೆ ಎಂದರು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ತಿಮ್ಮಯ್ಯ, ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಮಂಜುಳ ಎಂ, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷ ರಜಿನಿ ಎಂಎಸ್, ಸಂಜೀವಿನಿ ಒಕ್ಕೂಟದ ಸಂಯೋಜಕಿ ವರಲಕ್ಷಿö್ಮ ಇದ್ದರು. ಗೀತಾ ನಾಯ್ಡು ನಿರೂಪಿಸಿದರು.