vಹಾಲ್ಟಿಕೆಟ್ ಚೆಕ್ ಮಾಡಿಕೊಳ್ಳಿ.

vಪರೀಕ್ಷಾ ಕೇಂದ್ರಕ್ಕೆ ಒಂದು ಗಂಟೆ ಮುಂಚಿತವಾಗಿ ತಲುಪಿ.

vಜಾಮಿಟ್ರಿ ಬಾಕ್ಸ್ ಜೊತೆಗಿರಲಿ.

vಎರಡು ಉತ್ತಮ ಪೆನ್ ಹಾಗೂ ಅದಕ್ಕೆ ಹೊಂದಿಕೊಳ್ಳುವ ಎರಡು ರಿಫೀಲ್ ಕೈಯಲ್ಲಿ ಇರಲಿ.

vಮಿತವಾಗಿ ಆಹಾರ ಸೇವಿಸಿರಿ. ಭಯ ಆತಂಕ ಬೇಡ.

vಕೈ ಬೆವರುವುದುಂಟು ಒಂದು ಕರ್ಚಿಪ್ ಇರಲಿ.

vಲಾಂಗ್ ಸ್ಕೇಲ್, ಪೆನ್ಸಿಲ್, ಎರೇಜರ್ ಹಾಗೂ ಮೆಂಡರ್ ಇರಲಿ.

vಪರೀಕ್ಷಾ ಕೇಂದ್ರದಲ್ಲಿ ಅರ್ಧ ಗಂಟೆ ಮೊದಲು ಓದು ನಿಲ್ಲಿಸಿ.

vಹಾಳೆ ಇತರ ಯಾವುದೇ ಬರವಣಿಗೆ ಪರೀಕ್ಷಾ ಕೊಠಡಿಗೆ ಒಯ್ಯುವುದು ಬೇಡ.

vಚಿಕ್ಕ ಬಾಟಲ್ ನೀರು ಜೊತೆಗಿರಲಿ.

vಪರೀಕ್ಷಾ ಹಾಲ್‌ನಲ್ಲಿ ರಿಜಿಸ್ಟರ್ ನಂಬರ್ ಖಾತ್ರಿಪಡಿಸಿಕೊಳ್ಳಿ.

vಕೊಠಡಿಯೊಳಗೆ ಕುಳಿತು ನಂತರ ಐದು ನಿಮಿಷ ರಿಲ್ಯಾಕ್ಸ್ ಆಗಿ.

vಶಾಂತವಾಗಿರಿ. ಆತಂಕ, ದುಗುಡ, ಉದ್ವೇಗ, ಭಯ ಬೇಡ.

vಉತ್ತರ ಪತ್ರಿಕೆಯ ಮೇಲೆ ನೋಂದಣಿ ಸಂಖ್ಯೆ ಮತ್ತು ಇತರ ಮಾಹಿತಿ ಭರ್ತಿ ಮಾಡಿ.

vಕೊಠಡಿ ಮೇಲ್ವಿಚಾರಕರಿಗೆ ಮಾಹಿತಿ ನೀಡಿ.

vಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ. ನಂತರ ತಿಳಿದ ಪ್ರಶ್ನೆಗಳಿಗೆ ಉತ್ತರವನ್ನು ಯೋಚಿಸಿ ಬರೆಯಿರಿ.

vಪರೀಕ್ಷೆ ನಿಯಮಗಳ ಬಗ್ಗೆ ಅರಿತುಕೊಳ್ಳಿ. ಆತಂಕ ಬೇಡ.

vಸರಳವಾದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ.

vಅನಗತ್ಯ ಸಮಯಹರಣ ಬೇಡ.

vಶುದ್ಧ, ಸ್ಪಷ್ಟ, ನಿಖರ, ನೇರ ಉತ್ತರ ಬರೆಯಿರಿ.

vಪ್ರಶ್ನೆ ಸಂಖ್ಯೆ ಸರಿಯಾಗಿ ನಮೂದಿಸಿ ಅನಗತ್ಯ ಪುರವಣೆ ಕಟ್ಟಬೇಡಿ.

vಉತ್ತರ ಪತ್ರಿಕೆ ಬರೆದ ಮೇಲೆ ಒಮ್ಮೆ ಕೂಲಂಕಶವಾಗಿ, ಕ್ರಮವಾಗಿ ಎಲ್ಲವನ್ನು ಚೆಕ್ ಮಾಡಿಕೊಳ್ಳಿ.

vಪರೀಕ್ಷಾ ಸಮಯ ಮುಗಿಯುವವರೆಗೂ ಪರೀಕ್ಷಾ ಕೊಠಡಿಯಿಂದ ಹೊರಬರಬೇಡಿ.

vಏಕಾಗ್ರತೆಯಿಂದ ಅಧ್ಯಯನ ಕೈಗೊಳ್ಳಿ. ಏಕಾಗ್ರತೆ ಹೆಚ್ಚಿಸಿಕೊಳ್ಳಲು ಮುಂಜಾನೆ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

vಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ತಂದೆ-ತಾಯಿಯರ ಆಶೀರ್ವಾದ ಪಡೆದು ಹೊರಡಿರಿ.

vಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ.

vಯಾವುದೇ ಕಾರಣಕ್ಕೂ ನಿದ್ದೆಗೆಟ್ಟು ಓದಬೇಡಿ. ಇದು ತಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅದು ಪರೀಕ್ಷೆಗೆ ಮಾರಕವಾಗಿ ಪರಿಣಮಿಸಬಹುದು.

vಹಾಸಿಗೆಯ ಮೇಲೆ ಕುಳಿತು ಅಥವಾ ಮಲಗಿ ಓದಬೇಡಿ. ಅಧ್ಯಯನಕ್ಕೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿಕೊಳ್ಳಿ. ಆ ಜಾಗ ಪ್ರಶಾಂತವಾಗಿರಲಿ.

vಒAದು ವಿಷಯದ ಪರೀಕ್ಷೆ ಬರೆದ ನಂತರ ಅದರ ಬಗ್ಗೆ ಚರ್ಚೆ ಬೇಡ. ಮುಂದಿನ ಪರೀಕ್ಷೆಯ ವಿಷಯದಕಡೆ ಗಮನ ಹರಿಸಿ. ಈ ಪರೀಕ್ಷೆ ಅಂತಿಮವೇನಲ್ಲ. ಇದು ಜೀವನದ ಒಂದು ತಿರುವು ಮಾತ್ರ. ಮುಂದಿನ ಜೀವನ ದೊಡ್ಡದಿದೆ.

ಹಾಗಾಗಿ ಪೋಷಕರಾಗಲಿ, ಶಿಕ್ಷಕರಾಗಲಿ, ವಿದ್ಯಾರ್ಥಿಗಳ ಮೇಲೆ ಅಥವಾ ತಮ್ಮ ಮಕ್ಕಳ ಮೇಲೆ ಯಾವುದೇ ರೀತಿಯ ಒತ್ತಡ ಹಾಕಬೇಡಿ. ಅಥವಾ ಆಸೆ, ಆಕಾಂಕ್ಷೆಗಳನ್ನು, ನಿರೀಕ್ಷೆಗಳನ್ನು ಹೇರಬೇಡಿ. ಒಂದುವೇಳೆ ಅವುಗಳನ್ನು ಈಡೇರಿಸಲಾಗದಿದ್ದಲ್ಲಿ ಬೇರೆ ರೀತಿಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದ್ದರಿಂದ ಅವರಿಗೆ ತಮ್ಮ ಆತ್ಮವಿಶ್ವಾಸ ಹಾಗೂ ಧೈರ್ಯದ ಮಾತುಗಳನ್ನಾಡಿ ಕಳುಹಿಸಿ.

ಉತ್ತಮ ಯಶಸ್ಸು ಎಂದೆAದೂ ನಿಮ್ಮದಾಗಿರಲಿ.

- ಆರ್. ಜಯನಾಯಕ್, ಸಹ ಶಿಕ್ಷಕರು, ಸಂಪಾಜೆ ಸಂಯುಕ್ತ ಪ.ಪೂ. ಕಾಲೇಜು, ಸಂಪಾಜೆ. ಮೊ. ೮೨೭೭೨೩೬೦೭೫.