ಮಾಸ್ಕೊ, ಮಾ. ೨೩: ರಷ್ಯಾ ರಾಷ್ಟçದ ರಾಜಧಾನಿ ಮಾಸ್ಕೋವಿನ ಪ್ರಮುಖ ‘ಕೋಕ್ರಸ್ ಸಿಟಿ ಹಾಲ್’ ಮಾಲ್ ಮೇಲೆ ತಾ.೨೨ರ ರಾತ್ರಿ ದಾಳಿ ನಡೆಸಿದ ಶಸ್ತçಸಜ್ಜಿತ ಹಲವು ಐಸಿಸ್ ಉಗ್ರರು ೯೩ ಮಂದಿ ನಾಗರಿಕರನ್ನು ಹತ್ಯೆ ಮಾಡಿ ೧೪೫ ಮಂದಿಗೆ ಗಾಯಗೊಳಿಸಿದ್ದಾರೆ. ಸಂಗೀತ ಕಾನ್ಸರ್ಟ್ ಸಭಾಂಗಣ ಹಾಗೂ ಅದಕ್ಕೆ ಅಂಟಿಕೊAಡಿರುವ ಶಾಪಿಂಗ್ ಸೆಂಟರ್ ಮೇಲೆಯೂ ಗುಂಡಿನ ದಾಳಿ ನಡೆಸಿದ್ದಲ್ಲದೆ, ಬೆಂಕಿ ಹಚ್ಚಿ ಭಸ್ಮ ಮಾಡುತ್ತಿರುವ ದೃಶ್ಯವನ್ನು ಈ ಆಘಾತಕಾರಿ ಘಟನೆಯ ವೀಡಿಯೋದಲ್ಲಿ ಗಮನಿಸಬಹು ದಾಗಿದೆ. ಪಿಕ್ನಿಕ್ ಹೆಸರಿನ ಸಂಗೀತ ಬ್ಯಾಂಡ್‌ವೊAದು ಸಂಗೀತ ಪ್ರದರ್ಶನ ನೀಡಲು ಸಿದ್ಧಗೊಳ್ಳುತ್ತಿದ್ದಾಗ ಘಟನೆ ನಡೆದಿದ್ದು, ಬ್ಯಾಂಡ್ ಸದಸ್ಯರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಪ್ರಮುಖರು ಮಾಹಿತಿ ಇತ್ತಿದ್ದಾರೆ.

ಸಂಗೀತ ಪ್ರದರ್ಶನಕ್ಕೆ ಕಾಯುತ್ತಿದ್ದ ಜನರು ಪ್ರದರ್ಶನದ ವೀಡಿಯೋ ಚಿತ್ರೀಕರಿಸಲು ಸಿದ್ಧಗೊಂಡು ತಮ್ಮ-ತಮ್ಮ ಮೊಬೈಲ್ ಫೋನ್‌ಗಳನ್ನು ಆನ್ ಮಾಡಿಟ್ಟಿದ್ದರು. ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಈ ಸಂದರ್ಭವೇ ಶಸ್ತçಸಜ್ಜಿತ ಅಪರಿಚಿತ ೪ ಉಗ್ರರು ಕ್ರೋಕಸ್ ಸಿಟಿ ಹಾಲ್‌ಗೆ ನುಗ್ಗಿ ದಾಳಿ ನಡೆಸಿದ್ದು, ಘಟನೆಯ ನೂರಾರು ಭಯಾನಕ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೋಕ್ರಸ್ ಹಾಲ್‌ನಲ್ಲಿ ರಕ್ತದ ನಡುವೆ ಬಿದ್ದು ನರಳಾಡುತ್ತಿರುವ ಹಾಗೂ ಸಾವನ್ನಪಿರುವ ಹಲವಾರು ಮಂದಿಯ ದಯನೀಯ ಸ್ಥಿತಿ ವೀಡಿಯೋ ತುಣುಕುಗಳಲ್ಲಿದೆ.

ಸ್ಥಳಕ್ಕಾಗಮಿಸಿದ ತುರ್ತು ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದವು. ೭೦ ಆ್ಯಂಬುಲೆನ್ಸ್ಗಳು ೧೪೫ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕಾರಿಯಾದವು. ಮಾಲ್ ಬೆಂಕಿಗಾಹುತಿಯಾಗುತ್ತಿದ್ದAತೆ ೩ ಹೆಲಿಕಾಪ್ಟರ್‌ಗಳ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದಂತೆ ಒಟ್ಟು ೧೦೦ ಮಂದಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿ ಹೊರತಂದರು.

ಸೂಚನೆ ನೀಡಿದ್ದ ಅಮೇರಿಕ

ಈ ತಿಂಗಳ ಆರಂಭದಲ್ಲಿ, ರಷ್ಯಾದಲ್ಲಿನ ಯುಎಸ್ ರಾಯಭಾರ ಕಚೇರಿಯು, ಮಾಸ್ಕೋದಲ್ಲಿ ದೊಡ್ಡ ಉಗ್ರಗಾಮಿಗಳು ದಾಳಿ ನಡೆಸಬಹುದಾದ ಸಾಧ್ಯತೆಗಳಿದ್ದು, ಅಮೇರಿಕಾದ ನಾಗರಿಕರು ಹೆಚ್ಚಿನ ಸಂಖೆಯಲ್ಲಿ ರಷ್ಯಾದಲ್ಲಿ ಸೇರದಂತೆ ಸೂಚನೆ ನೀಡಿತ್ತು. ಐಸಿಸ್ ಉಗ್ರರು ಕಾನ್ಸರ್ಟ್ ಹಾಲ್‌ವೊಂದರ ಮೇಲೆಯೇ ದಾಳಿ ನಡೆಸಲಿದ್ದಾರೆ ಎಂದೂ ಊಹಿಸಿದ್ದ ರಾಯಭಾರ ಕಚೇರಿಯು ಗುಪ್ತಚರದಳದಿಂದ ಈ ಮಾಹಿತಿ ಲಭಿಸಿದೆ ಎಂದು ಪ್ರಕಟಣೆಯನ್ನು ನೀಡಿತ್ತು.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕಳೆದ ವಾರವಷ್ಟೆ ಮುಂದಿನ ೬ ವರ್ಷಗಳ ಅವಧಿಗೆ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು. ನೆರೆಯ ಉಕ್ರೇನ್‌ನೊಂದಿಗಿನ ಯುದ್ಧದ ಮೇಲೆ ಗಮನ ಕೇಂದ್ರೀಕರಿಸಿದ ಪುಟಿನ್, ರಷ್ಯನ್ನರು ಮತದಾನಕ್ಕೆ ಹೋಗುವ ಮೊದಲು ರಾಷ್ಟ್ರೀಯ ಭದ್ರತೆಯ ಸಂದೇಶವನ್ನು ಸಾರಿದ್ದರು. ದುರ್ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು ಗಾಯಳುಗಳ ಶೀಘ್ರ ಗುಣಮುಖಕ್ಕೆ ಹಾರೈಸಿದರು.

ಆರೋಪಿಗಳು ಸೆರೆ

ಭಯೋತ್ಪಾದನಾ ಕೃತ್ಯ ನಡೆಸಿದ್ದಾರೆನ್ನಲಾದ ಶಸ್ತçಸಜ್ಜಿತ ೪ ಮಂದಿ ಹಾಗೂ ಅವರುಗಳ ೭ ಮಂದಿ ಸಹಚರರನ್ನು ತಾ.೨೩ ರಂದು ಸೆರೆಹಿಡಿಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ. ಈ ಪೈಕಿ ಇಬ್ಬರು ಘಟನೆ ನಡೆದ ಸ್ಥಳದಿಂದ ಸುಮಾರು ೩೦೦ಕಿ.ಮೀ ದೂರದಲ್ಲಿ ವಾಹನದಲ್ಲಿ ಪರಾರಿಯಾಗುತ್ತಿದ್ದಾಗ ಭದ್ರತಾ ಪಡೆಗಳು ಇವರುಗಳನ್ನು ಅಟ್ಟಾಡಿಸಿದ್ದು ಈ ಸಂದರ್ಭ ವಾಹನ ಪಲ್ಟಿಯಾಗದ ಪರಿಣಾಮ ಓರ್ವನನ್ನು ಸ್ಥಳದಲ್ಲಿ ಬಂಧಿಸಲಾಗಿದೆ. ಮತ್ತೋರ್ವ ಓಡಿ ಪರಾರಿಯಾಗಲು ಯತ್ನಿಸಿದ ಸಂದರ್ಭ ಅವನನ್ನೂ ಭದ್ರತಾ ಪಡೆ ಸೆರೆಹಿಡಿದಿದ್ದಾರೆಂದು ಮಾಸ್ಕೋ ಜನಪ್ರತಿನಿಧಿ ಅಲೆಕ್ಸಾಂಡರ್ ಕಿನ್‌ಸ್ಟೆöÊನ್ ಮಾಹಿತಿ ಇತ್ತಿದಾರೆ. ವಾಹನದಲ್ಲಿ ತಜಾಕಿಸ್ತಾನದ ಹಲವು ಪಾಸ್‌ಪೋರ್ಟ್ಗಳು ಲಭ್ಯವಿರುವುದಾಗಿಯೂ ಮಾಹಿತಿ ಲಭಿಸಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ರಾಷ್ಟçಗಳ ಪ್ರಮುಖರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.