ಮಡಿಕೇರಿ, ಮಾ. ೨೪: ಕೆರೆ ಮೂಲಕ ಕಾಫಿ ತೋಟಕ್ಕೆ ನೀರು ಹಾಯಿಸುವ ಸಂದರ್ಭ ಸ್ಪಿçಂಕ್ಲರ್ ಯಂತ್ರವನ್ನು ವಶಪಡಿಸಿಕೊಳ್ಳಲು ಬಂದ ಅಧಿಕಾರಿಗಳಿಗೆ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮುಕ್ಕೋಡ್ಲು ಗ್ರಾಮದ ತಡಿಯಪ್ಪನ ಚಿಮ್ಮಿ ಎಂಬವರು ತಮ್ಮ ತೋಟಕ್ಕೆ ನದಿಯಿಂದ ಕೆರೆಗೆ ನೀರು ಪಂಪ್ ಮಾಡಿಕೊಂಡು ಬಳಿಕ ತೋಟಕ್ಕೆ ನೀರು ಹಾಯಿಸುತ್ತಿದ್ದ ವೇಳೆಯಲ್ಲಿ ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ರಮೇಶ್ ಬಾಬು, ಕಂದಾಯ ಪರಿವೀಕ್ಷಕ ಪ್ರಸಾದ್, ಕಂದಾಯ ಲೆಕ್ಕಾಧಿಕಾರಿ ಅಮೃತ ಸ್ಥಳಕ್ಕಾಗಮಿಸಿ ಜಿಲ್ಲಾಧಿಕಾರಿ ಆದೇಶವಿರುವುದರಿಂದ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ನದಿ ಹಾಗೂ ನದಿಮೂಲಗಳಿಂದ ನೀರು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆ ಸ್ಪಿçಂಕ್ಲರ್ ಮೋಟರ್ ಅನ್ನು ವಶಕ್ಕೆ ನೀಡುವಂತೆ ಸೂಚಿಸಿದ್ದಾರೆ.
ಈ ಸಂದರ್ಭ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಿ.ಜೆ.ಪಿ. ಪ್ರಮುಖ ಶಾಂತೆಯAಡ ರವಿಕುಶಾಲಪ್ಪ ಅಧಿಕಾರಿಗಳ ಧೋರಣೆಯನ್ನು ಖಂಡಿಸಿದರು. ಕಾಫಿ ಬೆಳೆಗಾರರು ಸಂಕಷ್ಟದಲ್ಲಿ ಕಾಫಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಹವಾಮಾನ ವೈಪರಿತ್ಯದ ಪರಿಣಾಮ ಫಸಲು ನಾಶದ ಭೀತಿ ಇದೆ. ಆರ್ಥಿಕ ಸಂಕಷ್ಟ ಉಂಟಾಗುವ ಸನ್ನಿವೇಶದಲ್ಲಿ ಅಧಿಕಾರಿಗಳು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.
ನಂತರ ಅಧಿಕಾರಿಗಳು ನೀರು ಹಾಯಿಸದಂತೆ ಚಿಮ್ಮ ಅವರಿಗೆ ನೋಟೀಸ್ ನೀಡಿ ಸ್ಥಳದಿಂದ ತೆರಳಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿಕುಶಾಲಪ್ಪ, ಕಾಫಿ ಕೃಷಿ ಜಿಲ್ಲೆಯ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರ ವಹಿಸಿದೆ. ಆದರೆ, ಇದೀಗ ಬೆಳೆಗಾರರ ಕತ್ತು ಹಿಸುಕುವ ಕೆಲಸ ಈ ಆದೇಶದ ಮೂಲಕವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಬಳಿ ನಿಯೋಗ ತೆರಳಿ ಆದೇಶ ಹಿಂಪಡೆಯಲು ಆಗ್ರಹಿಸಲಾಗುವುದು ಎಂದು ತಿಳಿಸಿದರು.