ಮಡಿಕೇರಿ, ಮಾ. ೨೪: ಜಿಲ್ಲಾ ಪೊಲೀಸ್ ಸಿಬ್ಬಂದಿ ಜಿತೇಂದ್ರ ಅವರು ತೆಲಂಗಾಣದ ಫುಲೇಲ ಗೋಪಿ ಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆದ ರಾಷ್ಟçಮಟ್ಟದ ಪೊಲೀಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಸೇನಾಪಡೆ. ಭಾರತೀಯ ರೈಲ್ವೆ. ಅರೆಸೇನಾ ಪಡೆ. ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು ೨೮ ರಾಜ್ಯ ಹಾಗೂ ವಿವಿಧ ಘಟಕಗಳು ಈ ಕ್ರೀಡೆಯಲ್ಲಿ ಭಾಗವಹಿಸಿದ್ದು, ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಜಿತೇಂದ್ರ ರೈ ಡಬಲ್ಸ್ನಲ್ಲಿ ಕಂಚಿನ ಪದಕ ಹಾಗೂ ಮಿಕ್ಸ್ ಡಬಲ್ಸ್ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಜಿಲ್ಲಾ ಶಸಸ್ತç ದಳದಲ್ಲಿ ಎ.ಆರ್.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.