ಚೆಯ್ಯಂಡಾಣೆ, ಮಾ. ೨೩: ತೋಟಕ್ಕೆ ತೆರಳಿದ ಸಂದರ್ಭ ಕಾಡಾನೆ ದಾಳಿಗೆ ಬೆಳೆಗಾರರೊಬ್ಬರು ಬಲಿಯಾದ ಘಟನೆ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಕಕ್ಕಬ್ಬೆ ನಾಲಡಿ ಗ್ರಾಮದ ನಿವಾಸಿ ಕಂಬೆಯAಡ ರಾಜ ದೇವಯ್ಯ (೫೯)ಕಾಡಾನೆ ತುಳಿತಕ್ಕೆ ಒಳಗಾಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಶನಿವಾರ ಮುಂಜಾನೆ ನಾಲಡಿ ಗ್ರಾಮದಲ್ಲಿರುವ ತಮ್ಮ ಮನೆಯ ಸಮೀಪದ ತೋಟಕ್ಕೆ ಸಾಕು ನಾಯಿಯೊಂದಿಗೆ ತೆರಳಿದಾಗ ದಿಢೀರ್ ಕಾಣಿಸಿಕೊಂಡ ಆನೆ ರಾಜ ದೇವಯ್ಯ ಅವರ ಮೇಲೆ ದಾಳಿ ನಡೆಸಿದೆ. ಇದರಿಂದ ರಾಜ ದೇವಯ್ಯ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಜೊತೆ ತೆರಳಿದ್ದ ನಾಯಿ ಮಾತ್ರ ಮನೆಗೆ ಹಿಂತಿರುಗಿದ್ದನ್ನು ಕಂಡ ರಾಜ ದೇವಯ್ಯ ಅವರ ಪತ್ನಿ ಪತಿಯನ್ನು ಹುಡುಕುತ್ತಾ ತೋಟಕ್ಕೆ ತೆರಳುವ ಸಂದರ್ಭ ಕಾಡಾನೆಯೊಂದನ್ನು ಕಂಡು ರಾಜ ದೇವಯ್ಯ ಅವರಿಗೆ ಕರೆ ಮಾಡಿದ್ದಾರೆ. ಆದರೆ ರಾಜದೇವಯ್ಯ ಕರೆ ಸ್ವೀಕರಿಸದೆ ಇದ್ದಾಗ ಅನುಮಾನಗೊಂಡ ಪತ್ನಿ ತಮ್ಮ ಮಗನಿಗೆ ಮಾಹಿತಿ ನೀಡಿದ್ದಾರೆ. ಮಗ ತೋಟಕ್ಕೆ ತೆರಳಿದಾಗ ರಾಜ ದೇವಯ್ಯ ಅವರ ಮೃತದೇಹ ತೋಟದಲ್ಲಿ ಪತ್ತೆಯಾಗಿದೆ. ಒಟ್ಟು ಮೂರು ಕಾಡಾನೆಗಳು ತೋಟದಲ್ಲಿ ಇದ್ದವು ಎಂದು ಹೇಳಲಾಗುತ್ತಿದೆ.
ರಾಜ ದೇವಯ್ಯ ಅವರು ಬೆಳೆಗಾರರಾಗಿದ್ದು, ಕಕ್ಕಬೆಯಲ್ಲಿ ಸ್ವಂತ ಆಟೋ ರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದರು. ಮೃತ ದೇಹದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಈ ವಿಭಾಗದಲ್ಲಿ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ನಡೆದಾಡಲು ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಈ ಹಿಂದೆ ರಾಜ ದೇವಯ್ಯ ಅವರ ಸಹೋದರನ ಮೇಲು ಕಾಡಾನೆ ದಾಳಿ ನಡೆಸಿ ಕಾಲು ಮುರಿತಕ್ಕೊಳಗಾಗಿ ಪ್ರಾಣಪಾಯದಿಂದ ಪಾರಾಗಿದ್ದರು. ಈ ಭಾಗದಲ್ಲಿ ಹಲವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಅಲ್ಲದೆ ಗ್ರಾಮದ ಬೆಳೆಗಾರರ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿದ್ದು ಇದರಿಂದ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಅರಣ್ಯ ಇಲಾಖೆ ಶಾಶ್ವತ ಚೆಯ್ಯಂಡಾಣೆ, ಮಾ. ೨೩: ತೋಟಕ್ಕೆ ತೆರಳಿದ ಸಂದರ್ಭ ಕಾಡಾನೆ ದಾಳಿಗೆ ಬೆಳೆಗಾರರೊಬ್ಬರು ಬಲಿಯಾದ ಘಟನೆ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಕಕ್ಕಬ್ಬೆ ನಾಲಡಿ ಗ್ರಾಮದ ನಿವಾಸಿ ಕಂಬೆಯAಡ ರಾಜ ದೇವಯ್ಯ (೫೯)ಕಾಡಾನೆ ತುಳಿತಕ್ಕೆ ಒಳಗಾಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಶನಿವಾರ ಮುಂಜಾನೆ ನಾಲಡಿ ಗ್ರಾಮದಲ್ಲಿರುವ ತಮ್ಮ ಮನೆಯ ಸಮೀಪದ ತೋಟಕ್ಕೆ ಸಾಕು ನಾಯಿಯೊಂದಿಗೆ ತೆರಳಿದಾಗ ದಿಢೀರ್ ಕಾಣಿಸಿಕೊಂಡ ಆನೆ ರಾಜ ದೇವಯ್ಯ ಅವರ ಮೇಲೆ ದಾಳಿ ನಡೆಸಿದೆ. ಇದರಿಂದ ರಾಜ ದೇವಯ್ಯ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಜೊತೆ ತೆರಳಿದ್ದ ನಾಯಿ ಮಾತ್ರ ಮನೆಗೆ ಹಿಂತಿರುಗಿದ್ದನ್ನು ಕಂಡ ರಾಜ ದೇವಯ್ಯ ಅವರ ಪತ್ನಿ ಪತಿಯನ್ನು ಹುಡುಕುತ್ತಾ ತೋಟಕ್ಕೆ ತೆರಳುವ ಸಂದರ್ಭ ಕಾಡಾನೆಯೊಂದನ್ನು ಕಂಡು ರಾಜ ದೇವಯ್ಯ ಅವರಿಗೆ ಕರೆ ಮಾಡಿದ್ದಾರೆ. ಆದರೆ ರಾಜದೇವಯ್ಯ ಕರೆ ಸ್ವೀಕರಿಸದೆ ಇದ್ದಾಗ ಅನುಮಾನಗೊಂಡ ಪತ್ನಿ ತಮ್ಮ ಮಗನಿಗೆ ಮಾಹಿತಿ ನೀಡಿದ್ದಾರೆ. ಮಗ ತೋಟಕ್ಕೆ ತೆರಳಿದಾಗ ರಾಜ ದೇವಯ್ಯ ಅವರ ಮೃತದೇಹ ತೋಟದಲ್ಲಿ ಪತ್ತೆಯಾಗಿದೆ. ಒಟ್ಟು ಮೂರು ಕಾಡಾನೆಗಳು ತೋಟದಲ್ಲಿ ಇದ್ದವು ಎಂದು ಹೇಳಲಾಗುತ್ತಿದೆ.
ರಾಜ ದೇವಯ್ಯ ಅವರು ಬೆಳೆಗಾರರಾಗಿದ್ದು, ಕಕ್ಕಬೆಯಲ್ಲಿ ಸ್ವಂತ ಆಟೋ ರಿಕ್ಷಾ ಓಡಿಸುತ್ತಾ ಜೀವನ ಸಾಗಿಸುತ್ತಿದ್ದರು. ಮೃತ ದೇಹದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಈ ವಿಭಾಗದಲ್ಲಿ ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ನಡೆದಾಡಲು ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಈ ಹಿಂದೆ ರಾಜ ದೇವಯ್ಯ ಅವರ ಸಹೋದರನ ಮೇಲು ಕಾಡಾನೆ ದಾಳಿ ನಡೆಸಿ ಕಾಲು ಮುರಿತಕ್ಕೊಳಗಾಗಿ ಪ್ರಾಣಪಾಯದಿಂದ ಪಾರಾಗಿದ್ದರು. ಈ ಭಾಗದಲ್ಲಿ ಹಲವರ ಮೇಲೆ ಕಾಡಾನೆ ದಾಳಿ ನಡೆಸಿದೆ. ಅಲ್ಲದೆ ಗ್ರಾಮದ ಬೆಳೆಗಾರರ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿದ್ದು ಇದರಿಂದ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಅರಣ್ಯ ಇಲಾಖೆ ಶಾಶ್ವತ ಮೃತ ರಾಜ ದೇವಯ್ಯ ಅವರ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ೫ ಲಕ್ಷ ರೂಗಳ ಚೆಕ್ಕನ್ನು ತುರ್ತು ಪರಿಹಾರವಾಗಿ ಡಿಎಫ್ಓ ಭಾಸ್ಕರ್ ಹಸ್ತಾಂತರಿಸಿದರು. ಮೃತದೇಹವನ್ನು ಸ್ಥಳದಿಂದ ಪಿಕ್ ಅಪ್ ವಾಹನದಲ್ಲಿ ತಂದು ನಂತರ ಕಕ್ಕಬೆ ಪಟ್ಟಣದಲ್ಲಿ ಇರಿಸಿ ಆಂಬುಲೆನ್ಸ್ ಮುಖಾಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು. ಕೆಲಕಾಲ ಕಕ್ಕಬೆ ಪಟ್ಟಣದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಪೊಲೀಸರು ಸೂಕ್ತ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.