ಮಡಿಕೇರಿ, ಮಾ. ೨೩: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅನೆಚೌಕೂರು ವನ್ಯಜೀವಿ ವಲಯದ ಗಣಗೂರು ಶಾಖೆಯ ತಾವರೆಕೆರೆ ಅರಣ್ಯ ಪ್ರದೇಶದಲ್ಲಿ ೧೨ ರಿಂದ ೧೩ ವರ್ಷದ ಹೆಣ್ಣು ಹುಲಿಯ ಕಳೇಬರ ಪತ್ತೆಯಾಗಿದೆ. ವಯೋಸಹಜ ಅಥಾವ ಬೇರೆ ಪ್ರಾಣಿಯೊಂದಿಗೆ ಕಾದಾಟದಿಂದ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಶಂಕಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಘಟನಾ ಸ್ಥಳಕ್ಕೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್. ದಯಾನಂದ್, ಮುಖ್ಯ ವೈದ್ಯಾಧಿಕಾರಿ ರಮೇಶ್, ಭವಿಷ್ಯ ಕುಮಾರ್, ರಾಷ್ಟಿçÃಯ ಹುಲಿ ಪ್ರಾಧಿಕಾರದ ಸದಸ್ಯ ಬೋಸ್ ಮಾದಪ್ಪ, ಮುಖ್ಯ ವನ್ಯಜೀವಿ ಪಾರಿಪಾಲಕ ತಮ್ಮು, ಗ್ರಾ.ಪಂ. ಸದಸ್ಯ ನವೀನ್, ವಲಯ ಅರಣ್ಯಾಧಿಕಾರಿ ಡಿ. ದೇವರಾಜು ಹಾಜರಿದ್ದರು.