ಮಡಿಕೇರಿ, ಮಾ. ೨೨: ಕರ್ನಾಟಪ ಪರಂಪರೆ ರ‍್ಯಾಲಿ (ಕರ್ನಾಟಕ ಹೆರಿಟೇಜ್ ರ‍್ಯಾಲಿ) ಎಂಬ ಕಾರ್ಯಕ್ರಮ ಹಮ್ಮಿಕೊಂಡು, ಆ ಮೂಲಕ ಅಗ್ನಿಪಥ್ ಯೋಜನೆ ಯ ಮಾಹಿತಿ, ದೇಶಸೇವೆಯ ಮಹತ್ವ ಹಾಗೂ ಕರ್ನಾಟಕದ ಪರಂಪರೆ ಯನ್ನು ಪರಿಚಯಿಸುವ ಪ್ರಯತ್ನಕ್ಕೆ ಮುಂದಾಗಿರುವ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಭಾರತೀಯ ನೌಕಾ ಪಡೆಯ ತಂಡ ಇಂದು ನಗರದಲ್ಲಿರುವ ವೀರ ಸೇನಾನಿಗಳ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡಿತು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಮಂಗೇರಿರ ಮುತ್ತಣ್ಣ, ಅಜ್ಜಮಾಡ ದೇವಯ್ಯ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ನೌಕಾದಳದ ಕಮಾಂಡರ್ ಎನ್‌ಎಸ್‌ಪಿ ಸಿಂಗ್, ಕಮಾಂಡರ್ ರವೀಂದ್ರ ಕುಮಾರ್, ಸಂಯೋಜಕರಾದ ಲೆಫ್ಟಿನೆಂಟ್ ಕಮಾಂಡರ್ ಕುಂಚೆಟ್ಟಿರ ಸುಬ್ಬಯ್ಯ ಮತ್ತಿತರ ಅಧಿಕಾರಿಗಳು ಗೌರವ ನಮನ ಸಲ್ಲಿಸಿದರು. ತಾ. ೨೩ ರಂದು (ಇಂದು) ಬಾಲಭವನ ಹಾಗೂ ಶಕ್ತಿ ವೃದ್ಧಾಶ್ರಮದಲ್ಲಿ ದೇಣಿಗೆ ಸಂಗ್ರಹ ಅಭಿಯಾನ ಮಾಡಲಾಗುತ್ತದೆ ಎಂದು ಕುಂಚೆಟ್ಟಿರ ಸುಬ್ಬಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.ವೃದ್ಧಾಶ್ರಮದಲ್ಲಿ ದೇಣಿಗೆ ಸಂಗ್ರಹ ಅಭಿಯಾನ ಮಾಡಲಾಗುತ್ತದೆ ಎಂದು ಕುಂಚೆಟ್ಟಿರ ಸುಬ್ಬಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.